18
Mar
08

‘ಟೈ’ ಎಂಬ ಕುತ್ತಿಗೆಗೆ ಸುತ್ತುವ ರಹಸ್ಯ ಗಂಟಿನ ಸುತ್ತ.

ಡಿಗ್ರಿ ಗಿಟ್ಟಿಸುವ ಸಲುವಾಗಿ ಓದೊದನ್ನ ಬಿಟ್ಟು ಸುಮಾರು ಎರಡು ಮುಕ್ಕಾಲು ವರ್ಷಗಳೆ ಕಳೆದು ಹೋದವೆನೊ, ಕಲಿತ ಕಾಲೇಜಿಗೆ ಗುಡ್ ಬೈ ಹೇಳಿ ಕೆಲಸ ಹುಡುಕಿಕೊಂಡು ಈ ಮಹಾನಗರಕ್ಕೆ ಬಂದದ್ದು ಆಯ್ತು. ಐದಾರು ಜನ ಒಟ್ಟಿಗೆ ಕಲಿತವರು ಇಲ್ಲೂ ಕೂಡ ಒಂದೆ ನೆಲೆಯಲ್ಲಿ ಬದುಕುತಿದ್ದಿವಿ, ಬೆಳಗ್ಗೆ ಮಬ್ಬು ಕತ್ತಲೆಯಿಂದಲೆ ಶುಋವಾಗುವ ನಮ್ಮ ಓಟ ಎಲ್ಲ ದಿಕ್ಕುಗಳೆಡೆಗೂ ಸಾಗುತ್ತೆ. ಒಬ್ಬ ಕೇಂಗೆರಿಯಾದರೆ ಮತ್ತೊಬ್ಬ ಎಲೆಕ್ಟ್ರಾನಿಕ್ ಸಿಟಿ ಹೀಗೆ ಸಾಗುತ್ತೆ ಒಬ್ಬೊಬ್ಬರ ದಾರಿ, ಮತ್ತೆ ರಾತ್ರಿ ಕತ್ತಲಲ್ಲಿ ಒಟ್ಟಾಗುವ “ನಮ್ಮ ಸಂಸಾರ ಆನಂದ ಸಾಗರ”.

ಮೊನ್ನೆ ನಮ್ಮನೆಲಿ ಹಬ್ಬದ ವಾತವರಣ ನಮ್ಮ ಹುಡ್ಗ ಪ್ರೀತಿಶ ಇನ್ಪೊಸಿಸ್ ನಲ್ಲಿ ನೌಕರಿ ಗಿಟ್ಟಿಸಿದ್ದ, ಕಂಪನಿ ಕಳ್ಸಿದ್ದ ಹತ್ತಾರು ಪುಟಗಳ ಕಾಲ್ ಲೆಟರ್ ನಲ್ಲಿ ಒಂದೆರಡು ಪುಟ ಹೇಗೆ ಬರ್ಬೆಕು ಯಾವತ್ತು ಯಾವತರಹದ ಬಟ್ಟೆ ತೊಡ್ಬೆಕು ಅಂತೆಲ್ಲ ಮಾರುದ್ದ ಕಂಡಿಷನ್ ಹಾಕಿದ್ರು. ನಮ್ಮ ಸಮಸ್ಯೆ ಶುಋವಾಗಿದ್ದು ವಾರಕ್ಕೆರಡು ದಿನ ಟೈ ಸುತ್ತಿಕೊಂಡು ಹೋಗಬೇಕಾದ ವಿಚಾರ ತಿಳಿದಾಗ. ನಮ್ಮ ಐದು ಮಂದಿಗೂ ಜೀವಮಾನದಲ್ಲಿ ಟೈ ಕಟ್ಟಿಕೊಂಡ ನೆನಪಿಲ್ಲ ಅಭ್ಯಾಸವು ಇಲ್ಲ. ನಾವು ಕೆಲಸ ಮಾಡೊ ಕಂಪನಿಯವರು ಪಾಪ ಯಾವತ್ತು ನಮ್ಮನ್ನ ಹೀಗೆ ಬಟ್ಟೆ ಹಾಕಂಡು ಬನ್ನಿ ಅಂದವರಲ್ಲ. ನನ್ನ ತಂಗಿ ಪ್ರಾಥಮಿಕ ಶಾಲೆಗೆ ಹೋಗೊವಾಗ ಟೈ ಕಟ್ಟಿಕೊಳ್ಳುತಿದ್ದ ನೆನೆಪು, ಆದ್ರೆ ಅಲ್ಲಿ ಗಂಟು ಹಾಕೊ ಪ್ರಮೇಯವಿರಲಿಲ್ಲ. ಅಂಗಿಯ ಕಾಲರ್ ಸುತ್ತ ಸಿದ್ದಮಾಡಿಟ್ಟ ಟೈನ ದಾರ ಕಟ್ಟಿಕೊಂಡರಾಗಿತ್ತು. ಫಾರ್ಮಲ್ ಬಟ್ಟೆ ಧರಿಸಿದರೆ ಇಸ್ತ್ರಿ ಮಾಡ್ಬೆಕಾಗುತ್ತೆ ಅಂತ ಜೀಂನ್ಸ್ ಟೀ ಶರ್ಟ್ ಧರಿಸಿ ಕಾಲ ಕಳೆಯೊ ಪೈಕಿ ನಾವು. ಅಬ್ಬ!!! ಒಂದು ಜೀನ್ಸ್ ಇದ್ರೆ ಸಾಕು ಎಷ್ಟು ಬಾರಿ ಬೇಕಾದ್ರು ಓಗಿದೆ ಹಾಕ್ಕೊಬೊದು…. ಕೊಳೆಯಾದ್ರೆ ಅದೂ ಒಂಥರಾ ಫ್ಯಾಷನ್ 🙂 .

ಕೊನೆಗೆ ಬೆಂಗಳೂರಿನ ಮಿತ್ರ ವೃಂದದಲ್ಲಿ ನಮ್ಮ ಸಮಸ್ಯೆಯನ್ನ ಹೇಳಿಕೊಂಡಾಗ ನಕ್ಕವರೇ ಹೆಚ್ಚು, ಆಲ್ಲ ಮಾರಾಯರ ಎಲ್ಲಾ ಮಲ್ಟಿನಾಷನಲ್ ಕಂಪನಿಗಳಲ್ಲಿ ಕೆಲಸ ಮಾಡ್ತಿರಾ, ಒಂದು ಟೈ ಗಂಟು ಹಾಕ್ಲಿಕ್ಕೆ ಬರ್ಲಿಲ್ಲಾ ಅಂದ್ರೆ ನೀವು ಓದಿದ್ದೆಲ್ಲ ವೇಸ್ಟು, ಅಂತ ನಮ್ಮ ಡಿಗ್ರಿಗೆಲ್ಲ ಬೆಂಕಿ ಇಟ್ರು 🙂 . ನಮ್ಮ ಕಾರ್ಮೆಂಟ್ ಸ್ಕೂಲಿನಲ್ಲೆ ಇದೆಲ್ಲ ಕಲಿಸಿದ್ದಾರೆ ಗೊತ್ತಾ ಅಂದಾಗ ನೆನಪಾದದ್ದು ನಮ್ಮ ಸರಕಾರಿ ಶಾಲೆ. ಕೆಲಸಕ್ಕೆ ಬಾರದನ್ನೆಲ್ಲ ಮಾಡ್ತಿವಿ ಈ ಗಂಟು ಹಾಕೋದು ಕಣ್ಣುಕಟ್ಟಿನ ವಿದ್ಯೆನಾ ಅಂತ ಒಮ್ಮೆ ನೆಟ್ ನಲ್ಲಿ ಗಾಳ ಹಾಕಿ ಅಂದ ಕಾಲದಲ್ಲಿ ಗೆಳೆಯ ಕಳುಹಿಸಿದ್ದ ಒಂದು ಮೈಲ್ ಹಿಡಿದಾಯಿತು ಅದರಲ್ಲಿ ಸಚಿತ್ರವಾಗಿ ಹೇಗೆ ಗಂಟು ಹಾಕೋದು, ಯಾವ ಯಾವ ತರಹದಲ್ಲಿ ವಿಭಿನ್ನವಾದ ಗಂಟುಗಳನ್ನ ಹಾಕಬಹುದು ಎಂತೆಲ್ಲ ಇತ್ತು. ಕೊನೆಗೆ ನಾಲ್ಕಾರು ಬಾರಿ ವಿಚಿತ್ರ ಗಂಟುಗಳನ್ನ ಹಾಕಿ ಕೊನೆಗೆ ರಹಸ್ಯ ಗಂಟನ್ನು ಬೇದಿಸುವ ಹೊತ್ತಿಗೆ ಅಂದು ರಾತ್ರಿ ೧೨ ಆಗಿತ್ತು.

ಮೊನ್ನೆ ರಾತ್ರಿ ಆಫೀಸಿನಿಂದ ವಾಪಸ್ಸಾದ ಪ್ರೀತಿಶನ ಮುಖದಲ್ಲಿ ಒಂದು ಕಳೆ ಇತ್ತು, ಏನ್ಲಾ ಎಂತ ಸಮಾಚಾರ ಎಂದಾಗ ಇವತ್ತಿಂದ ಟೈಗೆ ಗುಡ್ ಬೈ ಇನ್ನು ಜೂನ್ ವರೆಗೆ ಆರಾಮು, ಇಷ್ಟಗಲ ನಕ್ಕ.

“ನಮ್ಮವರು ಯಾಕೇ ಹೀಗೆ ಪಾಶ್ಚಿಮಾತ್ಯ ರೀತಿ ರಿವಾಜುಗಳನ್ನ ಅನುಸರಿಸುತ್ತಾರೊ ಆ ದೇವರೆ ಬಲ್ಲ, ಅವರ ಹವಾಮಾನಕ್ಕೆ ಕೋಟು ಟೈ ಒಗ್ಗೂತ್ತೆ. ನಮ್ಮ ಬೆಂಗಳೂರಿನ ಎಪ್ರಿಲ್ ಮೇ ತಿಂಗಳ ಆ ಸುಡುವ ಬಿಸಿಲಿನಲ್ಲಿ ಸೂಟ್ ಹಾಕಂಡು ಟೈ ಸುತ್ಕಂಡು ಡೈರಕ್ಟ್ ಮೇಲಕ್ಕೆ ಹೋಗ್ಬೆಕು ಅಷ್ಟೆ”.

ನಮ್ಮ ಹಾಗೆ ನೀವು ಈ ಗಂಟಿನ ರಹಸ್ಯ ತಿಳಿಬೇಕೆ ಇಲ್ಲಿ ಕ್ಲಿಕ್ಕಿಸಿ….

http://fungags.blogspot.com/2008/03/tie-problem-solved.html
http://forums.bollyent.com/tie-problem-solved-t-20860.html

 

Advertisements

4 Responses to “‘ಟೈ’ ಎಂಬ ಕುತ್ತಿಗೆಗೆ ಸುತ್ತುವ ರಹಸ್ಯ ಗಂಟಿನ ಸುತ್ತ.”


 1. March 29, 2008 at 5:44 pm

  ಹ ಹ ಹ…ನಿಮ್ಮ ಈ ಅಂಕಣ ನನ್ನ high school days ನೆನಪಿಸಿತು !! ನಾವು ಟೈ ಗೆ ಗಂಟು ಹಾಕಿಕೊಂಡು, blazer ಹಾಕಿಕೊಂಡು ಹೋಗಬೇಕಿತ್ತು ದಿನಾಗಲು ( ನಾವು convent na ಕಂದಮ್ಮಗಳು ). ನಾನು ಮೊದಲ ದಿನ ಗಂಟು ಹಾಕಿಕೊಳ್ಳಲು ಹೋಗಿ ಕುತ್ತಿಗೆ ಹಿಸಿದುಕೊಂಡ ಘಟನೆ ನನಗೆ ಇನ್ನು ನೆನಪಿದೆ ! 😉 ಕಡೆಗೆ ನಮ್ಮ ತಾಯಿ ತಂದೆ ಅದನ್ನು ಹರಸಾಹಸದಿಂದ ಬಿಡಿಸಿ, ನನಗೆ ಗಂಟು ಹಾಕಿಕೊಳ್ಳುವುದನ್ನು ಹೇಳಿಕೊಟ್ಟು ಕಳಿಸಿದರು !! ನಿಮಗಾದರೆ ನೆಟ್ ಇತ್ತು ಗಂತಿನ ರಹಸ್ಯ ಭೇದಿಸಲು…ಆಗ ನನಗೆ ನೆಟ್ಟ್ ಏ ಗೊತ್ತಿರ್ಲಿಲ್ಲ !! ನಮ್ಮ ತಂದೆ ತಾಯಿ ಯೇ “ನೆಟ್ಟ”ಗೆ ಸಹಾಯ ಮಾಡಿದರು !

 2. March 31, 2008 at 4:49 am

  @Lakshmi: ಏನೋ ನಮ್ಮ ಕಷ್ಟ ಅರ್ಥ ಮಾಡ್ಕೊಳ್ಳೊ ಜನ ಉಂಟಲ್ಲ ಅಂತ ಖುಷಿ ಆಯ್ತು 🙂

  -ಅಮರ

 3. January 18, 2012 at 3:24 pm

  Nijavaglu tayi kate keli nanna hindina dinaglu neoapaitu. Thanks sir,


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s


ಯಾವಾಗ ಬರೆದದ್ದು.

ಈ ತಿಂಗಳ ಪಂಚಾಂಗ.

March 2008
M T W T F S S
« Feb   Apr »
 12
3456789
10111213141516
17181920212223
24252627282930
31  

p

Powered by eSnips.com

%d bloggers like this: