16
Jul
07

ಹಾರಿಸ್ಕಂಡ್ ಹೋಗೊದಂತು ಗ್ಯಾರಂಟಿ.

    ನಿನ್ನನ್ನ ಮುಂದೆ ಕೂರಿಸಿಕೊಂಡು ಬದುಕಿನ ಒಂದೊಂದು ಪುಟಗಳನ್ನ ತಿರಿವಿಹಾಕಿದ ಆ ಘಳಿಗೆ ಇನ್ನೂ ಮನಸ್ಸಿನಲ್ಲಿ ಹಸಿ ಹಸಿಯಾಗಿದೆ ಕಣೇ. ಒಂದು ಸ್ವಲ್ಪ ನಾಚಿಕೆ, ಸ್ವಲ್ಪ ಸಂಕೋಚ, ನೀನು ನಕ್ಕು ನಗದಹಾಗೆ ನಟಿಸುತ್ತಿದ್ದ ಪರಿ ನನಗೆ ಒಳಗೋಳಗೆ ಸಂತೋಷ ತರ್ತಿತ್ತು. ಆದರು ಸಂಪ್ರದಾಯಸ್ತ ಮನೆಯ ಹೆಣ್ಣು ಮಗಳಾಗಿ ಅಷ್ಟು ಮಿನಿಮಮ್ ಸಾಚಿಕೆ ಇಲ್ಲ ಅಂದರೆ ಹ್ಯಾಗೆ ….ಅದು ನನ್ನಂತ ಮೂರು ಬಿಟ್ಟವನ ಮುಂದೆ….

    ಮಂದ ಬೆಳಕಿನ ಕೆಂಪು ಸಂಜೆ ನಮ್ಮಿಬ್ಬರನ್ನ ಆವರಿಸುತ್ತಿತ್ತು….. ಸುತ್ತಲು ಪ್ರಶಾಂತ ತಂಪು ಆವರಿಸಿತ್ತಾದರು, ನಾವಿಬ್ಬರು ಆಗತಾನೆ ಸ್ಪೋಟಿಸಿದ ಜ್ವಾಲಮುಖಿಯಂತಾಗಿದ್ದೆವು. ಸರಕ್ ಅಂತ ಒಮ್ಮೆ ನೋಡಿ ಮತ್ತೆ ತಲೆ ತಗ್ಗಿಸಿ ಕುತಾಗ, ಈ ಹುಡುಗಿ ಹಿಗ್ಯಾಕೆ ಆಡ್ತಾಳೆ ಅನ್ಸೊದು. ಮೆಲ್ಲನೆ ಬೀಸುವ ಗಾಳಿಗೆ ತೆಲಾಡುತ್ತಿದ್ದ ಮುಂಗುರುಳು ಮತ್ತೆ ಮತ್ತೆ ಛೆಡಿಸುತ್ತಿತ್ತು. ಒಂದು ಕ್ಷಣ ಹತ್ತಿರ ಬರೋಣ ಅಂತ ನನ್ನೆಲ್ಲ ಶಕ್ತಿಯನ್ನ ಒಂದು ಗೂಡಿಸಿಕೊಳ್ಳೊ ಹೊತ್ತಿಗೆ ….. ಎಲ್ಲೊ ಸಣ್ಣಗೆ ಹೆದರಿ, ನೀನೆಲ್ಲಿ ಎದ್ದು ಓಡಿಹೋಗ್ತಿಯೊ ಅಂತ ನಾನೆ ಸಾಮಾಧಾನ ಮಾಡಿಕೊಳ್ಳೊದು. ಆದರು ಮನಸ್ಸು ನನ್ನನ್ನ ಪುಸಲಾಯಿಸಿ …. ನಿನ್ನ ಹುಡುಗಿನೊ ಇವಳು, ಹಾಗ್ಯಾಕೊ ಅಂದ್ಕೊತ್ತಿಯಾ ….. ಅವಳಿಗೂ ನಿನ್ನ ಜೋತೆ ತಾಗಿಸಿಕೊಂಡು ಕೂರೊಕ್ಕೆ ಇಷ್ಟ ಕಣೋ ಅಂತ ಬೆನ್ನು ತಟ್ಟುತ್ತಿತ್ತು.

    ಅಬ್ಬ!!! ಸಾಕು ಕಣೇ ಈ ಮೌನ, ನನ್ನ ಇನ್ನಷ್ಟೂ ಸತ್ತಾಯಿಸ ಬೇಡ. ನಿನ್ನ ಮೌದದಲ್ಲೆ ನನ್ನನ್ನ ನುಂಗ್ತಿದ್ದಿಯ, ನಾಲ್ಕು ಚಂದದ ಮಾತಾಡು. ಮುತ್ತೆನಾದರು ಉದುರಿದರೆ ಜೊಪಾನ ಮಾಡೊದು ನನಗಿರಲಿ. ಕತ್ತು ಎತ್ತಿ ಒಂದು ಸಾರಿ ಸರಿಯಾಗಿ ನನ್ನ ಗಮನಿಸು ….. ಕಣ್ಣಲ್ಲಿ ಕಣ್ಣಿಟ್ಟು ನೋಡು . ಆಮೇಲೆ ಪಶ್ಚಾತಾಪ ಪಡಬೇಡ. ಅಯ್ಯೊ ಇವ್ನ ಮೂತಿ ನಮ್ಮನೆ ನಾಯಿ ಮೂತಿತರ ಇದೆ ಅಂತ. ನಾಯಿ ಮರಿ ಆದರು ಪರವಾಗಿಲ್ಲ ನಿನ್ನ ಮಡಿಲಲ್ಲಿ ಮಲಗಿ, ಬೊಗಸೆ ಕೈಗಳಿಂದ ನೆವರಿಸಿಕೊಳ್ಳೊ ಸುಖಃವಾದರು ಸಿಗುತ್ತೆ.

    ಅದೆಷ್ಟು ಚಂದಕ್ಕೆ ಒಗ್ಗೂತ್ತೊ ಕಡು ನೀಲಿ ನಿನ್ನ ಮೈಗೆ, ಅದರ್ ಮಹೀಮೆನೆ ಇರಬೇಕು ನಿನ್ನ ಇವತ್ತುನನ್ನ ಮುಂದೆ ಕೂರ್ಸಿರೊದು. ಹದವಾಗಿ ಎಣ್ಣೆ ಹಚ್ಚಿ ನವಿರಾಗಿ ಬಾಚಿಕೊ. ಅ ಕಡು ನೀಲಿ ಸೀರೆ ಉಟ್ಕೊ, ಹೆರಳ ತುಂಬ ಮಲ್ಲಿಗೆಯ ದಂಡೆ ಇರಲಿ, ಹಣೆಯ ತುಂಬ ಕುಂಕುಮ ರಾರಾಜಿಸಲಿ, ಚಿಕ್ಕ ಚುಕ್ಕೆ ದೃಷ್ಟಿಗಾಗಿ, ಕಣ್ಣಂಚಿನಲ್ಲಿ ನಾಚಿಕೆ ಇರಲಿ . ಬತ್ತಿನಿ ನಿಮ್ಮ ಮನೆಗೆ ನಿಮ್ಮಪ್ಪನ್ನ ಕೇಳಕ್ಕೆ, ಒಂದೆ ಮಾತು ….. ಇಲ್ಲ ಅಂದ್ರೆ ರೆಡಿಯಾಗಿರೂ ಹಾರಿಸ್ಕಂಡು ಹೋಗೊದಂತು ಗ್ಯಾರಂಟಿ.

Advertisements

3 Responses to “ಹಾರಿಸ್ಕಂಡ್ ಹೋಗೊದಂತು ಗ್ಯಾರಂಟಿ.”


 1. 1 Richard
  July 16, 2007 at 1:04 pm

  [:)]
  ಬಹಳ ಘಾಡವಾದ ಪ್ರೀತಿ ಅಂಥ ಕಾಣಿಸ್ತಾ ಇದೆ ..
  ಪ್ರೀತಿ ನಿನ್ನದಾಗಲಿ ಮಿತ್ರ ಎಂದು ಮನಸಾರೆ ಹಾರೈಸುತ್ತೆನೆ ..
  ಇದಕ್ಕೆ ಸುಖಾಂತ್ಯ ಸಿಗಲಿ .. [:)]

 2. March 21, 2008 at 8:23 am

  ಮಿತ್ರ ರಿಚ್ಚರ್ಡ್ ನಿಮ್ಮ ಹಾರೈಕೆಗೆ ನಾನು ಧನ್ಯ …… 🙂

  mrityunjay ಅವರೇ…… ನಿಮ್ಮ ಅನಿಸಿಕೆಗೆ ಒಲವಿನ ಧನ್ಯವಾದ……… ಮತ್ತೆ ಮತ್ತೆ ಬನ್ನಿ

  -ಅಮರ


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s


ಯಾವಾಗ ಬರೆದದ್ದು.

ಈ ತಿಂಗಳ ಪಂಚಾಂಗ.

July 2007
M T W T F S S
« Jun   Aug »
 1
2345678
9101112131415
16171819202122
23242526272829
3031  

p

Powered by eSnips.com

%d bloggers like this: