22
ಆಕ್ಟೋ
07

ಬದುಕೆಂಬ ಹಾಯಿ ದೋಣಿ.

ಕತ್ತಲು ಆವರಿಸಿಕೊಳ್ಳುತ್ತಿದ್ದ ಹೊಂಬಣ್ಣದ ಸಂಜೆಯಲಿ ಕಣ್ಣೊಳಗೆ ಸಾಗರನಷ್ಟು ಕನಸುಗಳ ಹೊತ್ತ ಜೀವ ಸಾಗುತ್ತಿದೆ, ಬದುಕೆಂಬ ಸಾಗರದಲ್ಲಿ ಹಾಯಿದೋಣಿಯಾಗಿ. ನಿನ್ನೆ ಕಂಡಿದ್ದ ಕನಸುಗಳು … ಇಂದು ಸಿಕ್ಕ ಉತ್ತರ… ನಾಳೆಯ ಪ್ರಶ್ನೆಗಳು, ಇವೆಲ್ಲವುದರ ಹೊರತಾಗಿ ಎಲ್ಲೊ ಒಂದು ಬೆಳಕಿನ ಕಿರಣ ಹುಡುಕುವ ಅವನ ಅಧಮ್ಯ ವಿಶ್ವಾಸ, ಅದಕ್ಕೆ “ನಂಬಿಕೆ” ಅನ್ನೊದು. ಇಡಿ ಜೀವಮಾನವೆಲ್ಲ ಕಳೆದ ಕೋಟಿ ಕೋಟಿ ಕ್ಷಣಗಳು ನಮ್ಮ ದಾಗಿರದಿದ್ದರು ಮುಂದಿನ ಕ್ಷಣ ಅಥವಾ ಅದರ ಮುಂದಿನದ್ದು ನಮ್ಮದಾಗಲಿದೆಯೆಂಬ ಉತ್ಕಟ ವಿಶ್ವಾಸ ಎಲ್ಲವನ್ನೂ ಮೀರಿ ದಾಟಿಸುತ್ತಿದೆ, ಅವನನ್ನು ಬದುಕಿನ ಹಾದಿಯಲ್ಲಿ…

“ನಂಬಿಕೆ ಎನ್ನುವ ಮೂರುವರೆ ಅಕ್ಷರದ ಪದಕ್ಕೆ ಇರುವ ಶಕ್ತಿ ಅಂತದ್ದು ಇಡಿ ಜೀವಮಾನವೆಲ್ಲ ಹಿಡಿದು ನಿಲ್ಲಿಸುವಂತದ್ದು” ಎಲ್ಲೊ ತಿರುವಿ ಹಾಕಿದ್ದ ಪುಟಗಳ ನೆನಪು ಅಸ್ಪಷ್ಟವಗಿತ್ತು. ಸುತ್ತಲು ಕವಿಯುತ್ತಿದ್ದ ಕತ್ತಲಲ್ಲಿ ನಿನ್ನೆಗಳು ಕರಗಿ ಇವತ್ತಿನ ವಿಶಾಲ ಹಾದಿ ತೆರೆದುಕೊಳ್ಳುತಿತ್ತು. ಬಿಟ್ಟು ಬಂದ ನಿನ್ನೆಗಳು ಇನ್ನೂ ಮನದಾಳದ ಮೂಲೆ ಮೂಲೆಯಲ್ಲಿ ಹಸಿರಾಗಿ ಉಳಿದಿದ್ದವು, ಅವುಗಳನು ಅಟ್ಟಿ ಹೊಸತನವ ತುಂಬಿಕೊಳ್ಳುವ ನಿತ್ಯ ಸಮರಗಳು ಸದಾ ಸಾಗಿದ್ದವು. ಗೆಲುವು ಸೋಲುಗಳ ಹಾದಿಯಲ್ಲಿ ನಲಿವು ನೋವುಗಳ ಉಂಡ ಬದುಕು ಪರಿಪಕ್ವವಾಗತೊಡಗಿತ್ತೆ??? ಮನದಾಳದಲ್ಲಿ ಏಳುವ ಪ್ರಶ್ನೆಗಳಿಗೆ ಆವರಿಸಿಕೊಳ್ಳುವ ತುಸು ಮೌನ, ಬದುಕು ಯಾವುದಕ್ಕು ನಿಲ್ಲದೆ ನಿನ್ನೆಗಳ ಬಿಟ್ಟು ಇಂದು ತನ್ನದಾಗಿಸುತ ನಾಳೆಗಳೆಡೆಗೆ ಸಾಗುತ್ತಿದೆ ಎನ್ನುವಂತಿತ್ತು. ವಿಶಾಲ ವಿಸ್ತಾರಗಳತ್ತ ಸಾಗುತ್ತ ಸುತ್ತಲ ಪ್ರತಿ ಜೀವಿಗಳನ್ನು ಗಮನಿಸುತ್ತ ಒಂದೊದು ಹೆಜ್ಜೆ ಸಾಗಿದಂತೆ ಬದುಕು ಹೊಸ ಹೊಸ ಅನುಭವಗಳ ಪುಟಗಳನ್ನ ತೆರೆದುಕೊಳ್ಳುತಿತ್ತು.

ಮನದಲ್ಲಿ ಭೊರ್ಗರೆಯುತ್ತಿದ್ದ ಅಲೆಗಳ ಹೊಡೆತಕ್ಕೆ ಸಿಕ್ಕಿದ್ದ ಅವನಿಗೆ ಸಾಗರನ ಅಲೆಗಳ ಪರಿವೇ ಇಲ್ಲದ ಮೂಖಹಕ್ಕಿಯಂತೆ ತೀರದುದ್ದಕ್ಕೂ ಸಾಗಿದ್ದ. ಹೊತ್ತು ಮುಳುಗುತ್ತಿದ್ದಂತೆ ಅಲೆಗಳ ರಭಸ ಹೆಚ್ಚಾಗಿ ಅವನು ಹಿಡಿದಿದ್ದ ಹಾದಿ ನೆನಪಾಗಿ, ಒಮ್ಮೆ ಹಿಂತಿರುಗಿದಾಗ ಅವನು ಬಹುದೂರ ಬಂದದ್ದು ಅರಿವಾಗಿ, ಹಿಂತಿರುಗಿದ. ಸಾಗರನ ಅಂಚಿನಲ್ಲೆ ಬದುಕ ಸಾಗಿಸುತ್ತಿದ್ದ ಬೆಸ್ತರ ಹತ್ತಾರು ಪುಟ್ಟ ಗುಡಿಸಿಲುಗಳು. ಒಣಗಲು ಹರಡಿದ್ದ ರಾಶಿ ರಾಶಿ ಮೀನುಗಳು, ಅಲ್ಲಿಂದ ಎಂದು ರಾಚುತಿದ್ದ ನಾರುವ ವಾಸನೆ. ಮರಳಿನ ಗುಡ್ಡೆ ಮಾಡಿಕೊಂಡು ಅಲೆಗಳೊಡನೆ ಕಾದಾಡುವ ಪರಿಯಲ್ಲಿ ಅಡುತಿದ್ದ ಮಕ್ಕಳು. ನಾಳಿನ ತಮ್ಮ ಸಮುದ್ರಯಾನಕ್ಕೆ ಸಿದ್ದವಾಗಲು ಬಲೆಗಳನ್ನು ಸಿದ್ದಮಾಡುತಿದ್ದ ಹತ್ತಾರು ಬೆಸ್ತರು ಅಲ್ಲಲಿ ಕಾಣುತಿದ್ದರು. ಮತ್ತಷ್ಟು ದೂರ ಸಾಗಿ ಬ್ರುಹದಾಕಾರದ ದೀಪದ ಕಂಬವನ್ನು ದಾಟಿ ಮನೆಯ ದಾರಿ ಹಿಡಿದಾಗ ಸುತ್ತಲು ಕತ್ತಲು ಆವರಿಸಿ ಏನು ಕಾಣದಂತಾಗಿತ್ತು. ದೂರದಿ ಸಣ್ಣಗೆ ಉರಿಯುತ್ತಿದ್ದ ದೀಪದ ಬೆಳಕು ಒಳಮನೆಯೆಲ್ಲ ಆವರಿಸಿತ್ತು. ಹತ್ತಿರವಾದಂತೆ ತನ್ನ ಶಕ್ತಿಯನೆಲ್ಲ ಒಂದುಗೂಡಿಸಿ ಒಲೆಯ ಮುಂದೆ ಕೂತು ಕೆಮ್ಮುತಿದ್ದ ಅಮ್ಮನ ಎದಿರಾಯ್ತು.


2 Responses to “ಬದುಕೆಂಬ ಹಾಯಿ ದೋಣಿ.”


  1. ಫೆಬ್ರವರಿ 4, 2008 ರಲ್ಲಿ 9:50 ಫೂರ್ವಾಹ್ನ

    ತೂಂಬಾ ಚೆನ್ನಾದ, ಮನ ಮುಟ್ಟುವ ಬರಹ.. ಅದರಲ್ಲೂ “ನಂಬಿಕೆ ಎನ್ನುವ ಮೂರುವರೆ ಅಕ್ಷರ” ತುಂಬಾ ಇಷ್ಟವಾಯಿತು. ಮೊದಲ ಸಲ ನಂಬಿಕೆ ಎಂಬುದು ಮೂರೂವರೆ ಅಕ್ಷರ ಎಂದು ತಿಳಿಯಿತು 🙂 ನಂಬಿಕೆ ಎನ್ನುವ ಮೂರುವರೆ ಅಕ್ಷರದ

  2. ಫೆಬ್ರವರಿ 8, 2008 ರಲ್ಲಿ 8:11 ಫೂರ್ವಾಹ್ನ

    @ತೇಜಸ್ವಿನಿ ಹೆಗಡೆ

    ನಿಮ್ಮ ಪ್ರೊತ್ಸಾಹಕ್ಕೆ ……. ನಮ್ಮ ಹೃತ್ಪೂರ್ವಕ ವಂದನೆಗಳು.

    – ಅಮರ


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s


ಯಾವಾಗ ಬರೆದದ್ದು.

ಈ ತಿಂಗಳ ಪಂಚಾಂಗ.

ಅಕ್ಟೋಬರ್ 2007
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
« ಆಗಸ್ಟ್   ಫೆಬ್ರ »
1234567
891011121314
15161718192021
22232425262728
293031  

p

Powered by eSnips.com
Advertisements

%d bloggers like this: