05
ಜುಲೈ
07

ಮುತ್ತು ಸಂಜೆಯ ನೆನಪು.

    ನೆನೆಪಿನಂಗಳದಲಿ ನೆಲೆಯಾದ ಮುತ್ತು ಸಂಜೆಯ ನೆನಪು ಇನ್ನೂ ಹಸಿರಾಗಿದೆ ಗೆಳತಿ, ಯುಗ ಯುಗಗಳನು ಕ್ಷಣಗಳಂತೆ ಕಳೆದೆವು ನಾವಿಬ್ಬರು ಒಡನಿದ್ದ …..ಪ್ರತಿ ಘಳಿಗೆ. ಅಲ್ಲಿಂದ ಹೊರನಡೆದು ನಮ್ಮ ನಮ್ಮ ದಾರಿಯ ಹಿಡಿದಾಗ ಪ್ರತಿ ಕ್ಷಣಗಳು ಯುಗಗಳಾದವು ಮನಸ್ಸೆಲ್ಲ ಭಾರ ಭಾರ ಮತ್ತೆ ಯಾವಾಗ ಸಿಗ್ತಿಯಾ ಎಂದು ಮೆಲ್ಲನೆ ಕೇಳಿದ ನಿನಗೆ, ಯಾವಾಗ ನಮ್ಮ ಹಣೆಯಲ್ಲಿ ಬರೆದಿದೆಯೊ ಆವಾಗ ಎಂದು ನಾನಿತ್ತೆ ಉತ್ತರವನು. ನಡೆದು ಬಸ್ ಸ್ಟಾಂಡ್ ಬಳಿ ಬಂದಾಗ ಮಡದಿಯನ್ನ ತೌರಿಗೆ ಕಳುಹಿಸಲು ನಿಂದ ಪತಿಯ ದುಗುಡ ನನ್ನನಾವರಿಸಿತ್ತು. ಈ ಬಸ್ಸು ಮನೆಯ ಹತ್ತಿರಕ್ಕೆ ಹೊಗುತ್ತೆ ಹೊಗಲಾ ಇಲ್ಲ ಮತ್ತೊಂದಕ್ಕೆ ಕಾಯಲೇ ಎನ್ನುತ್ತ ಮನಸ್ಸಿಲ್ಲದ ಮನಸ್ಸಿನಿಂದ ಕೇಳಿದಾಗ , ಯಾಕೊ ಹೊಗ್ತಿಯಾ ನನ್ನ ಜೊತೆಲೇ ಇರೊ ಅನ್ನುವಾಸೆ. ಆದರು ಮುಂದಿನ ಬಸ್ ಬಂದಾಗ ಹೋಗೊ ಎಂದು, ಇನ್ನಷ್ಟು ಹೊತ್ತು ನಿನ್ನ ಜೊತೆಗಿರುವೆನಲ್ಲ ಒಳಗೊಳಗೆ ಖುಷಿ ಪಡೊದು. ಕೊನೆಗೂ ಬಂದ ಬಸ್ಸಿನೆಡೆಗೆ ಭಾರವಾಗಿ ಹೆಜ್ಜೆಯಾಕುತ್ತಾ….ಒಮ್ಮೆ ಹಿಂತಿರುಗಿ ನೋಡಿ ಮತ್ತೆ ಸಿಗೋಣ ಅಂತ ಕಣ್ಣಲ್ಲೆ ಸನ್ನೆಮಾಡಿ, ಬಸ್ಸು ಕದಲಿದಾಗ ನಿನ್ನೊಡನೆ ಕಳೆದ ಸುಮಧುರ ಕ್ಷಣಗಳ ಮೆಲಕುತ್ತಾ ಹಿಂದಿರುಗಿ ನನ್ನ ದಾರಿ ಹಿಡಿದೆ.

    ನಿನ್ನ ಮುಂದೆ ಕೂತು ಒಂದೊಂದಾಗಿ ಪುಸ್ತಕಗಳನ್ನು ತೆಗೆಯುತ್ತಾ, ಮಲ್ಲಿಗೆಯ ಕವಿ ಕೆ.ಎಸ್.ನ ಅವರ “ಮಲ್ಲಿಗೆಯ ಮಾಲೆ” ನಿನ್ನತ್ತ ಇಟ್ಟಾಗ ಸಂತಸದಿಂದ ಕಣ್ಣರಳಿಸಿ ನೋಡಿದ ನಿನ್ನ ಪರಿ, ಅಮ್ಮನನ್ನು ಕಂಡ ಮಗುವಿನಂತಿತ್ತು. ಇಷ್ಟು ದಿನ ನೀನು ಹೇಳುವ ಕವನಗಳನ್ನ ಕೇಳಿ ಆನಂದಿಸುತ್ತಿದ್ದೆ, ಈಗ ಅಷ್ಟು ಕವನಗಳು ನನ್ನ ಕಣ್ಣಮುಂದೆ ಅಬ್ಬ !!! ಎನ್ನುತಿತ್ತು ನಿನ್ನ ಮನವು. ಯಾವುದನ್ನ ಓದೊದು ಯಾವುದನ್ನ ಬಿಡೊದು ..ಎಲ್ಲವು ಚಂದದ ಸಾಲುಗಳೆ, ಒಂದೊದು ಕವಿಯ ಬದುಕಿನ ಅನುಭವಗಳೆ.  ಅವನ್ನು ಎಳೆ ಎಳೆಯಾಗಿ ಬಿಡಿಸಿ ಉಣಬಡಿಸಿದ್ದಾರೆ ಎಲ್ಲರಿಗೂ ಒಗ್ಗುವ ಸುಂದರ ಕವನಗಳಾಗಿ ನಮ್ಮ ಮಲ್ಲಿಗೆಯ ಕವಿಗಳು.

    ನಾಲ್ಕಾರು ಕವನಗಳನ್ನ ಸವಿಯುತ್ತ ಮೈಮರೆತಿದ್ದ ನಮಗೆ ಮಾಣಿ ಬಂದು ‘ಏನ್ ಕೊಡಲಿ ಸಾರ್’ ಎಂದಾಗ ಅರಿವಾದದ್ದು ನಾವಿರೋದು ಹೋಟೆಲೊಂದರಲ್ಲಿ ಅಂತ. ನಿನ್ನ ಮುಖ ನೋಡಿದಾಗ ಏನಾದರು ಸ್ವಲ ಎಂದು ತಲೆ ಅಲ್ಲಾದಿಸಿದೆ …. ಇಲ್ಲಿ ತಿನ್ನೊದು ನೆಪಮಾತ್ರಕ್ಕೆ ಅಂತಾ ಅರಿವಾಗಿ, ಒಂದಷ್ಟು ಆರ್ಡರ್ ಮಾಡಿ ಮತ್ತೆ ಕವನಗಳಲ್ಲಿ ಮುಳುಗಾಗಿತ್ತು.ಒಂದೊಂದು ಸಾಲುಗಳನ್ನ ಓದಿ ಅನುಭವಿಸಿದ ಪರಿ ನಮಗೆ ನಾವೆ ಬಲ್ಲೆವು. ಅಷ್ಟರಲ್ಲೆ ನೆನಪಾಗಿ ಬ್ಯಾಗಿನಲ್ಲಿ ಕೈಹಾಕಿ ನಿನ್ನ ಮುಂದಿರಿಸಿದೆ ಪೊಟ್ಟಣವನು, ಏನೆಂದು ಆಶ್ಚರ್ಯದಿಂದ ನೀ ಕೇಳಲು ಅಚ್ಚ ಮಲ್ಲಿಗೆಯ ದಂಡೆಯೆಂದೆ ನಾನು. ಮಲ್ಲಿಗೆಯ ಪರಿಮಳಕೆ ನಾಚಿತು ನಿನ್ನ ಮನವು, ಒಳಗೊಳಗೆ ಗೊಣಗುತ್ತಾ, ಇವಾಗ ಮುಡಿಯೊಕ್ಕೆ ಆಗೊಲ್ವೊ ಅಮ್ಮ ಕೆಳ್ತಾರೆ ಎಲ್ಲಿಂದ ತಂದೆ ಸಂಜೆಹೊತ್ತಲ್ಲಿ ಅಂತ ನೊಂದು ಕೊಂಡೆ. ತಟ್ಟನೆ ಉಪಾಯ ಮಾಡಿ ನಾಳೆ ಮುಡಿಲಾ ಮನೆಗೆ ತೊಗಂದು ಹೊಗ್ತಿನಿ ಎಂದು ನಸುನಗುತ ಇರಿಸಿಕೊಂಡು ನನ್ನ ಮನಸಿಗೆ ನೆಮ್ಮದಿ ತಂದ ನೀನು ನನ್ನವಳಲ್ಲವೆ.

     ಇಬ್ಬರಲು ಒಂದೆ ಆಲೋಚನೆ ನಾವು ಯಾಕೆ ಇಷ್ಟು ಹತ್ತಿರವಾದ್ವಿ, ಯಾವ ಜನ್ಮದ ಮೈತ್ರಿನೊ , ಈ ಜನ್ಮದಲಿ ನಮ್ಮಿಬ್ಬರನು ಈ ಪರಿಯಲ್ಲಿ ಬಂದಿಸಿದೆ. ಮತ್ತೆ ಮತ್ತೆ ನೆನಪಾದವು ಜಗಜಿತ್ ಸಿಂಗರು ಹಾಡಿರುವ ಗಜಲ್ಗಳ ಸಾಲುಗಳು ……………. ‘ತೇರೆ ಆನೆ ಕಿ ಜಬ್ ಕಬರ್ ಮೇಹಕೆ …. ತೇರಿ ಖುಷಬು ಸೇ ಸಾರಾ ಗರ್ ಲೆಹಕೆ” ಮನದಲ್ಲೆ ಗುನುಗುತ್ತ , ನಿನ್ನ ನೆನೆಯುತ್ತಾ ಸಾಗುತ್ತಿರುವೆ ಬದುಕಿನ ಹಾದಿಯಲಿ ……… ಮತ್ತೆ ಯಾವಗ ಬರ್ತಿಯಾ …. ನನ್ನ ಮನೆಯ ಮನದಂಗಳಕೆ ?


4 Responses to “ಮುತ್ತು ಸಂಜೆಯ ನೆನಪು.”


 1. ಜುಲೈ 6, 2007 ರಲ್ಲಿ 7:42 ಫೂರ್ವಾಹ್ನ

  hallo amar sir…barta barta lover boy agta iddiri ansta ide namage…hmm yen idella? asht peeling nalli bardiddiralla yen visesa?…super next innn yaav tarad prema patra barithiri nodona?…..

 2. 2 Let.Me.Feel
  ಜುಲೈ 6, 2007 ರಲ್ಲಿ 1:59 ಅಪರಾಹ್ನ

  aahaa entha Love-Lavike…illa bere holike
  ತೇರೆ ಆನೆ ಕಿ ಜಬ್ ಕಬರ್ ಮೇಹಕೆ …. ತೇರಿ ಖುಷಬು ಸೇ ಸಾರಾ ಗರ್ ಲೆಹಕೆ…

 3. 3 Richard
  ಜುಲೈ 12, 2007 ರಲ್ಲಿ 12:57 ಅಪರಾಹ್ನ

  ಸುಂದರವಾಗಿ ಬಣ್ಣಿಸಿದ್ದಿರಾ ನಿಮ್ಮ ಭಾವನೆಗಳನ್ನು 🙂

 4. ಮಾರ್ಚ್ 21, 2008 ರಲ್ಲಿ 8:36 ಫೂರ್ವಾಹ್ನ

  ಸೋಮು ಮರಿ …… ಲವರ್ ಬಾಯ್ ಆಗಬಾರದೆ ……. 🙂

  ಮಿತ್ರ ವಿಜಯ್ ……. ನಿನ್ನ ಪ್ರೀತಿಗೆ ಸರಿ ಸಾಟಿ ಈ ಸಾಲುಗಳು 🙂 “ತೇರೆ ಆನೆ ಕಿ ಜಬ್ ಕಬರ್ ಮೇಹಕೆ …. ತೇರಿ ಖುಷಬು ಸೇ ಸಾರಾ ಗರ್ ಲೆಹಕೆ…”

  ಪ್ರಿಯ ರಿಚ್ಚರ್ಡ್ ……. ಸಿಕ್ಕಾಪಟ್ಟೆ ಥಾಂಕ್ಸೂ….. 🙂


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s


ಯಾವಾಗ ಬರೆದದ್ದು.

ಈ ತಿಂಗಳ ಪಂಚಾಂಗ.

ಜುಲೈ 2007
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
« ಜೂನ್   ಆಗಸ್ಟ್ »
 1
2345678
9101112131415
16171819202122
23242526272829
3031  

p

Powered by eSnips.com
Advertisements

%d bloggers like this: