06
ಮೇ
08

ಮುಸ್ಸಂಜೆಯ ಮಂದ ಬೆಳಕಿನಲ್ಲಿ ಗಝಲ್ಗಳ ಘಮ ಘಮ.

ಆಗ ತಾನೆ ತಿಣುಕಾಡಿ ಪಿ ಯು ಸಿ ಮುಗಿಸಿ ಡಿಪ್ಲಮೊ ಸೇರಿದ್ದೆ, ಯೋಗ ಕ್ಲಾಸಿನಲ್ಲಿ ಆಗಾಗ ಕೇಳಲು ಸಿಗುತ್ತಿದ್ದ ಭಜನ್ಗಳಿಂದ ತುಂಬಾ ಪ್ರಭಾವಿತನಾಗಿದ್ದೆ, ಯಾರು ಹಾಡಿರಬಹುದು? ಯಾವ ಆಲ್ಬಮ್? ಅಂತೆಲ್ಲಾ ಸಾಕಷ್ಟು ಕುತೂಹಲವಿದ್ದರು, ಅವರಲ್ಲಿ ಕೇಳಿ ತಿಳಿಯಬಹುದೆಂಬ ಸಾಮಾನ್ಯ ಸಂಗತಿ ಆಗ ತಿಳಿಯಲಿಲ್ಲ. ನಂತರ ದಿನಗಳಲ್ಲಿ ತಿಳಿದದ್ದು ಆ ಭಜನ್ಗಳು ಜಗಜೀತ್ ಸಿಂಗ್ ಅವರು ಹಾಡಿರುವ “ಮಾ” ಎಂಬ ಧ್ವನಿ ಸುರಳಿಯಲ್ಲಿದೆ ಎಂದು. ಈ ಸಂಗ್ರಹದಲ್ಲಿ ಅದ್ಬುತವಾದ ಎಂಟು ಭಜನ್ಗಳಿವೆ ಅದರಲ್ಲಿ “ಆನಂದ ಮಯೀ” ಎಂಥವರನ್ನು ಮಂತ್ರಮುಗ್ಧರನ್ನಾಗಿಸದೆ ಇರದು. ಹೀಗೆ ನನಗೆ ಪರಿಚಿತವಾದವರೆ ಗಝಲ್ ಕ್ಷೇತ್ರದ ದಿಗ್ಗಜ ಜಗಜೀತ್ ಸಿಂಗರು.

ಮೊನ್ನೆ ಮುಸ್ಸಂಜೆಯ ಮಂದ ಬೆಳಕಿನಲಿ ನನ್ನ ಹೊಸ mp3 ಪ್ಲೇಯರ್ ನಲ್ಲಿ ಒಂದಷ್ಟು ಗಝಲ್ಗಳನ್ನ ತುಂಬಿಕೊಂಡು ಕೇಳುತಿದ್ದರೆ ಮನವೆಲ್ಲ ಬೆಚ್ಚಗಿತ್ತು. ಅದರಲ್ಲು ಸಿಲ್ಸಿಲೆ ಮತ್ತು ಸಹೇರ್ ಸಂಗ್ರಹಗಳನ್ನ ಕೇಳೊವಾಗಿನ ಮಜವೇ ಬೇರೆ. ಮನದ ಭಾವನೆಗಳನ್ನ ಕೆಲವೆ ಪದಗಳಲ್ಲಿ ಕಟ್ಟಿಕೊಡಬಲ್ಲ ಗಝಲ್ಗಳನ್ನ ಅತ್ಯಂತ ಶ್ರೀಮಂತ ಸಾಹಿತ್ಯ ಪ್ರಕಾರ ಅನ್ನಬಹುದು. ಸಾಮಾನ್ಯವಾಗಿ ಗಝಲ್ಗಳು ದುಗುಡ ದುಮ್ಮಾನುಗಳ ನಡುವೆಯೆ ಹೆಚ್ಚು ಸುಳಿದಾಡುತ್ತವೆ ಅನ್ನುವ ಅಪವಾದವು ಇದೆ, ಗಝಲ್ಗಳನ್ನ ಮುದ ನೀಡುವ ಸಂಗೀತದೊಂದಿಗೆ ಕೇಳಿ ಆನಂದಿಸುವ ಮನವು ಪ್ರಫುಲ್ಲವಾದದೆ ಇರದು. ನಾವು ಕಾವ್ಯ ಭಾಷೆಯಲ್ಲಿ ಸಂಸ್ಕೃತದ ಪದಗಳನ್ನ ಹೇಗೆ ಬಳಸುತ್ತಿವೊ ಹಾಗೆ ಹಿಂದಿಯ ಜೊತೆ ಉರ್ದುವಿನ ಪದಗಳ ಬಳಕೆ ಈ ಗಝಲ್ಗಳಲ್ಲಿ ಕಾಣಬಹುದು. ಉದಾಹರಣೆಗೆ “ಕೂದಲು” ಅನ್ನುವ ಬದಲು “ಕೇಶರಾಶಿ” ಎಂದು ಬಳಸುವಹಾಗೆ, ಅಲ್ಲಿ “ಬಾಲ್” ಅನ್ನೊ ಬದಲು “ಜ್ಯೂಲ್ಫೆ” ಅಂತ ಬಳಸುತ್ತಾರೆ.

ನನ್ನನ್ನ ಕಾಡಿದ ಮತ್ತೊಂದು ಭಜನ್ ಶೃತಿ ಸಡೊಲಿಕರ್ ಅವರ ಕಂಠದಲ್ಲಿ “ಆರತಿ ಕೀಜೆ ಶೈಲಸುತಾ ಕೀ”, ನಿಮಗೂ ಹಿಡಿಸ ಬಹುದು.


2 Responses to “ಮುಸ್ಸಂಜೆಯ ಮಂದ ಬೆಳಕಿನಲ್ಲಿ ಗಝಲ್ಗಳ ಘಮ ಘಮ.”


 1. ಅಕ್ಟೋಬರ್ 8, 2008 ರಲ್ಲಿ 6:36 ಫೂರ್ವಾಹ್ನ

  Amar,
  I am unable to access the link you provided, could you check and update the same, so that we can enjoy the Gajals you mentioned 🙂 ..
  Thanks,
  Prasad

 2. ಅಕ್ಟೋಬರ್ 14, 2008 ರಲ್ಲಿ 12:19 ಅಪರಾಹ್ನ

  ಪ್ರಸಾದ್ ನೀವು ಕಮೆಂಟು ಮಾಡಿದ್ದು ಒಳ್ಳೆದಾಯಿತು, ನಾನು ಕೊಂಡಿಗಳನ್ನ ಇತ್ತಿಚೆಗೆ ಗಮನಿಸಿರಲಿಲ್ಲ 🙂 ಹೊಸದಾಗಿ ಕೊಂಡಿಗಳನ್ನ ಸೇರಿಸಿರುವೆ … “ಮಾ” ಹಾಡುಗಳನ್ನ ಇಲ್ಲಿ ಕೇಳ ಬಹುದು http://www.deezer.com/en/jagjit-singh-chorus/maa-A157116.html
  ಧನ್ಯವಾದ
  ಅಮರ


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s


ಯಾವಾಗ ಬರೆದದ್ದು.

ಈ ತಿಂಗಳ ಪಂಚಾಂಗ.

ಮೇ 2008
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
« ಏಪ್ರಿಲ್   ಜೂನ್ »
 1234
567891011
12131415161718
19202122232425
262728293031  

p

Powered by eSnips.com
Advertisements

%d bloggers like this: