26
Jun
07

‘ಇಸ್ಟೀಲ್-ಸಿಲ್ವಾರ್ ಪಾತ್ರೇ’

     ಆಫೀಸಿನ ಕಿಟಕಿಯಾಚೆ ಕಾಣ್ಣಾಯಿಸಿದಾಗ ದೂರದಲ್ಲೆಲ್ಲೊ ಪ್ಲಾಸ್ಟಿಕ್,ಸ್ಟಿಲ್ ಪಾತ್ರೆಗಳನ್ನು ಮಾರುತ್ತಿರುವವನು ತನ್ನ ಸೈಕಲ್ ಹಿಡಿದು ಬೀದಿ ಬೀದಿ ತಿರುಗುತ್ತಿದ್ದ.’ಇಸ್ಟೀಲ್ …. ಪಿಲಾಸ್ಟಿಕ್ ಪಾತ್ರೆ’ ಅಂತ ಅಸ್ಪಷ್ಟವಾಗಿ ಕೇಳುತ್ತಿತ್ತು.ತಟ್ಟನೆ ಮನಸ್ಸು ಹರಿದದ್ದು ನಮ್ಮನೆಗೆ ಬರುತಿದ್ದ ಸಾಬಯ್ಯನತ್ತ. ಯಾಕೋ ಗೊತ್ತಿಲ್ಲ ಈ ಪಾತ್ರೆ ಸಾಬಯ್ಯ ಅವಾಗವಾಗ ನೆನಾಪಾಗ್ತಾನೆ. ಮನೆಗೆ ಬಂದಾಗ ಒಂದು ನಾಲ್ಕು ಚಂದ ಮಾತಾಡ್ತಿದ್ದ, ತನ್ನ ಕಷ್ಟ ಸುಖ ಹೆಳ್ಕತಿದ್ದ. ಮನೆಲಿದ್ದ ಪೇಪರ್ರು… ಹಳೇ ಪ್ಲಾಸ್ಟಿಕ್ಕು,ಕಬ್ಬಿಣ ಎಲ್ಲ ಹೆಗ್ಗಿಲ್ಲದೆ ತಗಂಡು ಪಾತ್ರೆಗಳನ್ನ ಕೊಡುತ್ತಿದ್ದ. ನನಗೂ ಅವನನ್ನ ಕಂಡ್ರೆ ಬಲು ಪ್ರೀತಿ, ಕೊಳಕು ಕುರ್ತಾ- ಪೈಜಾಮು, ಕಾಲರ್ ಕರಿಬಣ್ಣದ್ದೆನೊ ಅನ್ನಿಸುವ ಮಟ್ಟಕ್ಕೆ ಇರುತ್ತಿತ್ತು. ಬಡಕಲು ದೇಹವಾದರು ಗಟ್ಟಿಮುಟ್ಟಾಗಿದ್ದ, ತಲೆ ಮೇಲೆ ಬಿಳಿ ಟೋಪಿ,ಅಲ್ಲೊಂದು ಇಲ್ಲೊಂದು ಕುದಲಿದ್ದ ಕುರುಚಲು ಗಡ್ಡ…. ಅಷ್ಟಾದರು ಸುಂದರ ಮನ್ಸಿನ ಮುಗ್ದ ಮನುಷ್ಯ. ಮನೆ ತುಂಬಾ ಮಕ್ಕಳು ಈ ಹಿಂದೆ ವರ್ಸ ಮೇ ನಾಗೆ ಒಂದು ಮಗಳುದು ಮದ್ವೆ ಮಾಡಿಬಿಟ್ಟೆ ಅಂತ ಯಾವಾಗಲಾದರು ಮಾತಿಗೆಳೆಯೊನು. ಒಂದೊಂದು ಸಲ ಅನ್ನ್ಸೊಂದು ಎಷ್ಟು ಜನ ಮಕ್ಕಳು ಸಾಬಯ್ಯ ಅಂತ ಕೇಳ ಬೇಕು ಅಂತ … ಸುಮ್ಮಸಾಗ್ತಿದ್ದೆ. ಅಮ್ಮನಿಗೆ ಸಾಬಯ್ಯ ಬಂದ್ರೆ ಎಲ್ಲಿಲ್ಲದ ಸಡಗರ ಏನಾದ್ರು ಹೊಸ ಪಾತ್ರೆ ತಗೊ ಬಹುದು ಅಂತ. ಅವನು ತಂದ ಪಾತ್ರೆ ಗಂಟನ್ನೆಲ್ಲ ಬಿಚ್ಚಿಸಿ ಎಲ್ಲ ಪಾತ್ರೆಗಳನ್ನ ಪರೀಕ್ಷಿಸಿ ನೋಡದಿದ್ದರೆ ಅವಳಿಗೆ ಸಮಾಧಾನ ಆಗ್ತಿರಲಿಲ್ಲ. ಏನು ಮಾಡಕ್ಕೆ ನನ್ನ ಹತ್ತಿರ ಪಾತ್ರೆ ಇಲ್ಲ ಇದು ಆಗುತ್ತಾ ಅಂತ ನಮ್ಮನ್ನೆಲ ಕೇಳಿ ಆರಿಸಿ ಇಟ್ಟುಕೊಳ್ಳೊದು, ಮುಂದಿನ ವ್ಯಾಪಾರದ ಕೆಲಸ ಅಪ್ಪನದ್ದು.

    ಅಪ್ಪನಿಗೆ ಇವನನ್ನ ಕಂಡರೆ ಅಷ್ಟ ಕಷ್ಟೆ ಎಲ್ಲಿ ಅಮ್ಮ ಕೆಲಸಕ್ಕೆ ಬರುವ ಕಬ್ಬಿಣ, ಪ್ಲಾಸ್ಟಿಕ್ ಸಾಮಾನುಗಳನ್ನ ಹಾಕಿ ಪಾತ್ರೆ ತಗೊತಾಳೊ ಅನ್ನೊ ಅನುಮಾನ. ಆದರೂ ವ್ಯಾಪಾರ ಕುದುರಿಸಲು ಒಪ್ಪುತಿದ್ದ, ಹೇ ಕೊಡಿ ಸಾಬ್ರೆ ಬರುತ್ತೆ ಇದು, ನಾನು ನೊಡ್ಕಂದು  ಬಂದಿದ್ದಿನಿ ಪ್ಯಾಟೆನಾಗೆ, ಈ ತಪ್ಲೆ ಇಷ್ಟೆ ಬಾಳೊದು … ಇಲ್ಲ ಅಂದ್ರೆ ಬೀಡಿ ಇನ್ಯಾರತ್ರನಾದ್ರು ತಗತ್ತಿವಿ ಅಂತ ಅವನನ್ನ ಒಪ್ಪಿಸೋದು. ಸಾಬಯ್ಯ ಗೀಟಕಿಲ್ಲ ಬುದ್ದಿ ಅಸ್ಲು ಹೊಂಟೊಯ್ಯ್ತದೆ ನಿಮ್ದು ದೊಡ್ದ ಮನ್ಸು ಮಾಡಿ ಕೈ ಎತ್ತಿ ಕೋಟ್ಟು ಬುಡಿ ಅಂತ ಒಪ್ಪಿಸೋನು ….. ಕೊನೆಗು ವ್ಯಾಪಾರ ಮುಗಿದು ಅಮ್ಮನ ಮುಕದಲ್ಲಿ ಒಂದು ಹೊಳಪು …. ಯಾರ್ಯಾರು ಮುಟ್ಟವರೊ ಚನ್ನಾಗಿ ಹುಣಸೆ ಹಣ್ಣಾಕಿ ತೊಳಿಬೇಕು ಎಲ್ಲಿ ಇಡೊದು ಇವ್ನ ಅನ್ನೊ ಚಿಂತೆ ಬೇರೆ. ಅಮ್ಮ ಅಪ್ಪಂಗೆ ಕಾಣದಂಗೆ ತೆಂಗಿನಕಾಯಿ, ತರಕಾರಿ ಅವನಿಗೆ ಕೊಟ್ಟು, ನಮ್ಮನೆಯೊರಿಗೆ ಕಾಣದಂಗೆ ಮಡಿಕ್ಕೊ ಅಂತ ಹೇಳೊದು. ಮತ್ತೆ ಬರೊವಾಗ ಅಗಲ ತಳದ ಪಾತ್ರೆ, ಚಿತ್ರ ಇರೊ ತಟ್ಟೆ ತಗಂಡು ಬಾ ಅಂತ, ಅವ್ಳು ಯಾರಾದ್ರು ಮನೆಯಲ್ಲಿ ನೋಡಿದ್ದ ಪಾತ್ರೆಗಳ ವರ್ಣನೆಮಾಡಿ ಅವನಿಗೆ ಮನವರಿಕೆ ಮಾಡ್ಸೊದು. ಅವ್ನು ಹೇ ತತ್ತಿನಿ ಬೀಡಿ ನೋಡಿ ಮಾಲ್ ಹೇಂಗಿರುತ್ತೆ ಅಂತ ಬರವಸೆ ಕೋಡೊನು.

    ಮಧ್ಯಾನದ ಬಿಸಿಲಲ್ಲಿ ಬಂದು, ಸೈಕಲ್ ಮರಕ್ಕೆ ಒರಗಿಸಿ ಒಂದಷ್ಟೊತ್ತು ಕಾಲ ಕಳೆದು ಊರಿನ ಕಡೆ ವ್ಯಾಪಾರಕ್ಕೆ ಹೋಗೊದು ಅವನ ರೂಡಿ. ಜಾಸ್ತಿ ಹಳೆ ಸಾಮಾನು ಇದ್ರೆ ನಮ್ಮನೆ ಹತ್ರ ಇಟ್ಟು ಮತ್ತೆ ತೊಗೊಂಡು ಹೋಗೊನು.ಎದುರಿಗೆ ಸಿಕ್ಕಿ ಏನು ಸಾಬ್ರೆ ವ್ಯಾಪಾರ ಹೆಂಗೈತೆ ಅಂತ್ರೆ ಸಾಕು, ಹೇ ಹೊಸ ಪಾತ್ರೆನಾಗೆ ಏನು ಗಿಟ್ಟಕಿಲ್ಲ ಸಿಲ್ವಾರ ,ಇಸ್ಟಿಲ್ ಸಿಕ್ಕಾಪಟ್ಟೆ ಜಾಸ್ತಿ ಬುದ್ದಿ. ಏನೊ ಹಳೆ ಸಾಮಾನ್ ನಾಗೆ ಒಂದಷ್ಟು ಗೀಟುತ್ತೆ ಅಂತ ಶುರುಮಾಡಿ ಅವನ ವ್ಯಾಪಾರದ ಕಷ್ಟ ನಷ್ಟಗಳನೆಲ್ಲ ಹೇಳ್ಕೊತಿದ್ದ.

    ಇವತ್ತಿಗೂ ಅವನ ಶ್ರಮ- ಸೌಮ್ಯತೆ ನನ್ನನ್ನ ಆವರಿಸಿ ಕೊಂಡಿದೆ, ಇಂದಿಗೂ ಕಂಡರೆ ಅಷ್ಟೆ ಪ್ರೀತಿ, ಗೌರವದಿಂದ ಕಾಣುವ ಜೀವಿ. ಯಾವಾಗಲೊಮ್ಮೆ ಊರಿನಲ್ಲೊ ಅಥವಾ ಮನೆಯಲ್ಲೊ ಕಾಣಿಸಿಕೊಂಡಾಗ ವಿನಮ್ರದಿಂದ ಮಾತಾಡಿಸಲು ಮನಸ್ಸು ಮೊದಲು ಗೊಳ್ಳುತ್ತದೆ…. ಇದೆ ಇರ ಬೇಕು …. ತುಡಿತ ಅಥವ ಒಂದು ಒಳ್ಳೆಯ ಭಾವನೆ ಅನ್ನುವುದು. ಎಲ್ಲೊ ಇದ್ದು ಹೇಗೊ ಇದ್ದು ಕೂಡ ಮನಸ್ಸಿಗೆ ತುಂಬಾ ಹತ್ತಿರವಾಗಿರುತ್ತಾರೆ. ಅವರಿಗೆ ನಾವು ಏನು ಆಗ ಬೇಕಾಗಿಲ್ಲ …. ನಮಗೆ ಅವರು ಕೂಡ.

Advertisements

3 Responses to “‘ಇಸ್ಟೀಲ್-ಸಿಲ್ವಾರ್ ಪಾತ್ರೇ’”


 1. June 27, 2007 at 11:47 am

  ಶ್ರಮ- ಸೌಮ್ಯತೆ

  Entha combination gothha…!
  Excellent kano…Truly Inspiring..
  olle vyakthi chitrana kottiddiya…
  Nice to read…
  Badukanna Noduva ninna drishti dine dine nichchaLa vaagthide maga…
  Keep it up…

 2. June 27, 2007 at 2:07 pm

  ಒಂದು ಸಲ ನಮ್ಮೂರನ್ನ ಸುತ್ತಿ ಬಂದ ಹಾಗಯ್ತು…ಇದು ನಮ್ಮ ಮನೆಯ ಕತೆ ಅಮರ್ ಸರ್..ನೀವು ಬರೆದಿದ್ದೀರಿ ಅಷ್ಟೆ….ಹಾಗು ಎಲ್ಲರ ಮನೆಯ ಕತೆ ಕೂಡ..ಶಬ್ಧಗಳ ಮತ್ತೆ ಭಾವನೆಗಳ ಜೋಡನೆ ಪಸಂದಾಗಿದೆ……..

  ಊರಿನಲ್ಲೊ ಅಥವಾ ಮನೆಯಲ್ಲೊ ಕಾಣಿಸಿಕೊಂಡಾಗ ವಿನಮ್ರದಿಂದ ಮಾತಾಡಿಸಲು ಮನಸ್ಸು ಮೊದಲು ಗೊಳ್ಳುತ್ತದೆ…. ಇದೆ ಇರ ಬೇಕು …. ತುಡಿತ ಅಥವ ಒಂದು ಒಳ್ಳೆಯ ಭಾವನೆ ಅನ್ನುವುದು. ಎಲ್ಲೊ ಇದ್ದು ಹೇಗೊ ಇದ್ದು ಕೂಡ ಮನಸ್ಸಿಗೆ ತುಂಬಾ ಹತ್ತಿರವಾಗಿರುತ್ತಾರೆ. ಅವರಿಗೆ ನಾವು ಏನು ಆಗ ಬೇಕಾಗಿಲ್ಲ …. ನಮಗೆ ಅವರು ಕೂಡ.

  ನಿಜವಾದ ಮಾತು……

 3. March 21, 2008 at 8:39 am

  ನಿಮ್ಮ ಪ್ರೀತಿಯ ಮಾತುಗಳಿಗೆ …….. ನನ್ನ ಒಲವಿನ ಧನ್ಯವಾದಗಳು….:)


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s


ಯಾವಾಗ ಬರೆದದ್ದು.

ಈ ತಿಂಗಳ ಪಂಚಾಂಗ.

June 2007
M T W T F S S
« May   Jul »
 123
45678910
11121314151617
18192021222324
252627282930  

p

Powered by eSnips.com

%d bloggers like this: