12
May
08

ನನ್ನಮ್ಮ.

ಮೊನ್ನೆ ಚುಣಾವಣೆಯಂದು ಸೊಂಟದ ಮೇಲೆ ಕೈ ಹಾಕೊಂಡು ಮತ ಹಾಕಲು ಸಾಲುಗಟ್ಟಿ ನಿಂತಿದ್ದೆ, ನನ್ನ ಮುಂದಿನ ಸರದಿಯಲ್ಲಿ ಅಮ್ಮ. ಹೆಸರು ಗುರುತಿನ ಚೀಟಿ ಪರೀಕ್ಷಿಸಿದ ಅಧಿಕಾರಿ ಕೆಂಪು ಬಣ್ಣದ ಹಾಳೆಯ ಮೇಲೆ ಚೌಕದಲ್ಲಿ ಅಡಗಿದ್ದ ಸಂಖ್ಯೆಯೊಂದಕ್ಕೆ ಸೊನ್ನೆ ಸುತ್ತಿ ಗುರುತಿಸಿಕೊಳ್ಳುತ್ತ ಅಮ್ಮನನ್ನ ಮುಂದಿನ ಅಧಿಕಾರಿಯತ್ತ ಕಳುಹಿಸಿದ. ಅಮ್ಮನ ಹೆಸರಿದ್ದ ಹಾಳೆಯನ್ನ ಹುಡುಕಿದ ಅವನು ಸಹಿಮಾಡುವ ಜಾಗವನ್ನ ತೋರಿಸುತ್ತಿದ್ದ, ಹಿಂದೆ ನಿಂತ ನಾನು ಗುರುತಿನ ಚೀಟಿಯನ್ನ ತೋರಿಸುತ್ತಿದ್ದೆ, ಸೌಟು ಹಿಡಿದು ತನ್ನ ಅಡುಗೆಯ ಮನೆಯನ್ನ ಆಳುತಿದ್ದ ಅಮ್ಮ ಅಪರೂಪಕ್ಕೆ ಪೆನ್ನು ಹಿಡಿದಿದ್ದಳು. ತಾನು ಕಲಿತ ಅಕ್ಷರಗಳನ್ನೆಲ್ಲ ಜೋಡಿಸಿ ತನ್ನ ಹೆಸರು ಬರೆಯುತ್ತಿದ್ದಳು, ಹಿಂದೆ ಕುತೂಹಲದಿಂದ ಗಮನಿಸುತ್ತಿದ್ದ ನನಗೆ ಆದ ಖುಷಿ ಅಷ್ಟಿಷ್ಟಲ್ಲ. ನನಗೂ ಸರಿಯಾಗಿ ನೆನಪಿಲ್ಲ ಎಳೆಂಟು ವರ್ಷಗಳ ಹಿಂದಿನ ಮಾತು, ಪುಟ್ಟ ಮಗುವಿಗೆ ಅಕ್ಷರಗಳನ್ನ ತಿದ್ದಿಸುವ ಪರಿಯಲ್ಲಿ, ಅಮ್ಮನ್ನ ಕೈಯಲ್ಲಿ ಪೆನ್ನು ಹಿಡಿಸಿ ಅವಳಿಗೆ ಬ್ರಹ್ಮಾಂಡದಂತಿದ್ದ ಅಕ್ಷರಗಳನ್ನ ತಿದ್ದಿಸಿದ್ದು. ಪಕ್ಕದಲ್ಲಿ ಕುಳಿತು ಅದರ ಮೇಲ್ವಿಚಾರಣೆ ವಹಿಸಿದ್ದ ತಂಗಿ, ಅಮ್ಮ ತಿದ್ದುವೆಕೆಯಲ್ಲಿ ತಪ್ಪು ಮಾಡಿದಾಗ ನನ್ನ ಬಳಿ ಅದನ್ನೆಲ್ಲ ಒಪ್ಪಿಸುತ್ತಾ, ಅಮ್ಮ ಒಂದೊಂದು ಸಾರಿ ತಿದ್ದಿದಾಗಲು ತಾನೆ ಹೊಸ ಹೊಸ ಅಕ್ಷರಗಳನ್ನ ಕಲಿತಷ್ಟು ಸಂಭ್ರಮಿಸಿದ್ದಳು.

ತನ್ನ ಅಡುಗೆ ಮನೆಯ ರಾಜ್ಯಭಾರವನ್ನ ಬದಿಗಿಟ್ಟು ಸಮರೋಪಾದಿಯಲ್ಲಿ ಅಕ್ಷರಾಭ್ಯಾಸದಲ್ಲಿ ತೋಡಗಿದ್ದ ಅಮ್ಮನನ್ನ ಕುತೂಹಲದಿಂದ ಗಮನಿಸುತ್ತಿದ್ದ ಅಪ್ಪ, ನಿಮ್ಮಮ್ಮ ಮುಂದಿನ ವರ್ಷ ಕಾಲೇಜ್ ಸೇರ್ಕೊತಾಳಾ ಕೇಳೊ ಎಂದು ರೇಗಿಸಿದ್ದಕ್ಕೆ, ನಿಮ್ಮಪ್ಪನಿಗೆ ಅವಾಗಲೆ ಹೆದರಿಕೆ ಶುರುವಾಗಿರೊ ಹಾಗಿದೆ, ಎಲ್ಲಿ ನಾನೇ ಅಡುಗೆ ಮಾಡ್ಬೇಕಾಗುತ್ತೊ ಅಂತ ಕಣೋ ಎನ್ನುತ್ತ ಅಪ್ಪನ್ನನ್ನ ಬೆಚ್ಚಿಸಿದ್ದಳು. ಮತ್ತೆ ಅಮ್ಮ ಎಷ್ಟು ಕಲಿತಳು? ಏನು ಕಥೆ? ಅನ್ನೊ ಬಗ್ಗೆ ಗಮನಿಸಿರಲಿಲ್ಲ ಅಥವಾ ಅಂತ ಸಂದರ್ಭಗಳು ಬಂದಿರಲಿಲ್ಲ ಅನ್ನಬಹುದು, ಅದರೂ ಅಮ್ಮ ನಾಲ್ಕು ಅಕ್ಷರದ ಅವಳ ಹೆಸರನ್ನು ಬರೆಯುವ ಬ್ರಹ್ಮವಿದ್ಯೆ ಕಲಿತು ಅದನ್ನ ಪ್ರಯೋಗಿಸಿದ್ದನ್ನು ಕಂಡು ಉಬ್ಬಿಹೋದದಂತು ನಿಜ…. 🙂

Advertisements

16 Responses to “ನನ್ನಮ್ಮ.”


 1. 1 arundhati
  May 12, 2008 at 12:20 pm

  Wow! olleya baravanige . . . . ammanige “Tayandira Dinada Shubhashayagalannu Tilisi ” nanninda . . . . nimmantha maganannu namagella kottiddakke avalige estu dhanyavadagalanna helidaru saladu adaru avaranna avaga avaga neneyuvudu nammellara kartavyavagide . . .

  Ee sandharbhadalli bared Ee lekhana chennagi moodi bandide . . hage nimma tandegu heli aduge madodanna Eegale kalitukollali anta . . 🙂

 2. May 13, 2008 at 6:01 am

  ಐ ಗೋ ಎಮೋಶನಲ್! ನಿಜಕ್ಕೂ ಇಂತಹ ಬರಹಗಳಿಗೇ ಅಲ್ವಾ ‘ಮಾತಿಲ್ಲದ ಮೌನ ರಾಗಗಳು’ ಅನ್ನುವುದು?

 3. May 13, 2008 at 12:30 pm

  ಟಚ್ ಆಯ್ತು ಕಣೋ ಅಮರ. ಚೆನ್ನಾಗಿ ಬರದ್ದೀಯ.

 4. May 14, 2008 at 8:25 am

  anna, very nice! touchy kaNale..

 5. May 14, 2008 at 10:19 am

  ನಿಜಕ್ಕೂ ಮಾತಿಲ್ಲದ ಮೌನ ರಾಗ,

  ಅವ್ವಾರಿಗೆ ನಂದೂ ಕಂಗ್ರಾಟ್ಸ ಹೇಳ್ರಿ…

  ಪ್ರೀತಿಯಿರಲಿ

  ಶೆಟ್ಟರು

 6. May 14, 2008 at 12:22 pm

  ಅಮರ್,

  “ಮನೆಯೇ ಮೊದಲ ಪಾಠ ಶಾಲೆ. ತಾಯಿಯೇ ಮೊದಲ ಗುರು..” ಎಂದು ಹೇಳುತ್ತಾರೆ. ಅಂತಹ ತಾಯಿಯ ಸಂಸ್ಕಾರದ ಪಾಠವೇ ಬಹುಶಃ ಇಂದು ಇಂತಹ ಮಾತಿಲ್ಲದ ಮೌನ ರಾಗಗಳನ್ನು ನಿಮ್ಮಿಂದ ಹುಟ್ಟುಹಾಕುತ್ತಿದೆ. ಅಭಿನಂದನೆಗಳು ನಿಮಗೂ ನಿಮ್ಮ ತಾಯಿಯವರಿಗೂ.

 7. May 19, 2008 at 5:48 am

  @arundhati: ಅಮ್ಮಂದಿರ ದಿನದ ಶುಭಾಷಯವನ್ನ ತಿಳಿಸಿದ್ದಿನಿ ಅಮ್ಮನಿಗೆ …… 🙂 ಹಾಗೆ ನಮ್ಮ ಕಡೆಯಿಂದ ಕೂಡ ತಿಳಿಸಿಬಿಡಿ ನಿಮ್ಮ ಅಮ್ಮನವರಿಗೆ ..

  @ಸುಶ್ರುತ: ಎಷ್ಟೆ ಆದರೂ ಅಮ್ಮನ ಬಗ್ಗೆ ತಾನೆ ಬರ್ದಿರೋದು… ಭಾವನೆಗಳು ಉಕ್ಕಲೆ ಬೇಕಲ್ಚ… 🙂

  @ವಿಕಾಸ: ನಿನ್ಗೆ ಟಚ್ ಆದದ್ದೂ ನನ್ಗು ಖುಶಿ ಆತು ಮಾರಾಯ. 🙂

  @ ಶ್ರೀ: ಬಿಜಿ… ಕೆಲಸದಲ್ಲು ಬಿಡುವು ಮಾಡ್ಕೊಂದು ಬಂದದಕ್ಕೆ 🙂

  @ಶೆಟ್ಟರು : ಶ್ಯಾನೆ ಖುಷಿ ಆತು ನೊಡ್ರಿ ನಿಮ್ಮನ್ನ ಕಂಡು …. ಅವ್ವರಿಗೆ ಹೇಳಿನಿ ನಿಮ್ಮ ಬಗ್ಗೆ 🙂

  @ತೇಜಸ್ವಿನಿ: ನಿಮ್ಮ ಪ್ರೀತಿ ಆದರಗಳಿಗೆ … ನನ್ನ ಸಲಾಮ್ …:)

 8. May 19, 2008 at 5:03 pm

  ಎಲ್ಲಾ ಅಮ್ಮಂದಿರೂ ಹಾಗೇನೇ…ಸ್ವಲ್ಪ ಮುಗ್ಧರು..ಸ್ವಲ್ಪ ಹಠ…ಟೋಟಲಿ ಅಮ್ಮ ಲವ್ಲಿ..

 9. May 20, 2008 at 8:09 am

  @ವೇಣು ವಿನೋದ್: ಎಷ್ಟೆ ಆದ್ರು ಲವ್ಲಿ ಅಮ್ಮನ ಮುದ್ದಿನ ಕಂದಮ್ಮಗಳು ತಾನೆ ನಾವು 🙂 ಖುಷಿ ಆತು ನೀವು ಬಂದದ್ದು …. ನಮ್ಮ ಗೂಡಿಗೆ

 10. 10 Annapoorna
  May 30, 2008 at 6:08 pm

  Ninna thangiya shrama, appana abhimaanada phala ammana saadhane, ellarigoo santhosha 🙂

 11. 11 Sunil Kumar
  June 2, 2008 at 5:59 am

  ಪ್ರೀತಿಯ ಅಮರ ಅವರಿಗೆ ನಿಮ್ಮ ಬ್ಲಾಗ್ ನೋಡಿ ನನಗೆ ತುಂಬಾ ಸಂತಸವಾಯಿತು.. ನಿಜಕ್ಕೂ ನಿಮ್ಮ ಮನಸ್ಸಿನ ಮೇಲೆ ತೇಲುತ್ತಿರುವ
  ಭಾವನೆಗಳನ್ನು ಎಲ್ಲರ ಜೊತೆ ಹಂಚಿಕೊಳ್ಳುತ್ತಿರುವ ನಿಮ್ಮಂತರಂಗದ ಆಳ ನನಗೆ ತುಂಬಾ ಹಿಡಿಸಿತು.. ಕವಿತೆಗಳ ಸಂಗ್ರಹ, ಹಲವು ಕನ್ನಡ ಬ್ಲಾಗುಗಳ ಸಮೂಹ ಹಾಗೂ ನಮ್ಮ ಹೃದಯಕ್ಕೆ ಮುಟ್ಟುವ ನಿಮ್ಮ ಮಾತುಗಳು, ನೀವು ಬರೆದಿರುವ ಕವಿತೆಗಳು ( ಒಲವಿನ ಗೆಳತಿ, ಹಣತೆ ಹಚ್ಚೋಣ ಬನ್ನಿ, ದುಂಡು ಮಲ್ಲಿಗೆಯಂತವರು ),ತುಂಬಾ ಅಗಮ್ಯವಾಗಿದೆ.. ನಿಮ್ಮಲ್ಲಿರುವ ಆಸಕ್ತಿಗೆ ನನ್ನ ನಮನಗಳು..ನಿಮ್ಮಿಂದ ಹೀಗೆ ಹೆಚ್ಚು ಹೆಚ್ಚು ಕವನ-ಕವಿತೆಗಳು ಬರುತ್ತಿರಲಿ… ಸ್ನೇಹ ಹಂಚಿಕೊಳ್ಳಲು ಚಹಾ ಕುಡಿಯಲು ಕರೆಯುತ್ತಿದ್ದೀರಾ.. ಹಾಗಾದರೆ ನಿಮ್ಮ ಭೇಟಿ ನನಗೆಂದು…?
  (ಸ್ನೇಹ ಬಯಸೊ ಮನಸು)

 12. June 24, 2008 at 7:00 pm

  ತುಂಬಾ ಚೆನ್ನಾಗಿ ಬರೆದಿದ್ದೀರ ನಿಮ್ಮ ಅಮ್ಮನ ಬಗ್ಗೆ. ಎಂಥಾ ಸೊಗಸಾದ ಅನಿಸಿಕೆ, ಎಲ್ಲರ ಮನೆಯಲ್ಲಿ ಅಪ್ಪ ಅಮ್ಮನ ಮಾತುಗಳು ಅಲ್ಲಿದ್ದವು…
  ಮೇಲೆ ಬರೆದಿದ್ದನ್ನೆಲ್ಲಾ ನಾನು ಮನಸ್ಸಿನಲ್ಲಿ ನೆನಸುತ್ತಾ ಓದುತ್ತಿದ್ದೆ, ಒಂಥರ ಪುಳಕ ಹುಟ್ಟಿತು ಕಣ್ರಿ! ನಿಮ್ಮ ಅಮ್ಮ ಸೂಪರ್!

 13. June 25, 2008 at 5:11 am

  @ ಅನ್ನಪೂರ್ಣ: ಅಕ್ಕ ನಿನ್ನ ಕಮೆಂಟು ನೋಡು ಖುಷಿ ಆತು ಕಣೇ 🙂

  @ ಸುನೀಲ್ ಕುಮಾರ್: ನಿಮ್ಮ ಬರುವಿಕೆಯು ನನಗೆ ಸಂತಸ ತಂದಿದೆ ಸುನೀಲ್ 🙂

  @ ವೀಣಾ ಮೇಡಮ್: “ಅಮ್ಮ” ಅನ್ನೊದಕ್ಕೆ ಇರುವ ಶಕ್ತಿ ಅಂತದ್ದು ಏನು ಬರೇದರು ಚಂದವೆ …. ನೀವು ಬಂದದ್ದು ಖುಷಿ ತಂದಿದೆ 🙂

 14. July 7, 2008 at 8:45 am

  ಆಹಾ ! ತುಂಬಾ ಭಾವಪೂರ್ಣ ಬರಹ ! ನಾನು ನಮ್ಮಮ್ಮನಿಗೆ ಈಮೈಲ್ ನೋಡುವುದು ಮತ್ತು ರಿಪ್ಲೈ ಮಾಡುವುದನ್ನು ಕಲಿಸಿಕೊಟ್ಟದ್ದು ನೆನಪಾಯಿತು ! ಆಗ ನನ್ನ ತಂಗಿಯೂ ಮೇಲ್ವಿಚಾರಣೆಯ ಮಹತ್ಕಾರ್ಯ ನಿರ್ವಹಿಸಿದ್ದಳು ! ತುಂಬಾ ಚೆನ್ನಾಗಿದೆ ಲೇಖನ.

 15. July 25, 2008 at 1:35 pm

  ಲಕ್ಷ್ಮೀಯವರೇ,
  ಹೋ!!! ಅಮ್ಮನಿಗೆ ಗಣಕಯಂತ್ರ ಯುಗವನ್ನ ಪರಿಚಯಿಸುವ ನಿಮ್ಮ ಅಭಿಲಾಶೆಯನ್ನ ಮೆಚ್ಚಲೆಬೇಕು… ಖುಷಿಯಾಯ್ತು ನೀವು ಬಂದದ್ದು 🙂

 16. October 23, 2008 at 5:47 pm

  ಮನಸ್ಸಿಗೆ ಮುಟ್ಟಿತು ನಿಮ್ಮ ಅಮ್ಮನ ಪಾಠ ಕಲಿಯುವ ಈ ಬರಹ !
  ಶಿವು.ಕೆ.


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s


ಯಾವಾಗ ಬರೆದದ್ದು.

ಈ ತಿಂಗಳ ಪಂಚಾಂಗ.

May 2008
M T W T F S S
« Apr   Jun »
 1234
567891011
12131415161718
19202122232425
262728293031  

p

Powered by eSnips.com

%d bloggers like this: