Archive for the 'ಕವಿತೆಗಳಲ್ಲದ ಕವಿತೆ.' Category

19
Apr
07

ಒಲವಿನ ಗೆಳತಿ.

 

ಹೊಸಗನಸುಗಳ ಹೊತ್ತ ಆ ನಿನ್ನ ಬೊಗಸೆ ಕಂಗಳ
ಮೊಗವು ಅರಳಿತ್ತು ನನ್ನ ಕಂಡು.
ನಗುನಗುತ ನೀ ನನ್ನ ಬಳಿಗೆ ಬಂದಾಗ
ಮನವು ಪುಳಕಗೊಂಡಿತ್ತು ನಿನ್ನ ಕಂಡು.

ನನಗಂತ ಅರಿವಿಲ್ಲ ,ಮುಜುಗರ ನಮ್ಮ ಬಳಿ-
ಸುಳಿಯಲಿಲ್ಲ, ಎಂಥ ಗೆಳೆತನ ನಮ್ಮದೆಂದು.
ದೂರ ಸರಿವ ಭಯವಿಲ್ಲ, ಅಪಾರ್ಥಗಳ ಸುಳಿವಿಲ್ಲ
ಒಲವಿನರಸಿ ಬಂದ ಗೆಳೆತನ ನಮ್ಮ ದೆಂದು.

ಭಾವನೆಗಳನ್ನ ಹಂಚಿ ಕೊಳ್ಳೊಣ ,ಮನಸುಗಳಿಗೆ
ಮುದ ನೀಡೊಣ ಬಾ ದುಖಃವನೆಲ್ಲ ಮರೆಸಿ.
ನಗುವಾಗ ಜೊತೆಗಿದ್ದು ನಗುವೆ,ದುಖಃದಲಿ
ನಿನ್ನೊಂದಿಗಿದ್ದು ಎಂದೆಂದು ನಡೆವೆ ಜೊತೆಯಾಗಿ.

ಒಲವನು ಬೀರುವ ಗೆಳತಿ ನಸುನಗುತಿರು ನೀನು
ಸದಾ ಎಲ್ಲ ಮನೆ-ಮನಗಳ ಬೆಳಗುತಾ.
ಬರಡಾದ ಬದುಕುಗಳಿಗೆ ಜೀವ ತುಂಬುತಾ
ಸಾಗು ಕತ್ತಲ ಬದುಕುಗಳಿಗೆ ಬೆಳಕಾಗುತಾ.

ಒಲವಿನಿಂದ
ಅಮರ

30
Mar
07

ಹಣತೆ ಹಚ್ಚೊಣ ಬನ್ನಿ.

ಎಲ್ಲರ ಬದುಕ ಬೆಳಗುವ ಹಣತೆ ಹಚ್ಚೊಣ ಬನ್ನಿ
ಕತ್ತಲ್ಲ ಬದುಕುಗಳಿಗೆ ಬೆಳಕಾಗುವ ಹಣತೆ ಹಚ್ಚೊಣ ಬನ್ನಿ

ಸೊರಗಿರುವ ಮನಗಳಿಗೆ ಮುದ ನೀಡೊಣ ಬನ್ನಿ
ಬರಿದಾದ ಹೃದಯಗಳಿಗೆ ಪ್ರೀತಿಯ ಧಾರೆ ಎರೆಯೊಣ ಬನ್ನಿ

ಬಡವಾದ ಜೀವಗಳಿಗೆ ಆಸೆರೆಯಾಗೋಣ ಬನ್ನಿ
ತಾನುರಿದು ಜಗವೆಲ್ಲ ಬೆಳಗುವ ಜ್ಯೋತಿಯಾಗೋಣ ಬನ್ನಿ

ನಗುವ ಜಗಕೆಲ್ಲ ಬೀರುತಾ ದುಖಃ ಮರೆಸೋಣ ಬನ್ನಿ
ಹಸಿದ ಹೊಟ್ಟೆಗಳಿಗೆ ಅನ್ನ ನೀಡುವ ಅನ್ನದಾತರಾಗೋಣ ಬನ್ನಿ

ಇದೆ ನಮ್ಮೆಲ್ಲರ ಬದುಕಿನ ಮರ್ಮ, ಈ ಬದುಕಿನ ಧರ್ಮ….

ಒಲವಿನಿಂದ
ಅಮರ

27
Mar
07

ದುಂಡು ಮಲ್ಲಿಗೆಯಂತವರು.

 ಎಲ್ಲ ತಂಗಿರಂತಲ್ಲ ನನ್ನ ಪುಟ್ಟತಂಗಿಯರು,
ನಗುವ ಸೂಸುವ ದುಂಡು ಮಲ್ಲಿಗೆಯಂತವರು.
ಬದುಕಿನ ಹಾದಿಯಲಿ ನನ್ನೊಡನೆ ನಡೆದವರು,
ದುಖಃವ ನುಂಗಿ ಸುಖಃವ ಉಣಿಸಿದವರು.

ಜೊತೆಯಾಗಿ ಹುಟ್ಟಿಲ್ಲ ಜೊತೆಯಾಗಿ ಬೆಳೆದಿಲ್ಲ
ಆದರು ಏನು ಮಮತೆ , ವಾತ್ಸಲ್ಯ.
ನಾನವನ ಹಿರಿಯನಾಗಿ ಬೆಳೆದುದೆ ಅರಿವಿಲ್ಲ .

ಬೊಗಸೆ ಬೊಗಸೆ ಪ್ರೀತಿಯ ಅಮೃತಧಾರೆ ಎರೆವರು
ನಸುನಗುತ ನನ್ನನ್ನ ಹುರುದುಂಬಿಸುವರು.
ನನ್ನ ಕನಸುಗಳಿಗೆಲ್ಲ ಅಡಿಪಾಯ ಇತ್ತವರು.
ಬದುಕ ಹಸನಾಗಿಸಲು ನನ್ನ ಕೂಡ ನಿಂತವರು.

ಇವರು ನನ್ನ ಪುಟ್ಟ ತಂಗಿಯರಲ್ಲ …. “ತಾಯಂದಿರು”

-ಅಮರ




ಯಾವಾಗ ಬರೆದದ್ದು.

ಈ ತಿಂಗಳ ಪಂಚಾಂಗ.

May 2012
M T W T F S S
« Dec    
 123456
78910111213
14151617181920
21222324252627
28293031  

p

Powered by eSnips.com

Follow

Get every new post delivered to your Inbox.