17
ಮಾರ್ಚ್
08

ಬ್ಲಾಗು ಮಿತ್ರರ ಮುಖಾಮುಖಿ.

ನಿನ್ನೆ ಸಂಜೆಯ ಬ್ಲಾಗು ಬರಹಗಾರರ ಮತ್ತು ಓದುಗರ ಸಮಾವೇಶದ ಯಶಸ್ಸಿಗೆ ಕಾರಣರಾದ ಎಲ್ಲಾ ಬ್ಲಾಗು ಜೀವಿಗಳಿಗೂ ಮತ್ತು ಓದುಗರಿಗೂ ಧನ್ಯವಾದಗಳು.

ದಟ್ಸ್ ಕನ್ನಡದಲ್ಲಿ ಈ ಕಾರ್ಯಕ್ರಮದ ಬಗ್ಗೆ ….

ಮಾರ್ಚ್ 15,16ರ ಶನಿವಾರ ಹಾಗೂ ಭಾನುವಾರ ವಿಪರೀತ ಸಂಚಾರ ದಟ್ಟಣೆಯ ಎರಡು ಘಟನೆಗಳಿಗೆ ಬೆಂಗಳೂರು ನಗರ ಸಾಕ್ಷಿಯಾಯಿತು. ಹಿರಿಯ ನಾಗರಿಕರಿಗೆ ಮಾಸಾಶನ ವಿತರಣೆ ವಿಳಂಬ ವಿರೋಧಿಸಿ ರಾಜ್ಯ ಬಿಜೆಪಿ ಘಟಕವು ಶನಿವಾರ ಬೃಹತ್ ಪ್ರತಿಭಟನಾ ಪ್ರದರ್ಶನ ಹಮ್ಮಿಕೊಂಡಿತ್ತು. ಈ ಕಾರಣದಿಂದಾಗಿ ವಾಹನ ಸಂಚಾರ ಕೆಟ್ಟು ಮೂರಾಬಟ್ಟೆಯಾಗಿ ರಸ್ತೆ ಬಳಸುವ ನಾಗರಿಕರು ರಾಜಕೀಯ ಪಕ್ಷಗಳ ಪ್ರತಿಭಟನೆಯ ಶೈಲಿಗೆ ಹಿಡಿಶಾಪ ಹಾಕಿದರು.

ಜಿನುಗುವ ಮಳೆ ಮಧ್ಯೆ ನಗರದ ಬಹುತೇಕ ಪ್ರದೇಶಗಳಲ್ಲಿ ಭಾನುವಾರದ ಸಂಚಾರ ಸ್ಥಿತಿ ಸಲೀಸಾಗಿದ್ದರೆ ಬಸವನಗುಡಿ ಪ್ರದೇಶದಲ್ಲಿ ಮಾತ್ರ ಟ್ರಾಫಿಕ್ ಜಾಮ್ ಕಂಡುಬಂದಿತು. ಪ್ರಣತಿ ಪ್ರಕಾಶನ ಸಂಸ್ಥೆ ಹಮ್ಮಿಕೊಂಡಿದ್ದ ಬ್ಲಾಗು ಬರೆಯುವವರ ಪ್ರಪ್ರಥಮ ಸಮಾವೇಶದಿಂದಾಗಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನ ಮೊದಲ ಅಂತಸ್ತಿನಲ್ಲಿರುವ ಮನೋರಮಾ ಸಭಾಂಗಣದಲ್ಲಿ ನಡೆದಾಡುವುದಕ್ಕೂ ಕಷ್ಟ ಎನ್ನುವಂಥ ಸ್ಥಿತಿ ನಿರ್ಮಾಣವಾಗಿತ್ತು.

(ಮುಂದೆ ಓದಿ…)
ಫೋಟೊ ಆಲ್ಬಮ್…

 

ಕೆಂಡಸಂಪಿಗೆಯಲ್ಲಿ ಕಾರ್ಯಕ್ರಮದ ಬಗ್ಗೆ….

ಎಲ್ಲ ಸಮಾರಂಭಗಳಂತೆ ಅಲ್ಲೂ ಒಂದು ಪ್ರಾರ್ಥನೆ, ಸ್ವಾಗತ, ಮತ್ತೆ ಅತಿಥಿಗಳ ಭಾಷಣ.. ಯಾವಾಗಲೂ ಬರೆದು ಅಭ್ಯಾಸವಿರುವ ಬ್ಲಾಗೀದಾರರು ಕಿವಿಯಾಗಿ ಕೇಳುತ್ತ ಕೂತಿದ್ದರು. ಹೀಗೆ ಬರೆಯುವ ಹುಡುಗಿ ಯಾರಿರಬಹುದು, ಸಿಟಿ ಪಾಡ್ದನ ಬರೆಯುವ ಚಂಪಕಾವತಿಯ ರಾಜಕುಮಾರ ಹೇಗಿರಬಹುದು, ಸಂಪದದ ನಾಡಿಗರು ಹೇಗೆ ಮಾತಾಡಬಹುದು, ಮೊದಲ ವೆಬ್ ಸೈಟ್ ತೆರೆದವರ ಕಥನಗಳೇನು, ರಶೀದರು ಬರೆಯುವಷ್ಟೇ ತಮಾಷಿಯಾಗಿ ನೋಡಲೂ ಇರುತ್ತಾರಾ, ಇವತ್ತು ಅವಳು ಸಿಗಬಹುದಾ, ಇವನನ್ನು ಮಾತಾಡಿಸಬಹುದಾ, ಅಂತೆಲ್ಲ ಅಂದುಕೊಂಡು, ಕೆಂಡಸಂಪಿಗೆಯಲ್ಲಿ ಬರೆದಂತೆ ಟ್ರಾಫಿಕ್ ಜಾಮನ್ನೇನೂ ಮಾಡದೆ ಸಭ್ಯವಾಗಿ, ನಾಜೂಕಾಗಿ ಬಂದು ಸೇರಿದ್ದರು ಬಸವನಗುಡಿಯಲ್ಲಿ. ಮೋಡಕಟ್ಟುತಿದ್ದ ಸಂಜೆಯಲ್ಲಿ ವರ್ಲ್ಡ್ ಕಲ್ಚರಿನ ಆವರಣದಲ್ಲಿ ನಿಂತವರ ಮೊಗದ ಮೇಲೆ, ಸುತ್ತಲಿದ್ದ ಮರಗಿಡಗಳ ಸಂದಿಯಲ್ಲಿ ತೂರಿ ಆಗಾಗ ಹೂಬಿಸಿಲು. ಓಹೋ ಇವರು ಬಂದರು, ಆಹ್ ಇವರು ಹೀಗಿದ್ದಾರಾ? ಓಹ್ ಇವರನ್ನು ನೋಡು ಎಂಬ ಅಚ್ಚರಿಯ ಮೆಚ್ಚುಗೆಯ ನೋಟ..
(ಮುಂದೆ ಓದಿ…)

ವೆಬ್ ದುನಿಯಾದಲ್ಲಿ ಕಾರ್ಯಕ್ರಮದ ಬಗ್ಗೆ….
‘ಬ್ಲಾಗುಗಳು ಕೇವಲ ಭಾವನಾ ಲಹರಿಯಲ್ಲಿ ವಿಹರಿಸುವ ತಾಣಗಳಾಗದೆ, ಮಾಹಿತಿಪೂರ್ಣ ಲೇಖನಗಳನ್ನು ಹೊಮ್ಮಿಸಲಿ, ವಿಜ್ಞಾನ ತಂತ್ರಜ್ಞಾನದಲ್ಲಿ ಕನ್ನಡವನ್ನು ಉತ್ತುಂಗಕ್ಕೇರಿಸುವಲ್ಲಿ ಪೂರಕವಾಗಿರಲಿ. ಕನ್ನಡ ಎಂಬುದು ಕೇವಲ ಸಾಹಿತ್ಯಕ್ಕಷ್ಟೇ ಸೀಮಿತವಲ್ಲ, ಅದೊಂದು ಜೀವನವಿಧಾನವೂ ಹೌದು ಎಂಬುದನ್ನು ತೋರಿಸಿಕೊಡಬೇಕು’…
(ಮುಂದೆ ಓದಿ…)

Advertisements

3 Responses to “ಬ್ಲಾಗು ಮಿತ್ರರ ಮುಖಾಮುಖಿ.”


 1. ಮಾರ್ಚ್ 18, 2008 ರಲ್ಲಿ 6:18 ಫೂರ್ವಾಹ್ನ

  ವೆಬ್ ದುನಿಯಾ ಕನ್ನಡ ತಾಣದಲ್ಲೂ ಸುದ್ದಿ ಪ್ರಕಟವಾಗಿದೆ.

  http://kannada.webdunia.com/miscellaneous/literature/articles/0803/17/1080317040_1.htm

  ಧನ್ಯವಾದಗಳು

 2. ಮಾರ್ಚ್ 19, 2008 ರಲ್ಲಿ 3:21 ಫೂರ್ವಾಹ್ನ

  ಅಮರರಿಂದ ಇನ್ನೂ ಹೆಚ್ಚಿನ ಬರಹ ನಿರೀಕ್ಷಿಸಿದ್ದೆ 😦

  ಬಹುಶಃ, ನಿಮ್ಮ ಬರಹವೇ, ಅದುವೇಕನ್ನಡದಲ್ಲಿ ಪ್ರಕಟವಾಗಿರಬೇಕಲ್ವೇ? ಅಂದಿನ ಬ್ಲಾಗಿಗರ ಮಿಲನದ ಬಗ್ಗೆ ಓದಿದೆ, ಚಿತ್ರಗಳನ್ನು ನೋಡಿದೆ. ಈ ವರದಿ ಪ್ರಕಟವಾಗಿರುವ ಎಲ್ಲ ಬ್ಲಾಗುಗಳಿಗೂ ಭೇಟಿಕೊಟ್ಟಿದ್ದಾಯಿತು. ಮನದಲ್ಲೇಕೋ ಬಹಳ ಈರ್ಷ್ಯೆ ಉಂಟಾಗುತ್ತಿದೆ. ಛೇ! ನಾನು ಅಲ್ಲಿ ಬರಲಾಗಲಿಲ್ವೇ? ಪ್ರಣತಿ ತಂಡದ ಚಿತ್ರವನ್ನೂ ನೋಡಿದೆ, ನನಗೆ ಪರಿಚಿತರಿರುವ ಮೂವರು ಮಂದಿಯನ್ನು ನೋಡಿ ಮತ್ತು ಮಿಲನಕ್ಕೆ ಬಂದಿದ್ದ ಬ್ಲಾಗಿಗರ ಅರ್ಧ ಪಾಲನ್ನು ನಾನು ಬಲ್ಲೆನೆಂದು ತಿಳಿದು, ನಾನೂ ನಿಮ್ಮೊಂದಿಗಿರಲಾಗದಿದ್ದಕ್ಕೆ ಮನದಲ್ಲಿ ಬಹಳ ಬೇಸರ ಉಂಟಾಗುತ್ತಿದೆ.

  ಮುಂದಿನ ಮಿಲನಕ್ಕೆ ೧೦-೧೨ ದಿನಗಳ ಮೊದಲು ನನಗೆ ತಿಳಿಸಬೇಕೆಂದು ಕೋರುವೆ. ನಾನು ಬರಲೇಬೇಕು, ನಿಮ್ಮೆಲ್ಲರಲ್ಲಿ ನಾನೂ ಒಬ್ಬನಾಗಬೇಕು. ನಾವೆಲ್ಲರೂ ಒಂದಾಗಿರಬೇಕು.

  ಗುರುದೇವ ದಯಾ ಕರೊ ದೀನ ಜನೆ

 3. ಮಾರ್ಚ್ 19, 2008 ರಲ್ಲಿ 4:42 ಫೂರ್ವಾಹ್ನ

  ಖಂಡಿತ ಗುರುಗಳೆ ಮುಂದಿನ ಬೇಟಿಯಲ್ಲಿ ನೀವು ಇದ್ದೆ ಇರುತ್ತಿರಿ, ಅಂದ ಹಾಗೆ ನಾನು ಈ ಬ್ಲಾಗಿಗಳ ಸಮಾವೇಷದ ಬಗ್ಗೆ ಬರೆದಿಲ್ಲ ……. ಎಷ್ಟೊಂದು ಜನ ಬರೆದಿದ್ದಾರಲ್ಲ …….. ಅವನೆಲ್ಲ ಓದು ಖುಷಿ ಪಟ್ಟೆ 🙂


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s


ಯಾವಾಗ ಬರೆದದ್ದು.

ಈ ತಿಂಗಳ ಪಂಚಾಂಗ.

ಮಾರ್ಚ್ 2008
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
« ಫೆಬ್ರ   ಏಪ್ರಿಲ್ »
 12
3456789
10111213141516
17181920212223
24252627282930
31  

p

Powered by eSnips.com
Advertisements

%d bloggers like this: