04
ಜೂನ್
07

ಹೋರಾಟದ ಹಾದಿ.

   ಒಂದು ಇಂಜಿನಿಯರಿಂಗ್ ಡಿಗ್ರಿ ತಗಂಡು ಇನ್ಪೊಸಿಸ್,ವಿಪ್ರೊ ಅಂತ ಕಂಪನಿ ಸೆರಕಳ್ಳದ್ದು ಇವತ್ತು ದೊಡ್ಡ ವಿಷಯ ಅಲ್ಲ ಕಣ್ ರೀ!!!. ೨ ತಿಂಗಳು ಅಲ್ಲಾಡದೆ ಓದ್ರೆ ೭೦% ಜೊಬ್ನಾಗ ಇರ್ತದೆ…ಅದೆ ಕೋಸ್ಚನ್ ….ಅದೆ ಆನ್ಸರ್…….         ೩ ಗಂಟೆಲಿ ಮುಗಿದು ಹೊಗುತ್ತೆ ಲೈಫ್.ಆಮೇಲೆ ಇದ್ದೆ ಇದೆಯಲ್ಲ ಶಕುಂತಲಾ ದೇವಿ …ಜಾರ್ಜ್ ಸಮ್ಮರ್ಸ್…. ಮತ್ತೆ ಒಂದಷ್ಟು ಆಪ್ಟಿಟ್ಯೋಡ್ ಇದ್ರೆ…೨೦-೩೦ ಸಾವಿರ ಸಂಬಳ ಬರೊ ಕೆಲ್ಸ ಗ್ಯಾರಂಟಿ….೨ ವರ್ಷದಲ್ಲಿ ಕಾರು ಬರುತ್ತೆ …………..  ೪-೫ ವರ್ಷಗಳಲ್ಲಿ ಫ್ಲಾಟು ನಮ್ಮದಾಗುತ್ತೆ …. ನೆಮ್ಮದಿಯಾಗಿ ಸೆಟಲ್ ಆಗಬಹುದು.

   ಆದರೆ ಒಬ್ಬ ರೈತ ಆಗೊದು ಆಷ್ಟು ಸುಲಭ ಅಲ್ಲ, ಯಾವ ಕಾಲೇಜಿನ ಡಿಗ್ರಿ ತಗಂಡು ರೈತ ಆಗಕ್ಕೆ ಆಗಲ್ಲ. ಅದಕ್ಕೆ ಒಂದು ಸತತ ಪರಿಶ್ರಮ ಬೇಕು, ತಾಳ್ಮೆ ಬೇಕು ….. ಮೇಲಾಗಿ ಒಂದು ತಪಸ್ಸು ಮಾಡುವಷ್ಟು ಶಕ್ತಿ ಬೇಕು….ಎಲ್ಲ ಮುಗಿತು ಅಂತ ಸುದಾರಿಕೊಳ್ಳಕಾಗೊಲ್ಲ…….ದಿನ ಹೊಸದೆನೆ ….ದಿನಾನು ಹೊರಾಟನೆ ..ಧಣಿವು ಅಂತ ಕೂತರೆ ನೆಣಿನ ಕುಣಿಕೆಗೆ ತಲೆಯೊಡ್ಡ ಬೇಕಾಗ್ತದೆ.

   ನಾವೇನು ಯಾವಾಗ್ಲು ಆರಾಮಾಗ್ ಇರ್ತಿವಿ ೬ ತಿಂಗಳಗೊ ವರ್ಷಕ್ಕೊ ಸಂಬಳ ಜಾಸ್ತಿ ಆಗುತ್ತೆ … ಇಲ್ಲಾ ಅಂದ್ರೆ ಇದ್ದೆ ಇದೆಯಲ್ಲ ಜಂಪು !!!!.. ೧ ಕಿಲೊ ಟಮೊಟೊ ೨೫ ಪೈಸೆ ಅಂದರೆ ….೧೦ ಕಿಲೋ ತಗಂಡು ಬಂದು ಎಲ್ಲಾದಕ್ಕು ಅದನ್ನೆ ಹಾಕ್ತಿವಿ …..೨೫ ರೂ ಕಿಲೋ ಅಂದ್ರೆ ಅರ್ದ ಕಿಲೋ ತಂದು ಅಡ್ಜಸ್ಟ್ ಮಾಡ್ಕೋತ್ತೆವೆ. ನಮ್ಗೆ ಇದು ಅಂತ ತಲೆ ಕೆಡಿಸಿಕೊಳ್ಳೊ ವಿಷಯವಾಗಿರಲ್ಲ, ೨೫ ಪೈಸೆ ಇದ್ದಾಗ ಆ ರೈತನ ಗತಿ ಎನಾಗಿರಬೇಡ ಯೊಚ್ಸಿದ್ದಿರಾ.

   ನಾವು ದಿನ ಪೆಪರ್ ನಲ್ಲಿ, ಟಿವಿನಲ್ಲಿ ಅತ್ಮಹತ್ಯೆ ಮಾಡಿಕೊಂಡ ನೂರಾರು ರೈತರ ಬಗ್ಗೆ ತಿಳಿತೆವೇ ಆದರೆ ಬದುಕಿದ್ದು ಸತ್ತಂತೆ ಆಗಿರೊ ಲಕ್ಷಾಂತರ ಜನರೆಡೆಗೆ ನಾವು ಗಮನ ಹರಿಸೆ ಇಲ್ಲ. ಒಂದು ಐಟಿ ಕಂಪನಿ ಹುಟ್ಟಿಹಾಕಿ ೨%-೫% ಜನರ ಜೀವನ ಮಟ್ಟ ಸುಧಾರಿಸೊದು ಒಂದು ಸಾಧನೆನೆ, ಆದರೆ ಅದಕಿಂತ ಮಿಗಿಲಾಗಿ ಲಕ್ಷಾಂತರ ಜನಕ್ಕೆ ೨ ಹೊತ್ತಿನ ಗಂಜಿಗೆ ದಾರಿಮಾಡೊದು ಒಂದು ದೊಡ್ಡ ಸಾಧನೆ ಅನ್ನೊದು ನನ್ನ ಅನಿಸಿಕೆ. ಸಾವಿರ ಜನ ಬರ್ತಾರೆ ಹೊಗ್ತಾರೆ … ನಾಳೆ ಇನ್ನೊಬ್ಬರು ಅದಿಕಾರಕ್ಕೆ ಬರ್ತರೆ..ಎಲ್ಲರೂ ಒಂದೆ ಜಾತಿಯವ್ರು… ಬಣ್ಣಗಳು ಬೇರೆ ಬೇರೆ, ಪಾತ್ರಗಳು ಬೇರೆ ಬೇರೆ ಅಷ್ಟೆ.

   ಒಂದು ಕಾಲ ಇತ್ತು ರೈತನೇ ಈ ದೇಶದ ಬೆನ್ನೆಲುಬು ಅನ್ನೊರು , ಈಗ ಎಲುಬು ಇಲ್ಲದ ಬೆನ್ನು ಮಾತ್ರ ಇದೆ.ಇಷ್ಟೆಲ್ಲ ಹೇಳೊ ಉದ್ದೆಶ ಒಂದೆ ಎಲ್ಲರಿಗೂ ನಿಜವಾದ ಪರಿಸ್ಥಿತಿಯ ಅರಿವಾಗಲಿ ಅಂತ…. ನೀಜವಾಗಿ ಕ್ರಾಂತಿ ಆಗಬೆಕಿದ್ದರೆ ಇಲ್ಲಿಂದಲೆ ಶುರು ಮಾಡ ಬೇಕು.ಈ ನಮ್ಮ ಸಾಪ್ಟ್ ವೇರ್ ಪ್ರಪಂಚ ಹೇಗೆ ಸ್ಕಿಲ್ಲಡ್ ವರ್ಕರ್(ನುರಿತ ಕೆಲಸಗಾರ)ಕೇಳುತ್ತೊ ಹಾಗೆ ಇಲ್ಲೂ ನುರಿತ ಕೆಲಸಗಾರರ ಅವಶ್ಯಕತೆ ಇದೆ.ಇಲ್ಲೂ ಕೂಡ ವೃತಿಪರ ಜನರು …. ಸಾಧನೆಗಳನ್ನ ಮಾಡುವಂತ ಕನಸಹೊತ್ತವರು ಬೇಕು, ಆಗ ಇದು ಒಂದು ಪ್ರಭಲ ಉದ್ಯಮವಾಗಿ ನಿಲ್ಲಬಲ್ಲದು.

   ನನಗನ್ನಿಸಿದನ್ನು ಇಲ್ಲಿ ವ್ಯಕ್ತಪಡಿಸಿರುವೆ …. ಇದನ್ನ ಒಪ್ಪುವುದು ಬಿಡುವುದು ಅವರವರ ಅರಿವಿಗೆ ಬಿಟ್ಟದ್ದು……
ಬನ್ನಿ ….ಹನಿ ಹನಿ ಗೂಡಿದರೆ ಹಳ್ಳ …. ತೆನೆ ತೆನೆ ಸೇರಿದರೆ ಬಳ್ಳ …..ಎಲ್ಲರೂ ಸೇರಿ ದುಡಿಯೋಣ.

Advertisements

7 Responses to “ಹೋರಾಟದ ಹಾದಿ.”


 1. 1 Vijay
  ಜೂನ್ 4, 2007 ರಲ್ಲಿ 11:28 ಫೂರ್ವಾಹ್ನ

  contemporary subject..nija idannoo yochane maadbeku naavu…
  Thanks for a good insightful articale.

 2. ಜೂನ್ 4, 2007 ರಲ್ಲಿ 12:10 ಅಪರಾಹ್ನ

  dEsha uddaraa aagabekaadre modalu namma halligala jeevana shaili avara stithigatigal badalavane ag beku…..bangalore tumba softwer compny naayi kodegal tara yeddu kootre uddaara agollla desha…helabekadanna sariyaage heliddiri bidi….raitha yavattu athmahatye madikollodu nillistaano avatte ee deshakke antida shani tolgida haagaguttteeeeeeee

 3. 3 amit
  ಜೂನ್ 5, 2007 ರಲ್ಲಿ 12:47 ಅಪರಾಹ್ನ

  satyada mattu gambheeravaada vichaara..
  ee vishayavanna naavu manassinalli kalpisikondu summanaaguttiddeveye horatu ,

  ee kalpane krishiyaglebeku

 4. ಜೂನ್ 8, 2007 ರಲ್ಲಿ 6:13 ಫೂರ್ವಾಹ್ನ

  amara,
  nice one! obba software engineer aagi, raitara neleyalli yochane madO manassu ninge ideyalla, adke hatts off! baravaNige kRushi munduvariyali. Keep writing. ittitlaage yako somaari aagtaa ideeya neenu!:)

 5. 5 Richard
  ಜೂನ್ 15, 2007 ರಲ್ಲಿ 4:46 ಫೂರ್ವಾಹ್ನ

  ನಾನು ಈ ಲೇಖನದೊಂದಿಗೆ ಸಂಪೂರ್ಣ ಸಹಮತ.
  ಒಂದು ಕಾಲದಲ್ಲಿ “ಜೈ ಜವಾನ್ ಜೈ ಕಿಸಾನ್” ಎಂದು ಹಸಿರು ಕ್ರಾಂತಿ ನಡೆದಂತೆ .. “ಜೈ ಕಿಸಾನ್ ಜೈ ಕಿಸಾನ್” ಎಂದು ಮತ್ತೊಂದು ಹಸಿರು ಕ್ರಾಂತಿ ಮಾಡುವ ಸಮಯ ಬಂದಿದೆ .. ಆದರೆ ಇದರ ಫಲಾನುಭವಿ ರೈತನಾಗಬೇಕು .. ಮಧ್ಯವರ್ತಿ ಮತ್ತು ವ್ಯಾಪಾರಿಗಳಲ್ಲ ..

 6. 6 Animal
  ಜೂನ್ 27, 2007 ರಲ್ಲಿ 6:46 ಫೂರ್ವಾಹ್ನ

  yochane madtha koodalu time illa ree amar ellaru samasye ide antaane baritahaare alva adanna solve maadalu en madbeku andre yes ee topic mele discuss madona antha mooru line kutti sumne aagodu namma joymaana… illi koothu samsyege santhapa soochisodu bari waste adarinda laabha yaarigoo illa..hogli nammale kranthi madona anthira yaaradru obbaru ee 25-30 savirada sambala,bike,weekend trip,forum foriegn chance ella thoredu aa vishrantha neerava sundara prakruthiya madilalli hanada aaseillde malgthira..???
  ella helthira illi hana ide nemmadiyilla aadru enu madakagallla iralebeku ivella badukinondigina raji ashte…kranthi antha aagodu adara mele article baredare allari navu alli kelasa madi modala bele tegedu nemmadiya nittusirittu lokakke saari helri adu kranthi…
  hana allari mukhya manasina nemmadi adu allide anda mele illekirabeku?? kelavarige ee s/w hana ive nemmadi tension kooda avarige nemmadiye avarirali ille alva…
  nimmanna dhoshisthilla nimma anisike neevu helidri nanna anisike naa helide aste….
  nangothu yaaru marali mannige hogalla yakandre mathaduvavarella manushyaru mathu alpayu madida kelasa sada nenapiruthe…

 7. ಮಾರ್ಚ್ 21, 2008 ರಲ್ಲಿ 8:47 ಫೂರ್ವಾಹ್ನ

  ನಿಮ್ಮೆಲ್ಲ ಅನಿಸಿಕೆಗಳನ್ನ ನಾನು ಸ್ವಾಗತಿಸುತ್ತೆನೆ ……. ಖಂಡಿತ ಅದರ ಬಗೆಗೆ ಕೆಲಸಮಾಡೋಣ ….. ಮುಂದೊದು ದಿನ ನಾನು ಮಾಡಿದ್ದನ್ನ ತೋರಿಸ್ತಾ ನಿಮ್ಮೆಲ್ಲರ ಮುಂದೆ ನಿಲ್ತೆನೆ …….. ಆ ದಿನ ಬೇಗ ಬರ್ಲಿ.

  -ಅಮರ


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s


ಯಾವಾಗ ಬರೆದದ್ದು.

ಈ ತಿಂಗಳ ಪಂಚಾಂಗ.

ಜೂನ್ 2007
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
« ಮೇ   ಜುಲೈ »
 123
45678910
11121314151617
18192021222324
252627282930  

p

Powered by eSnips.com
Advertisements

%d bloggers like this: