31
ಡಿಸೆ
08

ನೆನಪುಗಳಿಂದ ಕನಸುಗಳೆಡೆಗೆ.

shubhashya01

ಬದುಕೆಂಬ ಪಯಣದಲ್ಲಿ ಕಳೆದು ಹೋಗಿದ್ದವರು ಮತ್ತೆ ಸಿಕ್ಕಿದ್ದಾರೆ, ಸಿಕ್ಕಿದ್ದವರು ಕಳೆದು ಹೋಗಿದ್ದಾರೆ ಆದರು ಬದುಕು ಸಾಗುತ್ತಿದೆ. ಮತ್ತೊಂದು ನವ ವರುಷದ ಹೊಸ್ತಿಲಲ್ಲಿ ಮತ್ತೆ ಮತ್ತೆ ಕಾಡುವ ನೆನಪುಗಳ ಅಮಲಿನಿಂದ ಹೊರ ಬಂದು ಹೊಸ ಕನಸುಗಳತ್ತ ಸಾಗುತ್ತಿದೆ ಬದುಕು. ಕಳೆದ ದಿನಗಳು ಸಾಕಷ್ಟು ಸುಖದ ಘಳಿಗೆಗಳನ್ನ, ಮಡುಗಟ್ಟುವ ದು:ಖವನ್ನ ತಂದಿವೆ. ಇದೆಲ್ಲದರ ಹೊರತಾಗಿ ಸುಖದಲ್ಲಿ ಹಿಗ್ಗಿಸದೆ ದು:ಖದಲ್ಲಿ ಕುಗ್ಗಿಸದೆ ಬದುಕಿನ ಪ್ರತಿ ಕ್ಷಣಗಳಲ್ಲೂ ಹೊಸ ಹೊಸ ಅನುಭವಗಳನ್ನ ತಂದ ಕಳೆದ ವರುಷಕ್ಕೆ ನನ್ನದೊಂದು “ಥ್ಯಾಂಕ್ಸ್” ಇರಲಿ.

ಪುಟ್ಟ ಸಂಬಳದ ಚಾಲಕ ವೃತ್ತಿಯಲ್ಲಿದ್ದೂ, ಸಮಯ ಸಿಕ್ಕಾಗಲೆಲ್ಲ ಪುಸ್ತಕಗಳನ್ನ ಓದಿಕೊಳ್ಳುತಾ ಹತ್ತು ಹಲವು ವಿಚಾರಗಳನ್ನ ನನ್ನೊಡನೆ ಹಂಚಿಕೊಂಡಿದ್ದ ಗೆಳೆಯ ಹಿಂತಿರುಗಿ ಬಾರದಂತೆ ಹೋರಟು ಹೋದ. ಅವನ ನಂ. ಇನ್ನು ನನ್ನ ಮೋಬೈಲ್ ನಲ್ಲೆ ಇದೆ. ಕರೆ ಮಾಡಬಹುದು?? “ಅಮರಣ್ಣ ಈ ಪುಸ್ತಕ ಓದಿದ್ಯಾ” ಕೇಳಬಹುದು?? ಒಮ್ಮೊಮ್ಮೆ ಅನ್ನಿಸುತ್ತೆ. “ಗಿರಿ”ಯನ್ನ ಕಳೆದುಕೊಂಡ ಎಲ್ಲರಿಗೂ ಅವನ ಅಗಲಿಕೆಯ ದು:ಖವನ್ನ ಬರಿಸುವ ಶಕ್ತಿ ಹೊಸ ವರುಷ ತರಲಿ.

ಕಳೆದ ನಾಲ್ಕೈದು ತಿಂಗಳುಗಳಿಂದ “ಮಾತಿಲ್ಲದ ಮೌನರಾಗಗಳು” ಮೌನವಾಗಿದಕ್ಕೆ ಕ್ಷಮೆ ಇರಲಿ. “ಸುಮ್ಮನೆ” ಫೋಟೊ ಬ್ಲಾಗು ಮತ್ತು ಚಿತ್ರ ಕವನಕ್ಕೆ ಹತ್ತಾರು ಚಿತ್ರಗಳನ್ನ ಹಾಕಿದ್ದೆ ನನ್ನ ದೊಡ್ಡ ಸಾಧನೆ :p . ಆದರೆ ಮತ್ತೊಂದೆಡೆ ಸಾಕಷ್ಟು ಪುಸ್ತಕಗಳನ್ನ ಓದಿಕೊಂಡೆ ಅನ್ನೋದು ಪ್ಲಸ್ ಪಾಯಿಂಟ್, ಈ ವರುಷದಲ್ಲಿ ಹೆಚ್ಚಿಗೆ ಓದಿದ್ದು ತೇಜಸ್ವಿಯವರ ಪುಸ್ತಗಳನ್ನ ಅನ್ನೋದು ಮತ್ತೂ ಖುಷಿಯ ವಿಷಯ. ಪುಸ್ತಕ ಓದುವುದ ಹೊರತಾಗಿ ನನ್ನ ಹಳೆಯ ಚಾಳಿಯಾದ ಸಿನಿಮಾ ಮತ್ತು ಡಾಕ್ಯೂಮೆಂಟರಿ ಸಿನಿಮಾಗಳ ಸಂಗ್ರಹ ಅವ್ಯಾಹತವಾಗಿ ಸಾಗಿದೆ. ಭಾಷೆಗಳ ಎಲ್ಲೆ ಮೀರಿ ಹಲವಾರು ಸಿನಿಮಾಗಳನ್ನ ಸಂಗ್ರಹಿಸಿದ್ದೇನೆ, ಹಲವನ್ನ ನೋಡಿಯಾಗಿದೆ. ೫೦ಕ್ಕೂ ಹೆಚ್ಚಿನ ಡಾಕ್ಯೂಮೆಂಟರಿ ಸಿನಿಮಾಗಳು ನನ್ನ ಸಂಗ್ರಹದ ಭಾಗವಾದವು. ಇಷ್ಟಾದರೂ ನನ್ನ ಸಂಗ್ರಹದ ದಾಹ ಇಂಗಿಲ್ಲ. ಇವನ್ನೆಲ್ಲ ಸಂಗ್ರಸಿದಕ್ಕಿಂತ ಗೆಳೆಯರೋಡನೆ ಹಂಚಿಕೊಂಡಾಗಿನ ತೃಪ್ತಿಯೆ ಬೇರೆ….. ಈ ಅವಕಾಶ ದೊರೆತ ನಾನು ಧನ್ಯ.

ಕಳೆದ ವರುಷದ ಅಮಲಿನಿಂದ ಕಳಚಿಕೊಂಡು ಹೊಸ ವರುಷದಲ್ಲಿ ಮಾಡಬೇಕಾದ/ಮಾಡಿಸಬೇಕಾದ ಕಾರ್ಯಕ್ರಮ/ಕೆಲಸಗಳು ಸಾಕಷ್ಟಿವೆ.

* ನಮ್ಮ ಭಾವಗೀತೆಗಳ ಸಂಗ್ರಹ ಹೊಸ ವರುಷದಲ್ಲಿ ಶತಕ ಕಾಣಲಿದೆ (ಸದ್ಯ ನನ್ನ ಬಳಿ ೯೬ ಭಾವಗೀತೆಗಳ  ಸಂಗ್ರಹಗಳಿವೆ).
* ಗೆಳೆಯ ಶೀನಿಧಿ ಡಾ.ಹೆಚ್ ಎಸ್ ವೆಂಕಟೇಶಮೂರ್ತಿಯವರ ಸಮಗ್ರ ಕಾವ್ಯ ಕೊಡಿಸುತ್ತಾನೆ(೨೦೦೮ ರಲ್ಲೆ ತಲುಪಬೇಕಿತ್ತು ಪರವಾಗಿಲ್ಲ ಕಾಯ್ತೇನೆ 🙂 )
* ನಮ್ಮ ಸಿನಿಮಾ ಮತ್ತು ಡಾಕ್ಯೂಮೆಂಟರಿ ಸಿನಿಮಾ ಸಂಗ್ರಹಕ್ಕೆ ಮತ್ತೊಂದಷ್ಟು ಆಹಾರ ಸಿಗಲಿ (ನೀವು ಪ್ರಾರ್ಥಿಸಿಕೊಳ್ಳಿ ನನಗೆ ಸಿಕ್ಕರೆ ನಿಮಗೂ ಸಿಕ್ಕಹಾಗೆ ತಾನೆ).
* ೨೦೦೮ರಲ್ಲಿ ಶುರುಮಾಡಿದ ಚಿತ್ರಸ್ಪಂದನ ಮತ್ತು ನಾಗರೀಕ ಅಂತರ್ಜಾಲ ತಾಣಗಳ ಕೆಲಸ ಕಾರಣಾಂತರಗಳಿಂದ “ಸರಕಾರಿ ಕೆಲಸದ” ಹಾಗೆ ಕುಂಟುತ್ತ ಸಾಗಿದೆ, ಹೊಸ ವರುಷದಲ್ಲಿ ಚುರುಕಾಗಲಿ.
* ನಮ್ಮ ಕವನ ಸಂಗ್ರಹಕ್ಕೆ ಇನ್ನೂ ಹೆಚ್ಚಿನ ಕವನಗಳನ್ನ ಸೇರಿಸಲು ಸಮಯ ಸಿಗಲಿ.
* ೨೦೦೮ರಲ್ಲಿ ಮೂರು ಯಶಸ್ವಿ ಕಾರ್ಯಕ್ರಮಗಳನ್ನ ಕೊಟ್ಟ ಕನಸಿನ ಕೂಸು “ಪ್ರಣತಿ” ೨೦೦೯ರಲ್ಲಿ ಹೊಸ ಹೊಸ ಕಾರ್ಯಕ್ರಮಗಳನ್ನ ಮಾಡುವಂತಾಗಬೇಕು.
* ಹೊಸ ವರುಷದಲ್ಲಿ ಹತ್ತಾರು ಚಾರಣಗಳನ್ನ ಮಾಡುವಂತಾಗಲಿ.

ಸದ್ಯಕ್ಕೆ ಈ ಲಿಸ್ಟನ್ನ ಇಲ್ಲಿಗೆ ನಿಲ್ಲಿಸೋಣ ಅಂತ! ನಾನು ಒಬ್ಬ ಸಾಮಾನ್ಯ ಮನುಷ್ಯ ಅಲ್ವ ಆಸೆಗಳ ಬುತ್ತಿ ಮುಗಿಯೋದೆ ಇಲ್ಲ… ಕನಸುಗಳಿಗೆ ಎಲ್ಲೆ ಅನ್ನೊದೆ ಇರೋಲ್ಲ 🙂

ನಿಮ್ಮೆಲ್ಲರ ಕನಸುಗಳ ನನಸಾಗಿಸುವ ಘಳಿಗೆಗಳನ್ನ ಹೊಸ ವರುಷ ಹೊತ್ತು ತರಲಿ ….
ಶುಭ ಹಾರೈಕೆಗಳೊಂದಿಗೆ.
-ಅಮರ

Advertisements

12 Responses to “ನೆನಪುಗಳಿಂದ ಕನಸುಗಳೆಡೆಗೆ.”


 1. ಡಿಸೆಂಬರ್ 31, 2008 ರಲ್ಲಿ 1:11 ಅಪರಾಹ್ನ

  ೨೦೦೯ರಲ್ಲಿ ಎಲ್ಲಾ ಆಸೆಗಳೂ ಈಡೇರಲಿ ಎಂದು ಕಳೆದು ಹೋಗಿರುವ ಗೆಳೆಯನಿಗೆ ಹಾರೈಸುತಿದ್ದೇನೆ 🙂

 2. ಜನವರಿ 1, 2009 ರಲ್ಲಿ 7:03 ಫೂರ್ವಾಹ್ನ

  🙂

  ella asegaLoo iDerali!:) samagra kavya ee varane sigatte!

 3. ಜನವರಿ 1, 2009 ರಲ್ಲಿ 3:05 ಅಪರಾಹ್ನ

  ಚಾರಣದ ಬಗ್ಗೆ ನಿನಗಿರೋ ಆಸೆಯೂ ಈಡೇರಲಿ ಎಂದು ಈಗ ಬ್ಲಾಗಿನಲ್ಲಿ ಬರೆಯುವುದನ್ನು ಬಿಟ್ಟಿರುವ ಶ್ರೀನಿಧಿಯ ಹೇಳಿಕೆಗೆ ನನ್ನ ಈ ಹಾರೈಕೆಯನ್ನು ಸೇರಿಸುತ್ತೇನೆ. ಶಭವಾಗಲಿ.

 4. 4 Annapoorna Daithota
  ಜನವರಿ 1, 2009 ರಲ್ಲಿ 5:08 ಅಪರಾಹ್ನ

  Ninagiruva olle manassu, aashayagalindale ninna ella aasegaloo eederutthe 🙂

  Thanks for your support during the nightmare in 2008, the worst and disgusting year ever faced.

  Am lucky to have you as my best friend and brother.

  Yes, Life is beautiful 🙂

 5. 5 Prathibha
  ಜನವರಿ 2, 2009 ರಲ್ಲಿ 5:04 ಫೂರ್ವಾಹ್ನ

  Anna… Ninna ella aasegaLu neravErali antha keLkotini…

  Shubha haaraikegaLondige,
  Prathibha…

 6. ಜನವರಿ 2, 2009 ರಲ್ಲಿ 6:06 ಫೂರ್ವಾಹ್ನ

  ಎಲ್ಲರಿಗೂ ಹೋಸ ವರುಷದ ಶುಭಾಷಯಗಳು…

 7. 7 ಮಹಿಮ
  ಜನವರಿ 5, 2009 ರಲ್ಲಿ 4:40 ಅಪರಾಹ್ನ

  hi arun

  hosaa varushada haardika shubhaashayagaLu,nammellara pustaka premakke nIve parOksha spoorti,nimmodane maataadalu aadina (jayanth pustaka bidugade samarambha) aagale illa.matte siguvaa hIge!!

  mahi

 8. 8 Rohini Joshi
  ಜನವರಿ 6, 2009 ರಲ್ಲಿ 8:49 ಅಪರಾಹ್ನ

  Hi Amar, tumba dinagaLa mele matte Gubbachchi~ya kalarava keLi aanandavaaitu:) …ee hosa varshadalli tammella aasegaLu IDerali…nimma pustaka bhanDAra sada beLeyutirali [adarinda nammanta odugarige laabha anta gottu adakke;)]..haan idelladara madhye blog update mADodu maribeDi:->…

 9. ಜನವರಿ 8, 2009 ರಲ್ಲಿ 7:11 ಫೂರ್ವಾಹ್ನ

  ಎಲ್ಲ ಸಹೃದಯಿ ಮಿತ್ರರಿಗೆ ನನ್ನ ಅನಂತ ವಂದನೆಗಳು 🙂
  ನನ್ನ ಪುಣ್ಯ ಯಾರು ಬಹಿರಂಗವಾಗಿ(ಇ ಮೇಲ್ ಮೂಲಕ… ಫೋನ್ ಮೂಲಕ ಬಯ್ದಿದ್ದಾರೆ)ಇಷ್ಟು ದಿನ ಬ್ಲಾಗನ್ನ ಬಿಟ್ಟು ಎಲ್ಲಿ ಹಾಳಾಗಿ ಹೋಗಿದ್ದೆ ಅಂತ ಅಂದಿಲ್ಲ :p
  ನಿಮ್ಮೆಲ್ಲ ಹರಕೆಗಳು ಹೊಸ ವರುಷದಲ್ಲಿ ಸಾಕಾರವಾಗುವಂತಾಗಲಿ …. ಎಲ್ಲರಿಗೂ ಮತ್ತೊಮ್ಮೆ ಹೊಸ ವರುಷದ ಶುಭಾಶಯಗಳು

 10. ಜನವರಿ 15, 2009 ರಲ್ಲಿ 3:50 ಅಪರಾಹ್ನ

  actually bayyOke bandidde(revengeu;p) but chance miss aaytu!!:))
  best wishes for all your wishes’u:) happppy new year’u.
  gubbacchige saryaagi oota-thinDi koTTu adu yaavaaglu chilipili anntaa irO haage nODkoLi:)

 11. 12 Geetha
  ಮೇ 16, 2010 ರಲ್ಲಿ 4:18 ಫೂರ್ವಾಹ್ನ

  yeno tumba dina agittu ninna blog odi, sudheendra avara blog ninda mattae ninna blog ge mattae connect agiddini 🙂 heggiddiya?


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s


ಯಾವಾಗ ಬರೆದದ್ದು.

ಈ ತಿಂಗಳ ಪಂಚಾಂಗ.

ಡಿಸೆಂಬರ್ 2008
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
« ಜುಲೈ   ಜುಲೈ »
1234567
891011121314
15161718192021
22232425262728
293031  

p

Powered by eSnips.com
Advertisements

%d bloggers like this: