19
ಮೇ
07

1 Kg ಪ್ರೀತಿ… 2 Kg ವಿಶ್ವಾಸ… 4 Kg ನೆಮ್ಮದಿ…

       ಬದುಕಿನ ಹಾದಿನೆ ಹಾಗೆ, ನಾವು ಹೊಗ್ತಾಯಿರೊದು stright ರೊಡ್ ಯಾವುದೆ ಕವಲುಗಳಿಲ್ಲ ಅಂತ ನಮ್ಮದೆ ವೇಗದಲ್ಲಿ ಸಾಗ್ತಿರುತ್ತೆವೆ. ನಾವು ಗಮನಿಸಿಯೆ ಇರಲ್ಲ ನಾವು ನಡೆವ ಹಾದಿಯಲ್ಲಿ ನೂರಾರು ಕವಲುಗಳಿರುತ್ತವೆ ಅಂತ,ನಾವು ಸಾಗೊದು ನೇರವಾಗೆ ಅಂದು ಕೊಂಡಿರುತ್ತೆವೆ. ಆದರೆ ಎಷ್ಟೊಂದು ಜೀವಗಳು ಈ ಹಾದಿಯಲಿ … ಅಕಸ್ಮತ್ತಾಗೋ ಅಥವಾ ನಮಗೊಸ್ಕರನೊ ಕಾಯತಾ ಇರ್ತಾರೆ… ನಿಜವಾಗ್ಲು ಅಶ್ಚರ್ಯ ಆಗುತ್ತೆ. ಒಂದು ಖುಷಿ ಅಂದರೆ ಮೊನ್ನೆ ಮೊನ್ನೆ ತನಕ ಯಾರು ಅಂತ ಗೊತ್ತಲ್ಲದೊರು ಮಾತಾಡಿದ ಮರು ಘಳಿಗೆಯಿಂದ ಇವರು ನಮ್ಗೆ ತುಂಬಾ ಹತ್ತಿರ ವಾದವರು ನಮ್ಗೆ ಸೂರ್ತಿ ಸೆಲೆಯಾದವರು ಅಂತ ಮನಸ್ಸಿಗೆ ಭಾಸವಾಗುತ್ತೆ.ಇದೆನು ವಿಚಿತ್ರ ನೋಡಿ ಆದರು ಇದೆಲ್ಲ ಒಳ್ಳೆದೆನೆ …. ನಮ್ಮ ಭಾವನೆಗಳಿಗೆ ಸ್ಪಂದಿಸುವಂತ , ಹೃದಯಕ್ಕೆ ಹತ್ತಿರವಾದ ಮನಸ್ಸಿನೊರಿ ಸಿಗೊದು ಬಹಳ ವಿರಳ .

         ಈ ಪ್ರಾಕ್ಟಿಕಲ್ ಪ್ರಪಂಚದಲ್ಲಿ ಎಲ್ಲವೂ ಯಾತ್ರಿಕ ಯಾರು ಯಾರನ್ನು ಯಾವುದೆ ಉದ್ದೆಶವಿಲ್ಲದ ಅಥವಾ ಲಾಭವಿಲ್ಲದೆ ಒಂದು ಮಾತು ಆಡೊಲ್ಲ ….ಯಾಕಂದರೆ ಇದು ಕೊಟ್ಟು ತೊಗೊಳ್ಳೊ Business ಪ್ರಪಂಚ, ಇಲ್ಲಿ ಎಲ್ಲಕ್ಕೂ ಬೆಲೆ ಕಟ್ಟೊ ಜನ ಇದ್ದಾರೆ… ಪ್ರೀತಿಗೆ …. ವಿಶ್ವಸಕ್ಕೆ… ಸ್ನೇಹಕ್ಕೆ . ಏನಾದರು ಇವಕ್ಕೆಲ್ಲ ಬೆಲೆ ಇದ್ದಿದ್ದರೆ ಇಂಡಿಯನ್ rupee ನಲ್ಲೊ ಅಮೇರಿಕನ್ ಡಾಲರ್ ನಲ್ಲೊ ಇದ್ದಿದರೆ … ದೇವರಾಣೆ ಇದು ನಮ್ಮ ನಿಮ್ಮ ನಡುವೆ ಇರ್ತಾನೆ ಇರ್ಲಿಲ್ಲ . ಅದು BDA ಸೈಟ್ ತರ ಆಗೊಗ್ತಿತ್ತು. ಅಬ್ಬ !!! ದೇವರು ದೊಡ್ಡವನು ನಿಜವಾಗಿ ನಮ್ಮಂತ ಜನರ ಬಗ್ಗೆ ಸ್ವಲ್ಪನಾದರು ಕರುಣೆ ತೊರ್ಸಿದ್ದಾನೆ, ಅದಕ್ಕೆ ನಾವು ಅವನಿಗೆ ರುಣಿಗಳಾಗಿರ ಬೇಕು.

          ಆ ಪರಿಸ್ಥಿತಿ ನಿನೆಸಿಕೊಂಡರ ನಗು ಬರುತ್ತೆ ನನ್ಗೆ….. ದುಡ್ಡಿರೊರು ಸೀದಾ ಕಾರ್ ತಗಂಡು MG ರೊಡ್ಗೊ ಬ್ರೀಗೆಡ್ ರೊಡ್ಗೊ ಅಥವ ಸೆಂಟ್ರಲ್ … ಪೊರಂ ಕಡೆ ಹೋರಟು ನಮ್ಗೆ 4 Kg ಪ್ರೀತಿ …. 6 Kg ವಿಸ್ವಾಸ ಕೊಡಿ ಅಂತಿದ್ದರೆನೊ…. ನಾವು 10 Kg ಸ್ನೇಹ ತಗಂದಿದ್ದಿವಿ …. ಇದಕ್ಕೆನು offer ಇಲ್ವ 1 Kg ಪ್ರೀತಿನಾದ್ರು ಕೊಡಿ ಅಂತ ತಗಾದೆ ತೆಗಿತಿದ್ದರು. ಕೊನೆಗೆ ನಮ್ಮಂತವರು …. ಮಾರ್ಕೆಟ್ ಗಲ್ಲಿಗಳಲ್ಲಿ ಹಳಸಿದ ಪ್ರೀತಿ….. ನಂಬಲಾಗದ ವಿಶ್ವಾಸ … ಗಳಿಸಲಾಗದ ಸ್ನೇಹ ಕೊಂಡು ಕೊಂಡು ಬರುವಹಾಗಾಗುತ್ತಿತ್ತು. ನಮ್ಮ TIMES OF INDIA ನವರು ಒಳ್ಳೆ ಕಲರ್ ಕಲರ್ add ಹಾಕುತಿದ್ದರು….. ದೀಪಾವಳಿ Offer ನಿಮ್ಮ ಮನೆಗೆ ..ಪಟಾಕಿ ಜೋತೆ 1 Kg ಪ್ರೀತಿನಾ ಕೊಡ್ತಾರೆ …. ಸೆಂಟ್ರಲ್ ನಲ್ಲಿ , hurry up …. this offer ಪ್ರೀತಿ ಇರೊತನಕ ಮಾತ್ರ ಅಂತ…..

        ಸದ್ಯ ಯಾವುದು ಆಗಿಲ್ಲ ಬದುಕೊಡ್ವಿ ಅಬ್ಬ!!!!! , ಎರಡು ಹೊತ್ತಿನ ಗಂಜಿಗಾಗುವಷ್ಟು ದುಡಿದರು, ನಮ್ಮಲ್ಲಿ ಪ್ರೀತಿಗೆ, ಸ್ನೇಹಕ್ಕೆ ,ವಿಶ್ವಾಸಕ್ಕೆ  ಕೊರತೆಯಿಲ್ಲ… ನಾವು ನೆಮ್ಮದಿಯಾಗಿ ನಮ್ಮದೆ ಪುಟ್ಟ ಪ್ರಪಂಚದಲ್ಲಿ ಬದುಕುತ್ತಿದ್ದೆವೆ…. ಎಲ್ಲರನ್ನು ಬದುಕಲು ಬಿಟ್ಟಿದ್ದೆವೆ……… ನಾವೆ ಧನ್ಯ ಅಲ್ವ ???

ಬೇಂದ್ರೆ ಅಜ್ಜನ ಈ ನಾಲುಗಳು ನೆನಪಾದವು ….” ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು “……..ಎಷ್ಟು ಸತ್ಯ ನೋಡಿ……


4 Responses to “1 Kg ಪ್ರೀತಿ… 2 Kg ವಿಶ್ವಾಸ… 4 Kg ನೆಮ್ಮದಿ…”


 1. 1 Siri
  ಮೇ 20, 2007 ರಲ್ಲಿ 6:39 ಫೂರ್ವಾಹ್ನ

  ohh myy.. ಆ ಸ್ತಿತಿ ಬಂದುಬಿಟ್ರೆ ಅಂತ ಭಯ ಆಗ್ತಿದೆ ನಂಗೆ.. after many days a good try

 2. 2 Vijay
  ಮೇ 23, 2007 ರಲ್ಲಿ 4:37 ಫೂರ್ವಾಹ್ನ

  1 Kg ಪ್ರೀತಿ….. 2 Kg ವಿಶ್ವಾಸ…. 4 Kg ನೆಮ್ಮದಿ……
  Amar article is always comes with tons of feel good factors..
  The way choosen to narrate the relations among the people seems to be different..Nice one Amar…Keep Posting..

 3. ಮಾರ್ಚ್ 21, 2008 ರಲ್ಲಿ 8:49 ಫೂರ್ವಾಹ್ನ

  ನಿಮ್ಮೆಲ್ಲ ಪ್ರೀತಿ ನನ್ನ ಮೇಲೆ 🙂 ನಾನ್ನ ಬರಹದೆ ಮೇಲೆ ಹೀಗೆ ಇರ್ಲಿ.

  -ಅಮರ

 4. ಜೂನ್ 6, 2009 ರಲ್ಲಿ 11:28 ಅಪರಾಹ್ನ

  Привет!!! Не хочешь поучаствовать в уклад города какой будет ВЕЗДЕ, так так всюду )) будто желание он довольно уникален вовсю, разве что вот Устройство Городов


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s


ಯಾವಾಗ ಬರೆದದ್ದು.

ಈ ತಿಂಗಳ ಪಂಚಾಂಗ.

ಮೇ 2007
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
« ಏಪ್ರಿಲ್   ಜೂನ್ »
 123456
78910111213
14151617181920
21222324252627
28293031  

p

Powered by eSnips.com
Advertisements

%d bloggers like this: