25
ಮಾರ್ಚ್
07

ಮಧುರ ಮೈತ್ರಿ.

 

ಈ ಜೀವನವೆ ಒಂಥರಾ ವಿಚಿತ್ರ ನೋಡು, ನಾವು ಯಾವುದನ್ನ ಇಷ್ಟ ಪಡ್ತಿವೊ ಅದು ನಮ್ಗೆ ಸಿಗಲ್ಲ , ಅದು ಸಿಗುತ್ತೆ ಅನ್ನೊ ಆಸೆ ಸಾಯೊತನಕ ಬತ್ತಲ್ಲ……….. ಅಲ್ವ.

ಎಲ್ಲೊ ಇದ್ದು , ಎಲ್ಲೊ ಬಾಳಿ-ಬದುಕಿ ಸತ್ತೊಗೊ ಜೇವಗಳು ನಾವು.ಆದರು ನನಗೆ ತುಂಬಾ ಅಶ್ಚರ್ಯ ಆಗ್ತಾ ಇದೆ, ನಾವ್ಯಾಕೆ ಈ ಬದುಕಿನ ಪಯಣದಲ್ಲಿ ಭೇಟಿಯಾದ್ವಿ ಅಂತ. ನಾವೇನು ಕೂಡ ಬೆಳದವರಲ್ಲ, ಸಂಭಂದಿಕರಲ್ಲ , ಒಂದೆ ಕಡೆ ಕಲಿತವರಲ್ಲ, ಯಾವುದೆ ಕಮ್ಯೂನಿಕೆಷನ್ ಇಲ್ಲದ ಬದುಕಿನ ಅರ್ಧ ದಾರಿ ಸಾಗಿದವರು. ಇವತ್ತು ನಮ್ಮ ಬದುಕು ಎಷ್ಟೊಂದು ಚೇಂಜ್ ಅನ್ನಿಸುತ್ತೆ ಅಲ್ವ. ನಾವು ನಡೆದು ಬಂದ ಹೇಜ್ಜೆ ಗುರುತುಗಳೆಲ್ಲ ಮಾಸಿ ಹೊಗಿವೆ , ಹೊಸದಾಗಿ ಹೆಜ್ಜೆ ಹಾಕೊದಕ್ಕೆ ಸಿದ್ದವಾಗಿದ್ದೆವೆ.

ಇದನ್ನ ಯಾವ ಸಂಭಂದ ಅನ್ನಲ್ಲಿ…….. ಯಾವ ಜನ್ಮದ ಮೈತ್ರಿ ಅನ್ನಲಿ. ನಮ್ಮದು ಯಾವ ಸಂಭಂದದಿಂದಲು ಬಂದಿಸಲಾಗದ ಬೆಸುಗೆ , ಅದು ಇತಿ-ಮಿತಿಗಳೆ ಇಲ್ಲದ ರೂಪ. ಎಲ್ಲಾ ಸಂಭಂದಕ್ಕೂ ಅದರದ್ದೆ ಚೌಕಟ್ಟು ,ಮಿತಿಗಳು ಬೆಳೆಯುತ್ತಾ ಹೋಗುತ್ತವೆ. ನಮ್ಮದು ಸಂಭಂದವನ್ನು ಮೀರಿದ ಉನ್ನತ ಭಾಂದವ್ಯ. ಅದರ ಆಳ-ಅಗಲ ಅರಿಯಲು ಯಾರಿಂದ ಸಾದ್ಯ ಅಲ್ವ….. ಅದನ್ನ ಅನುಭವಿಸಿದವನೆ ಬಲ್ಲ.

ಈ ಸಾಲುಗಳು ನನ್ನ ಮನಸ್ಸನ್ನ ಆವರಿಸಿಕೊಂದಿವೆ “ಯಾವ ಜನ್ಮದ ಮೈತ್ರಿ ನಮ್ಮಿಬ್ಬರನ್ನು ಬಂದಿಸಿಹುದೊ ನಾನರಿಯೆ”.. ಈ ಸಾಲುಗಳು ನಮ್ಮನ್ನ ನೋಡಿಯೆ ಬರೆದಿರೊ ಹಾಗೆ ಹಸಿ ಹಸಿ ಯಾಗಿವೆ. ಬದುಕು ಅಂದರೆ ಇದೆನಾ , ಇಷ್ಟೆನಾ ಗೆಳತಿ………..

ನನಗಂತು ಯಾರು ತಿಳಿಯದ ಎಲ್ಲವೂ ಮಸುಕು ಮಸುಕಾದ ಪ್ರಪಂಚದಲ್ಲಿ ಬಿಟ್ಟಂತ್ತಾಗಿದೆ. ನೀನು ಈ ಪ್ರಪಂಚದ ಯಾವ ಮೂಲೆಯ ನನ್ನ ಬರುವಿಕೆಗಾಗಿ ಕಾದು ಕಾತುರದಿ ನಿಂತವಳಂತೆ ಭಾಸವಾಗುತ್ತಿದೆ. ನನ್ನ ಮುಂದೆ ಇರುವುದೆಲ್ಲ ಶೂನ್ಯ, ನನ್ನಗಂತು ಗೊತ್ತಿಲ್ಲ ,ಗುರಿಯಿಲ್ಲ, ಬಂದು ಸೇರುವೆನೆಂಬ ಉತ್ಕಟ ಬಯಕೆ, ಹಂಬಲ ನನ್ನ ಬದುಕಿನ ಹಾದಿಯ ಬೇಳಕಾಗಿದೆ. ಶರೀರದ ತ್ರಾಣವನ್ನೆಲ್ಲ ಹಿರಿ-ಹಿಪ್ಪೆ ಮಾಡುವಷ್ಟು ಚಳಿ, ಮುಂದೆ ಹೆಜ್ಜೆ ಇಡಲು ಆಗದಂತೆ ಮರುಗಟ್ಟಿದೆ ದೇಹ, ಹೃದಯ ಬಡಿತಳು ಹೆಚ್ಚುತ್ತಲಿವೆ. ಮನಸ್ಸು ಮಾತ್ರ ನೀನು ಮುಂದೆ ಬಂದು ನಿಲ್ಲುವೆ ಎಂಬ ಆಸೆ ಮಾತ್ರ ಬಿಟ್ಟಿಲ್ಲ . ಬರುವೆ ತಾನೆ? ಬಂದು ನಿಲ್ಲುವೆ ತಾನೆ ನನ್ನ ಮುಂದೆ ……….ಹಸಿ ಗೂಸು ಮುಗ್ಧ ಕಣ್ಣಗಳಿಂದ ತದೇಖಚಿತ್ತನಾಗಿ ತಾಯಿಯನ್ನು ನೋಡುವಹಾಗೆ ನೋಡಿ ಸಂಭ್ರಮಿಸುವೆ……….

Advertisements

5 Responses to “ಮಧುರ ಮೈತ್ರಿ.”


 1. 1 SIRI
  ಮಾರ್ಚ್ 25, 2007 ರಲ್ಲಿ 11:18 ಫೂರ್ವಾಹ್ನ

  chennagide Amar adre tumba cikkadaytu ansutte.Aaturadalli mugisiiiiiiiiiiida hagide.but really good tumba janara manasina bhavane Akshara roopadalli moodi bandide

 2. ಮಾರ್ಚ್ 25, 2007 ರಲ್ಲಿ 12:20 ಅಪರಾಹ್ನ

  howdalva amar sir…yello irteevi yello belithivi..yaar joteno jagala maadkoteevi yaargo hatra agteevi yarado novige hegalagtivi..aadru ee jeevana ee jagattu e baduku annodu ondu vismaya antha torisuva ondu sundara prayatna…nimma baravinigeya meravanige heege saagali preeti inda[:)]

  somu …

 3. ಮಾರ್ಚ್ 28, 2007 ರಲ್ಲಿ 10:26 ಫೂರ್ವಾಹ್ನ

  ನಮ್ಮದು ಯಾವ ಸಂಭಂದದಿಂದಲು ಬಂದಿಸಲಾಗದ ಬೆಸುಗೆ , ಅದು ಇತಿ-ಮಿತಿಗಳೆ ಇಲ್ಲದ ರೂಪ. ಎಲ್ಲಾ ಸಂಭಂದಕ್ಕೂ ಅದರದ್ದೆ ಚೌಕಟ್ಟು ,ಮಿತಿಗಳು ಬೆಳೆಯುತ್ತಾ ಹೋಗುತ್ತವೆ. ನಮ್ಮದು ಸಂಭಂದವನ್ನು ಮೀರಿದ ಉನ್ನತ ಭಾಂದವ್ಯ. ಅದರ ಆಳ-ಅಗಲ ಅರಿಯಲು ಯಾರಿಂದ ಸಾದ್ಯ ಅಲ್ವ….. ಅದನ್ನ ಅನುಭವಿಸಿದವನೆ ಬಲ್ಲ.
  satya ee maatugaLu. nice write up. ..

 4. 4 Rashmishekar
  ಮೇ 15, 2007 ರಲ್ಲಿ 6:25 ಫೂರ್ವಾಹ್ನ

  Thumba Salalithavagi haridu bandide, sada manasige ondu expectation antha irle beku anisuthe illavadare jeevana nintha neeraguthe sukshmathe kaledu kolluthe, melina salugalallu hodhisikondu hoguva seletha idde ide aa koneya salu nijakku nimma bharahavannu jasthi impressive madiside anisuthe, karana yavude hennirali mathobha gandinalli thanna maguvanna hudukuthiruthalanthe, gandu thaiyannu, sambanda ene irlu bhavanea haladalli inthaha sukshmathe idde iruthe.
  continue with the same Amar————————

  yello ninthu moggu chiguragali endu harasuvavalu.

 5. 5 virinchipriya
  ಅಕ್ಟೋಬರ್ 10, 2007 ರಲ್ಲಿ 3:47 ಫೂರ್ವಾಹ್ನ

  ಹೌದು ನಿಜ, ನಾವು ಯಾವುದನ್ನ ಇಷ್ಟ ಪಡ್ತೀವೋ ಅದು ನಮಗೆ ಸಿಗೋದೇ ಇಲ್ಲ ….. ಆದ್ರೆ ಜೀವನ ಪೂರ್ತಿ ಅದಕ್ಕೋಸ್ಕರ ತುಡಿತಾ ಇರ್ತಿವಿ……. ನಮಗೆ ಗೊತ್ತಿದೆ ರೈಲು ಹೋಗಿ ಬಹಳ ಸಮಯವಾಯ್ತು ಅ೦ತ ಆದ್ರು ಅಲ್ಲೆ ಅಲ್ಲೇ ನಿ೦ತು , ವಿರುದ್ಧ ದಿಕ್ಕನ್ನೇ ನೋಡುತ್ತಾ ಬಾರದ ರೈಲಿಗೆ ಕಾಯ್ತೀವಿ …?( ಎಲ್ಲರೂ ಅಲ್ಲ… ) ಅದು ನಮಗೆ ನಾವೇ ಮಾಡಿಕೊಳ್ಳೊ ಸುಳ್ಳು ಸಮಾಧಾನ….


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s


ಯಾವಾಗ ಬರೆದದ್ದು.

ಈ ತಿಂಗಳ ಪಂಚಾಂಗ.

ಮಾರ್ಚ್ 2007
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
« ಫೆಬ್ರ   ಏಪ್ರಿಲ್ »
 1234
567891011
12131415161718
19202122232425
262728293031  

p

Powered by eSnips.com
Advertisements

%d bloggers like this: