ಅಪ್ಪ ಬುದುಕು ಸಾಗಿಸಲು ಕಂಡಿದ್ದ ಅಥವಾ ತಿಳಿದಿದ್ದ ಒಂದೆ ಮಂತ್ರ “ಭೂತಾಯ ಸೇವೆ” ಅದು ಅವನಪ್ಪನಿಂದ ಬಂದ ಬಳುವಳಿ. ಹೆಚ್ಚು ಓದಿಲ್ಲದಿದ್ದರು ಈ ಪ್ರಂಪಚವನ್ನ ತುಂಬಾ ಚನ್ನಾಗಿ ಅರಿತಿದ್ದ, ಅದಕ್ಕೆ ಅವನು ಬದುಕು ಕಟ್ಟಿಕೊಳ್ಳಲು ನಡೆಸಿದ ಹೋರಾಟದ ಅನುಭವಗಳೊ ಅಥವಾ ತುಂಬಾ ಪ್ರಾಕ್ಟಿಕಲ್ ಮನುಷ್ಯನಾಗಿದ್ದೆ ಕಾರಣವಿರಬಹುದು. ಅಮ್ಮ ಓದುವ ಅವಕಾಶದಿಂದ ವಂಚಿತೆ, ಅವಳು ಬೆಳೆದದ್ದು ೮೦ ಕಿಂತಾ ಹೆಚ್ಚಿನ ಜನರಿದ್ದ ಒಂದು ಅವಿಭಕ್ತ ಕುಟುಂಬದಲ್ಲಿ. ಅಲ್ಲಿ ಅವಳು ಓದಬೇಕು ಅಂತಾ ಯೋಚಿಸುವುದೆ ಒಂದು ಅಪಹಾಸ್ಯ. ತನ್ನ ಪುಟ್ಟ ಸಂಸಾರವನ್ನೆ ಪ್ರಪಂಚವಾಗಿಸಿಕೊಂಡವಳು ನನ್ನಮ್ಮ. ಇನ್ನೂ ಪುಟ್ಟ ತಂಗಿಯ ಒಡನಾಟ ನನ್ನದಾಗಿದೆ, ಇವಳು ಮೌನಿ, ಗಂಭೀರೆ ನಮ್ಮನೆ ಎರಡನೆ ತಾಯಿ.

ನಾನು ಹುಟ್ಟಿದು ಅಪ್ಪನ ಊರಾದ ವಾಬಸಂದ್ರ ಎಂಬ ಪುಟ್ಟಹಳ್ಳಿಯಲ್ಲಿ, ಅದು ಹೋಸಕೋಟಿ ತಾಲ್ಲೂಕಿನಲ್ಲಿದೆ. ಮೊದಲ ವಿದ್ಯಾಭ್ಯಾಸ ಅಲ್ಲೆ ಶುಋ ಮಾಡಿದ್ದು. ಅಪ್ಪ ಬದುಕಿನ ಆಸರೆಗಾಗಿ ಮೈಸೂರಿಗೆ ಬಂದು ನೆಲೆಸಿದಾಗ ಅಲ್ಲೆ ನನ್ನ ಮುಂದಿನ ವಿದ್ಯಾಭ್ಯಾಸ ಸಾಗಿತು. ನಾನೇನು ತುಂಬಾ ಬುದ್ದಿವಂತನಲ್ಲ, ಆವರೇಜ್ ಅನ್ನೊ ಕ್ಯಾಟಗೆರಿಗೆ ಸೇರಿದವನು ಅನ್ನ ಬಹುದು, ಡಿಪ್ಲಮೊ ತನಕ ಮೈಸೂರಿನಲ್ಲೆ ಓದಿದ್ದು. ಇಂಜಿನಿಯರಿಂಗ್ ಮುಗಿಸಿದ್ದು ಮಂಡ್ಯದ ಪಿ ಇ ಎಸ್ ನಲ್ಲಿ. ಹಲವಾರು ದಿಕ್ಕುಗಳಲಿ ಹರಿವ ನದಿಗಳು ಕೊನೆಗೆ ಸಾಗರವ ಸೇರುವಂತೆ, ಹೊಟ್ಟೆಪಾಡಿಗಾಗಿ ರಾಜಧಾನಿಯ ಕಡೆ ವಲಸೆ ಬಂದದ್ದು, ಇಲ್ಲೆ ಒಂದು ಪುಟ್ಟ ಕಂಪನಿಯಲ್ಲಿದ್ದೆನೆ.

ಪುಸ್ತಕ ಓದುವ ಹವ್ಯಾಸ ತಿವ್ರವಾಗಿ ಹತ್ತಿದ್ದು ಈ ಊರಿಗೆ ಬಂದಮೇಲೆನೆ ಅನ್ಸುತ್ತೆ. ಎಸ್ ಎಲ್ ಭೈರಪ್ಪ, ರವಿ ಬೆಳಗೆರೆ, ಜಯಂತ ಕಾಯ್ಕಿಣಿ, ತೇಜಸ್ವಿ, ವಸುಧೇಂದ್ರ ಅವರ ಬರಹಗಳು ಇಷ್ಟವಾಗ್ತಾವೆ…… ಈಚೆಗೆ ಪಿ ಲಂಕೇಶರು, ವಿವೇಕ ಶಾನಭಾಗ, ನೇಮಿಚಂದ್ರ, ರಾಘವೇಂದ್ರ ಖಾಸನೀಸ, ಜೋಗಿಯವರನ್ನ ಹಚ್ಚಿ ಕೊಂಡಿದ್ದಿನಿ. ನಮ್ಮ ಮಲ್ಲಿಗೆಯ ಕವಿ ಕೆ ಎಸ್ ನರಸಿಂಹಸ್ವಾಮಿಯವರು ನನಗೆ ಅಚ್ಚು ಮೆಚ್ಚು, ಮೋಹನ ಮುರಳಿಯ ಅಡಿಗರ ಕಾವ್ಯದ ಇಂಪು, ಲಕ್ಷ್ಮೀನಾರಾಯಣ ಭಟ್ಟರ ಕವನಗಳ ಸೊಭಗನ್ನ ಸವಿಯುತ್ತಿದ್ದೆನೆ. ನಿತ್ಯ ಸುಗಂಧವ ಬೀರುವ ನಿಸಾರ್ ಅಹಮದ್ ಅವರ ಕವಿತೆಗಳು, ಕನಸಿನಲಿ ಬರುವ ತುಂಟ ಹುಡುಗಿಯ ಹಾಗೆ ಲಕ್ಷ್ಮಣರಾವ್ ಅವರ ಸಾಲುಗಳು ಕಾಡ್ತವೆ.

ದಿನ ನಿತ್ಯದ ಕೆಲಸಗಳ ನಡುವೆ ಸಂಗೀತಾ ಕೇಳೊದು, ಇಷ್ಟವಾದ ಹಾಡುಗಳನ್ನ ಸಂಗ್ರಹ ಮಾಡೋದು ನನ್ನ ಮತ್ತೊಂದು ಹವ್ಯಾಸ. ರಾಶಿ ರಾಶಿ ಸಿಡಿ/ಡಿವಿಡಿಗಳ ಸಂಗ್ರಹ ಮಾಡಿಟ್ಕೊಂಡಿದ್ದೆನೆ, ಒಂದು ಜನ್ಮ ಕೂತು ಕೇಳೊಷ್ಟು ಇವೆ ಅನ್ಸುತ್ತೆ. ಶುದ್ಧ ಹಿಂದೂಸ್ಥಾನಿ ಇಂದ ಹಿಡಿದು ಜಗಜಿತ್ ಸಿಂಗರ ಗಜಲ್ ತನಕ ನನ್ಗೆ ಇಷ್ಟ, ಕಿಶೋರ್ ಕುಮಾರ್ ನಿಂದ ಯೇಸುದಾಸ್ ವರೆಗೆ ನನ್ಗೆ ಹಿಡಿಸುತ್ತಾರೆ, ಮತ್ತೆ ನಮ್ಮ ಭಾವಗೀತೆ ಬಗ್ಗೆ ಮಾತಾಡೊಹಾಗಿಲ್ಲ. ಒಂದು ಮುಸ್ಸಂಜೆ ಕೈಯಲ್ಲಿ ಚಹಾ ಹಿಡಿದು “ಬೇಸರಿನ ಸಂಜೆ ಇದು ಬೇಕೆನಗೆ ನಿನ್ನ ಜೊತೆ” ಅಂತ ಗುನುಗಿನದರೆ ಹಾಗೆ ತೇಲಾಡಿದ ಅನುಭವ, ಕನಸಿನಲ್ಲಿ ಸಿಕ್ಕ ಚಲುವೆಗೆ “ನಿನ್ನೊಲುವೆಯಿಂದಲೆ ಬಾಳು ಬೇಳಕಾಗಿರಲು” ಅಂತ ಹಾಡ್ಕೊತಾ ಬೆಳಕಾಗೊ ತನಕ ಲೈನ್ ಹೊಡಿಬಹುದು.

ಇಷ್ಟು ಸಾಕು ಅನ್ನಿಸುತ್ತೆ ಒಬ್ಬ ವ್ಯಕ್ತಿಯ ಅಭಿರುಚಿಯನ್ನ ತಿಳಿಯೊಕ್ಕೆ, ಇನ್ನೂ ನನ್ನೊಂದಿಗೆ ಮಾತಾಡೊದಿದ್ದರೆ ಬನ್ನಿ ಒಂದು ಸಂಜೆ ಕೂತು ಮಾತಾಡೊಣ ಬಿಸಿ ಬಿಸಿ ಚಹಾ ಹಿರುತ್ತಾ!!!!!!

– ಅಮರ

mail2amar@gmail.com

Advertisements

11 Responses to “ಬದುಕಿನ ಹಾದಿಯಲ್ಲಿ ನಿಂತು, ನನ್ನ ಬಗ್ಗೆ ನಾಲ್ಕು ಮಾತುಗಳು.”


 1. ಏಪ್ರಿಲ್ 26, 2007 ರಲ್ಲಿ 7:55 ಫೂರ್ವಾಹ್ನ

  ಅಮರ್,

  ನಿಮ್ಮ ಪರಿಚಯ ತುಂಬ ಚೆನ್ನಾಗಿ ಮೂಡಿ ಬಂದಿದೆ……

 2. 4 Richard
  ಮೇ 23, 2007 ರಲ್ಲಿ 12:33 ಅಪರಾಹ್ನ

  ಕಾವ್ಯಗಳ ಆಸೆಯಿಂದ orkutನಲ್ಲಿ ನಿಮ್ಮ ಸ್ನೇಹ ಬಯಸಿದೆ ..
  ಆದರೆ ನನಗೆ ಒಬ್ಬ interesting ಸ್ನೇಹಿತ ಸಿಕ್ಕ!
  ನಿಮ್ಮ blogs ಓದಿದೆ .. ಚೆನ್ನಾಗಿ ಬರೀತಿರಾ ಕಣ್ರಿ ನೀವು ..

 3. 6 Rohini
  ಮಾರ್ಚ್ 5, 2008 ರಲ್ಲಿ 7:12 ಅಪರಾಹ್ನ

  Maaru hodenayya nimma maatugaLa moDige…nange chaha iSTa yaavaaga biDuvaagirtira tiLisi..:-)

 4. 7 ಅರುಂಧತಿ
  ಏಪ್ರಿಲ್ 29, 2008 ರಲ್ಲಿ 6:19 ಫೂರ್ವಾಹ್ನ

  ಅಮರ ಅವರೆ ಇದು ನನ್ಗೆ ಒಂಚೂರು ಇಷ್ಟವಾಲಿಲ್ಲ SORRY 😦

  |

  |

  |

  |

  orkut ದಲ್ಲಿ ಕನ್ನಡಾ ಅಂದ್ರೆ ಏನು . . . ಅಂತಾ ಗೊತ್ತಿರದ ಸುಮಾರು ಜನರಿಗೆ ನಿಮ್ಮ ಅಮೋಘವಾದ ಕನ್ನಡದ ಪ್ರೀತಿಯಿಂದ . . ನಿಮ್ಮಲ್ಲಿ ಅಡಗಿರುವ ಸೂಪ್ತ ,ಸೂಕ್ಶ್ಮ , ಮನಸಿನಿಂದ ಎಷ್ಟೋ ಜನರಿಗೆ ಪ್ರೀಯವಾದ ನೀವು ನಿಮ್ಮ ಬಗ್ಗೆ ಇಷ್ಟರಲ್ಲೆ ಪರಿಚಯ ಮುಗಿಸುತ್ತಿರಾ ಅಂದು ಕೊಂಡಿರಲಿಲ್ಲ ಕ್ಷಮಿಸಿ . . .

  ಸುಮ್ನೆ ಹೇಳಿದೆ ಕೋಪ ಮಾಡಿಕೊಳ್ಳಬೇಡಿ . . . ಇದರಿಂದಾನೆ(ಇಷ್ಟರಿಂದಾ)ಗೊತ್ತಾ . .ನಿಮ್ಮ ಮಾತೃ ಪ್ರೇಮ . .ತಂದೆಯ ಬಗ್ಗೆ ಕಳಕಳಿ . . ಬದುಕಿನನಲ್ಲಿ ಎನನ್ನೋ ಸಾಧಿಸಬೇಕೆಂಬ ಅಸಾಧ್ಯ ಹಂಬಲ . . ನಿಮ್ಮ ಈ ಎಲ್ಲ ನಿಮ್ಮ ಹವ್ಯಾಸಗಳನ್ನಾ ನೋಡುತ್ತಿದ್ದರೆ . . ನಿಮ್ಮನ್ನಾ ಒಬ್ಬ ಪಕ್ಕಾ ” ಭಾವ ಜೀವಿ ” ಅಂತಾ ಕರೆಯೋಕೆ ನನಗೆ ಅನಿಸುತ್ತದೆ . . .

  ನಿಮ್ಮ ಹೇಸರಿಗೆ ತಕ್ಕಂತೆ ನಿಮ್ಮ ಭಾವನೆಗಳೂ ಸಹ ಅಮರವಾಗಿರಲಿ . . . .

  ನಮಸ್ತೇ

 5. 8 muttige
  ಮೇ 28, 2008 ರಲ್ಲಿ 1:58 ಅಪರಾಹ್ನ

  ನಮಸ್ಕಾರಾ …… ಚೆನ್ನಾಗಿದೆ.
  bogase.wordpress.com


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s
ಯಾವಾಗ ಬರೆದದ್ದು.

ಈ ತಿಂಗಳ ಪಂಚಾಂಗ.

ಜುಲೈ 2018
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
« ಡಿಸೆ    
 1
2345678
9101112131415
16171819202122
23242526272829
3031  

p

Powered by eSnips.com
Advertisements

%d bloggers like this: