Archive for the 'ಕಂಡದ್ದು ಕಾಣದ್ದು.' Category

06
ಮೇ
08

ಮುಸ್ಸಂಜೆಯ ಮಂದ ಬೆಳಕಿನಲ್ಲಿ ಗಝಲ್ಗಳ ಘಮ ಘಮ.

ಆಗ ತಾನೆ ತಿಣುಕಾಡಿ ಪಿ ಯು ಸಿ ಮುಗಿಸಿ ಡಿಪ್ಲಮೊ ಸೇರಿದ್ದೆ, ಯೋಗ ಕ್ಲಾಸಿನಲ್ಲಿ ಆಗಾಗ ಕೇಳಲು ಸಿಗುತ್ತಿದ್ದ ಭಜನ್ಗಳಿಂದ ತುಂಬಾ ಪ್ರಭಾವಿತನಾಗಿದ್ದೆ, ಯಾರು ಹಾಡಿರಬಹುದು? ಯಾವ ಆಲ್ಬಮ್? ಅಂತೆಲ್ಲಾ ಸಾಕಷ್ಟು ಕುತೂಹಲವಿದ್ದರು, ಅವರಲ್ಲಿ ಕೇಳಿ ತಿಳಿಯಬಹುದೆಂಬ ಸಾಮಾನ್ಯ ಸಂಗತಿ ಆಗ ತಿಳಿಯಲಿಲ್ಲ. ನಂತರ ದಿನಗಳಲ್ಲಿ ತಿಳಿದದ್ದು ಆ ಭಜನ್ಗಳು ಜಗಜೀತ್ ಸಿಂಗ್ ಅವರು ಹಾಡಿರುವ “ಮಾ” ಎಂಬ ಧ್ವನಿ ಸುರಳಿಯಲ್ಲಿದೆ ಎಂದು. ಈ ಸಂಗ್ರಹದಲ್ಲಿ ಅದ್ಬುತವಾದ ಎಂಟು ಭಜನ್ಗಳಿವೆ ಅದರಲ್ಲಿ “ಆನಂದ ಮಯೀ” ಎಂಥವರನ್ನು ಮಂತ್ರಮುಗ್ಧರನ್ನಾಗಿಸದೆ ಇರದು. ಹೀಗೆ ನನಗೆ ಪರಿಚಿತವಾದವರೆ ಗಝಲ್ ಕ್ಷೇತ್ರದ ದಿಗ್ಗಜ ಜಗಜೀತ್ ಸಿಂಗರು.

ಮೊನ್ನೆ ಮುಸ್ಸಂಜೆಯ ಮಂದ ಬೆಳಕಿನಲಿ ನನ್ನ ಹೊಸ mp3 ಪ್ಲೇಯರ್ ನಲ್ಲಿ ಒಂದಷ್ಟು ಗಝಲ್ಗಳನ್ನ ತುಂಬಿಕೊಂಡು ಕೇಳುತಿದ್ದರೆ ಮನವೆಲ್ಲ ಬೆಚ್ಚಗಿತ್ತು. ಅದರಲ್ಲು ಸಿಲ್ಸಿಲೆ ಮತ್ತು ಸಹೇರ್ ಸಂಗ್ರಹಗಳನ್ನ ಕೇಳೊವಾಗಿನ ಮಜವೇ ಬೇರೆ. ಮನದ ಭಾವನೆಗಳನ್ನ ಕೆಲವೆ ಪದಗಳಲ್ಲಿ ಕಟ್ಟಿಕೊಡಬಲ್ಲ ಗಝಲ್ಗಳನ್ನ ಅತ್ಯಂತ ಶ್ರೀಮಂತ ಸಾಹಿತ್ಯ ಪ್ರಕಾರ ಅನ್ನಬಹುದು. ಸಾಮಾನ್ಯವಾಗಿ ಗಝಲ್ಗಳು ದುಗುಡ ದುಮ್ಮಾನುಗಳ ನಡುವೆಯೆ ಹೆಚ್ಚು ಸುಳಿದಾಡುತ್ತವೆ ಅನ್ನುವ ಅಪವಾದವು ಇದೆ, ಗಝಲ್ಗಳನ್ನ ಮುದ ನೀಡುವ ಸಂಗೀತದೊಂದಿಗೆ ಕೇಳಿ ಆನಂದಿಸುವ ಮನವು ಪ್ರಫುಲ್ಲವಾದದೆ ಇರದು. ನಾವು ಕಾವ್ಯ ಭಾಷೆಯಲ್ಲಿ ಸಂಸ್ಕೃತದ ಪದಗಳನ್ನ ಹೇಗೆ ಬಳಸುತ್ತಿವೊ ಹಾಗೆ ಹಿಂದಿಯ ಜೊತೆ ಉರ್ದುವಿನ ಪದಗಳ ಬಳಕೆ ಈ ಗಝಲ್ಗಳಲ್ಲಿ ಕಾಣಬಹುದು. ಉದಾಹರಣೆಗೆ “ಕೂದಲು” ಅನ್ನುವ ಬದಲು “ಕೇಶರಾಶಿ” ಎಂದು ಬಳಸುವಹಾಗೆ, ಅಲ್ಲಿ “ಬಾಲ್” ಅನ್ನೊ ಬದಲು “ಜ್ಯೂಲ್ಫೆ” ಅಂತ ಬಳಸುತ್ತಾರೆ.

ನನ್ನನ್ನ ಕಾಡಿದ ಮತ್ತೊಂದು ಭಜನ್ ಶೃತಿ ಸಡೊಲಿಕರ್ ಅವರ ಕಂಠದಲ್ಲಿ “ಆರತಿ ಕೀಜೆ ಶೈಲಸುತಾ ಕೀ”, ನಿಮಗೂ ಹಿಡಿಸ ಬಹುದು.

04
ಜೂನ್
07

ಹೋರಾಟದ ಹಾದಿ.

   ಒಂದು ಇಂಜಿನಿಯರಿಂಗ್ ಡಿಗ್ರಿ ತಗಂಡು ಇನ್ಪೊಸಿಸ್,ವಿಪ್ರೊ ಅಂತ ಕಂಪನಿ ಸೆರಕಳ್ಳದ್ದು ಇವತ್ತು ದೊಡ್ಡ ವಿಷಯ ಅಲ್ಲ ಕಣ್ ರೀ!!!. ೨ ತಿಂಗಳು ಅಲ್ಲಾಡದೆ ಓದ್ರೆ ೭೦% ಜೊಬ್ನಾಗ ಇರ್ತದೆ…ಅದೆ ಕೋಸ್ಚನ್ ….ಅದೆ ಆನ್ಸರ್…….         ೩ ಗಂಟೆಲಿ ಮುಗಿದು ಹೊಗುತ್ತೆ ಲೈಫ್.ಆಮೇಲೆ ಇದ್ದೆ ಇದೆಯಲ್ಲ ಶಕುಂತಲಾ ದೇವಿ …ಜಾರ್ಜ್ ಸಮ್ಮರ್ಸ್…. ಮತ್ತೆ ಒಂದಷ್ಟು ಆಪ್ಟಿಟ್ಯೋಡ್ ಇದ್ರೆ…೨೦-೩೦ ಸಾವಿರ ಸಂಬಳ ಬರೊ ಕೆಲ್ಸ ಗ್ಯಾರಂಟಿ….೨ ವರ್ಷದಲ್ಲಿ ಕಾರು ಬರುತ್ತೆ …………..  ೪-೫ ವರ್ಷಗಳಲ್ಲಿ ಫ್ಲಾಟು ನಮ್ಮದಾಗುತ್ತೆ …. ನೆಮ್ಮದಿಯಾಗಿ ಸೆಟಲ್ ಆಗಬಹುದು.

   ಆದರೆ ಒಬ್ಬ ರೈತ ಆಗೊದು ಆಷ್ಟು ಸುಲಭ ಅಲ್ಲ, ಯಾವ ಕಾಲೇಜಿನ ಡಿಗ್ರಿ ತಗಂಡು ರೈತ ಆಗಕ್ಕೆ ಆಗಲ್ಲ. ಅದಕ್ಕೆ ಒಂದು ಸತತ ಪರಿಶ್ರಮ ಬೇಕು, ತಾಳ್ಮೆ ಬೇಕು ….. ಮೇಲಾಗಿ ಒಂದು ತಪಸ್ಸು ಮಾಡುವಷ್ಟು ಶಕ್ತಿ ಬೇಕು….ಎಲ್ಲ ಮುಗಿತು ಅಂತ ಸುದಾರಿಕೊಳ್ಳಕಾಗೊಲ್ಲ…….ದಿನ ಹೊಸದೆನೆ ….ದಿನಾನು ಹೊರಾಟನೆ ..ಧಣಿವು ಅಂತ ಕೂತರೆ ನೆಣಿನ ಕುಣಿಕೆಗೆ ತಲೆಯೊಡ್ಡ ಬೇಕಾಗ್ತದೆ.

   ನಾವೇನು ಯಾವಾಗ್ಲು ಆರಾಮಾಗ್ ಇರ್ತಿವಿ ೬ ತಿಂಗಳಗೊ ವರ್ಷಕ್ಕೊ ಸಂಬಳ ಜಾಸ್ತಿ ಆಗುತ್ತೆ … ಇಲ್ಲಾ ಅಂದ್ರೆ ಇದ್ದೆ ಇದೆಯಲ್ಲ ಜಂಪು !!!!.. ೧ ಕಿಲೊ ಟಮೊಟೊ ೨೫ ಪೈಸೆ ಅಂದರೆ ….೧೦ ಕಿಲೋ ತಗಂಡು ಬಂದು ಎಲ್ಲಾದಕ್ಕು ಅದನ್ನೆ ಹಾಕ್ತಿವಿ …..೨೫ ರೂ ಕಿಲೋ ಅಂದ್ರೆ ಅರ್ದ ಕಿಲೋ ತಂದು ಅಡ್ಜಸ್ಟ್ ಮಾಡ್ಕೋತ್ತೆವೆ. ನಮ್ಗೆ ಇದು ಅಂತ ತಲೆ ಕೆಡಿಸಿಕೊಳ್ಳೊ ವಿಷಯವಾಗಿರಲ್ಲ, ೨೫ ಪೈಸೆ ಇದ್ದಾಗ ಆ ರೈತನ ಗತಿ ಎನಾಗಿರಬೇಡ ಯೊಚ್ಸಿದ್ದಿರಾ.

   ನಾವು ದಿನ ಪೆಪರ್ ನಲ್ಲಿ, ಟಿವಿನಲ್ಲಿ ಅತ್ಮಹತ್ಯೆ ಮಾಡಿಕೊಂಡ ನೂರಾರು ರೈತರ ಬಗ್ಗೆ ತಿಳಿತೆವೇ ಆದರೆ ಬದುಕಿದ್ದು ಸತ್ತಂತೆ ಆಗಿರೊ ಲಕ್ಷಾಂತರ ಜನರೆಡೆಗೆ ನಾವು ಗಮನ ಹರಿಸೆ ಇಲ್ಲ. ಒಂದು ಐಟಿ ಕಂಪನಿ ಹುಟ್ಟಿಹಾಕಿ ೨%-೫% ಜನರ ಜೀವನ ಮಟ್ಟ ಸುಧಾರಿಸೊದು ಒಂದು ಸಾಧನೆನೆ, ಆದರೆ ಅದಕಿಂತ ಮಿಗಿಲಾಗಿ ಲಕ್ಷಾಂತರ ಜನಕ್ಕೆ ೨ ಹೊತ್ತಿನ ಗಂಜಿಗೆ ದಾರಿಮಾಡೊದು ಒಂದು ದೊಡ್ಡ ಸಾಧನೆ ಅನ್ನೊದು ನನ್ನ ಅನಿಸಿಕೆ. ಸಾವಿರ ಜನ ಬರ್ತಾರೆ ಹೊಗ್ತಾರೆ … ನಾಳೆ ಇನ್ನೊಬ್ಬರು ಅದಿಕಾರಕ್ಕೆ ಬರ್ತರೆ..ಎಲ್ಲರೂ ಒಂದೆ ಜಾತಿಯವ್ರು… ಬಣ್ಣಗಳು ಬೇರೆ ಬೇರೆ, ಪಾತ್ರಗಳು ಬೇರೆ ಬೇರೆ ಅಷ್ಟೆ.

   ಒಂದು ಕಾಲ ಇತ್ತು ರೈತನೇ ಈ ದೇಶದ ಬೆನ್ನೆಲುಬು ಅನ್ನೊರು , ಈಗ ಎಲುಬು ಇಲ್ಲದ ಬೆನ್ನು ಮಾತ್ರ ಇದೆ.ಇಷ್ಟೆಲ್ಲ ಹೇಳೊ ಉದ್ದೆಶ ಒಂದೆ ಎಲ್ಲರಿಗೂ ನಿಜವಾದ ಪರಿಸ್ಥಿತಿಯ ಅರಿವಾಗಲಿ ಅಂತ…. ನೀಜವಾಗಿ ಕ್ರಾಂತಿ ಆಗಬೆಕಿದ್ದರೆ ಇಲ್ಲಿಂದಲೆ ಶುರು ಮಾಡ ಬೇಕು.ಈ ನಮ್ಮ ಸಾಪ್ಟ್ ವೇರ್ ಪ್ರಪಂಚ ಹೇಗೆ ಸ್ಕಿಲ್ಲಡ್ ವರ್ಕರ್(ನುರಿತ ಕೆಲಸಗಾರ)ಕೇಳುತ್ತೊ ಹಾಗೆ ಇಲ್ಲೂ ನುರಿತ ಕೆಲಸಗಾರರ ಅವಶ್ಯಕತೆ ಇದೆ.ಇಲ್ಲೂ ಕೂಡ ವೃತಿಪರ ಜನರು …. ಸಾಧನೆಗಳನ್ನ ಮಾಡುವಂತ ಕನಸಹೊತ್ತವರು ಬೇಕು, ಆಗ ಇದು ಒಂದು ಪ್ರಭಲ ಉದ್ಯಮವಾಗಿ ನಿಲ್ಲಬಲ್ಲದು.

   ನನಗನ್ನಿಸಿದನ್ನು ಇಲ್ಲಿ ವ್ಯಕ್ತಪಡಿಸಿರುವೆ …. ಇದನ್ನ ಒಪ್ಪುವುದು ಬಿಡುವುದು ಅವರವರ ಅರಿವಿಗೆ ಬಿಟ್ಟದ್ದು……
ಬನ್ನಿ ….ಹನಿ ಹನಿ ಗೂಡಿದರೆ ಹಳ್ಳ …. ತೆನೆ ತೆನೆ ಸೇರಿದರೆ ಬಳ್ಳ …..ಎಲ್ಲರೂ ಸೇರಿ ದುಡಿಯೋಣ.

19
ಮೇ
07

1 Kg ಪ್ರೀತಿ… 2 Kg ವಿಶ್ವಾಸ… 4 Kg ನೆಮ್ಮದಿ…

       ಬದುಕಿನ ಹಾದಿನೆ ಹಾಗೆ, ನಾವು ಹೊಗ್ತಾಯಿರೊದು stright ರೊಡ್ ಯಾವುದೆ ಕವಲುಗಳಿಲ್ಲ ಅಂತ ನಮ್ಮದೆ ವೇಗದಲ್ಲಿ ಸಾಗ್ತಿರುತ್ತೆವೆ. ನಾವು ಗಮನಿಸಿಯೆ ಇರಲ್ಲ ನಾವು ನಡೆವ ಹಾದಿಯಲ್ಲಿ ನೂರಾರು ಕವಲುಗಳಿರುತ್ತವೆ ಅಂತ,ನಾವು ಸಾಗೊದು ನೇರವಾಗೆ ಅಂದು ಕೊಂಡಿರುತ್ತೆವೆ. ಆದರೆ ಎಷ್ಟೊಂದು ಜೀವಗಳು ಈ ಹಾದಿಯಲಿ … ಅಕಸ್ಮತ್ತಾಗೋ ಅಥವಾ ನಮಗೊಸ್ಕರನೊ ಕಾಯತಾ ಇರ್ತಾರೆ… ನಿಜವಾಗ್ಲು ಅಶ್ಚರ್ಯ ಆಗುತ್ತೆ. ಒಂದು ಖುಷಿ ಅಂದರೆ ಮೊನ್ನೆ ಮೊನ್ನೆ ತನಕ ಯಾರು ಅಂತ ಗೊತ್ತಲ್ಲದೊರು ಮಾತಾಡಿದ ಮರು ಘಳಿಗೆಯಿಂದ ಇವರು ನಮ್ಗೆ ತುಂಬಾ ಹತ್ತಿರ ವಾದವರು ನಮ್ಗೆ ಸೂರ್ತಿ ಸೆಲೆಯಾದವರು ಅಂತ ಮನಸ್ಸಿಗೆ ಭಾಸವಾಗುತ್ತೆ.ಇದೆನು ವಿಚಿತ್ರ ನೋಡಿ ಆದರು ಇದೆಲ್ಲ ಒಳ್ಳೆದೆನೆ …. ನಮ್ಮ ಭಾವನೆಗಳಿಗೆ ಸ್ಪಂದಿಸುವಂತ , ಹೃದಯಕ್ಕೆ ಹತ್ತಿರವಾದ ಮನಸ್ಸಿನೊರಿ ಸಿಗೊದು ಬಹಳ ವಿರಳ .

         ಈ ಪ್ರಾಕ್ಟಿಕಲ್ ಪ್ರಪಂಚದಲ್ಲಿ ಎಲ್ಲವೂ ಯಾತ್ರಿಕ ಯಾರು ಯಾರನ್ನು ಯಾವುದೆ ಉದ್ದೆಶವಿಲ್ಲದ ಅಥವಾ ಲಾಭವಿಲ್ಲದೆ ಒಂದು ಮಾತು ಆಡೊಲ್ಲ ….ಯಾಕಂದರೆ ಇದು ಕೊಟ್ಟು ತೊಗೊಳ್ಳೊ Business ಪ್ರಪಂಚ, ಇಲ್ಲಿ ಎಲ್ಲಕ್ಕೂ ಬೆಲೆ ಕಟ್ಟೊ ಜನ ಇದ್ದಾರೆ… ಪ್ರೀತಿಗೆ …. ವಿಶ್ವಸಕ್ಕೆ… ಸ್ನೇಹಕ್ಕೆ . ಏನಾದರು ಇವಕ್ಕೆಲ್ಲ ಬೆಲೆ ಇದ್ದಿದ್ದರೆ ಇಂಡಿಯನ್ rupee ನಲ್ಲೊ ಅಮೇರಿಕನ್ ಡಾಲರ್ ನಲ್ಲೊ ಇದ್ದಿದರೆ … ದೇವರಾಣೆ ಇದು ನಮ್ಮ ನಿಮ್ಮ ನಡುವೆ ಇರ್ತಾನೆ ಇರ್ಲಿಲ್ಲ . ಅದು BDA ಸೈಟ್ ತರ ಆಗೊಗ್ತಿತ್ತು. ಅಬ್ಬ !!! ದೇವರು ದೊಡ್ಡವನು ನಿಜವಾಗಿ ನಮ್ಮಂತ ಜನರ ಬಗ್ಗೆ ಸ್ವಲ್ಪನಾದರು ಕರುಣೆ ತೊರ್ಸಿದ್ದಾನೆ, ಅದಕ್ಕೆ ನಾವು ಅವನಿಗೆ ರುಣಿಗಳಾಗಿರ ಬೇಕು.

          ಆ ಪರಿಸ್ಥಿತಿ ನಿನೆಸಿಕೊಂಡರ ನಗು ಬರುತ್ತೆ ನನ್ಗೆ….. ದುಡ್ಡಿರೊರು ಸೀದಾ ಕಾರ್ ತಗಂಡು MG ರೊಡ್ಗೊ ಬ್ರೀಗೆಡ್ ರೊಡ್ಗೊ ಅಥವ ಸೆಂಟ್ರಲ್ … ಪೊರಂ ಕಡೆ ಹೋರಟು ನಮ್ಗೆ 4 Kg ಪ್ರೀತಿ …. 6 Kg ವಿಸ್ವಾಸ ಕೊಡಿ ಅಂತಿದ್ದರೆನೊ…. ನಾವು 10 Kg ಸ್ನೇಹ ತಗಂದಿದ್ದಿವಿ …. ಇದಕ್ಕೆನು offer ಇಲ್ವ 1 Kg ಪ್ರೀತಿನಾದ್ರು ಕೊಡಿ ಅಂತ ತಗಾದೆ ತೆಗಿತಿದ್ದರು. ಕೊನೆಗೆ ನಮ್ಮಂತವರು …. ಮಾರ್ಕೆಟ್ ಗಲ್ಲಿಗಳಲ್ಲಿ ಹಳಸಿದ ಪ್ರೀತಿ….. ನಂಬಲಾಗದ ವಿಶ್ವಾಸ … ಗಳಿಸಲಾಗದ ಸ್ನೇಹ ಕೊಂಡು ಕೊಂಡು ಬರುವಹಾಗಾಗುತ್ತಿತ್ತು. ನಮ್ಮ TIMES OF INDIA ನವರು ಒಳ್ಳೆ ಕಲರ್ ಕಲರ್ add ಹಾಕುತಿದ್ದರು….. ದೀಪಾವಳಿ Offer ನಿಮ್ಮ ಮನೆಗೆ ..ಪಟಾಕಿ ಜೋತೆ 1 Kg ಪ್ರೀತಿನಾ ಕೊಡ್ತಾರೆ …. ಸೆಂಟ್ರಲ್ ನಲ್ಲಿ , hurry up …. this offer ಪ್ರೀತಿ ಇರೊತನಕ ಮಾತ್ರ ಅಂತ…..

        ಸದ್ಯ ಯಾವುದು ಆಗಿಲ್ಲ ಬದುಕೊಡ್ವಿ ಅಬ್ಬ!!!!! , ಎರಡು ಹೊತ್ತಿನ ಗಂಜಿಗಾಗುವಷ್ಟು ದುಡಿದರು, ನಮ್ಮಲ್ಲಿ ಪ್ರೀತಿಗೆ, ಸ್ನೇಹಕ್ಕೆ ,ವಿಶ್ವಾಸಕ್ಕೆ  ಕೊರತೆಯಿಲ್ಲ… ನಾವು ನೆಮ್ಮದಿಯಾಗಿ ನಮ್ಮದೆ ಪುಟ್ಟ ಪ್ರಪಂಚದಲ್ಲಿ ಬದುಕುತ್ತಿದ್ದೆವೆ…. ಎಲ್ಲರನ್ನು ಬದುಕಲು ಬಿಟ್ಟಿದ್ದೆವೆ……… ನಾವೆ ಧನ್ಯ ಅಲ್ವ ???

ಬೇಂದ್ರೆ ಅಜ್ಜನ ಈ ನಾಲುಗಳು ನೆನಪಾದವು ….” ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು “……..ಎಷ್ಟು ಸತ್ಯ ನೋಡಿ……

12
ಮಾರ್ಚ್
07

ಬದುಕು.

ನೆಗಿಲ ಹೇಗಲೆರಿಸಿ ದನಗಳೊಡನೆ ಹೊರಡುತ್ತಾನೆ,ಬೆಳ್ಳಬೆಳ್ಳಿಗ್ಗೆ ಈ ಸಲ ಸಾಗುವಳಿ ಚಂದಾಗಾಯ್ತದೆ, ಮೊಡ ಕಾಣ್ತಾವೆ ಮಳೆ ಬಂದರು ಬರಬಹ್ದು. ನಮ್ಮ ಐನೊರು ಹೇಳದ್ರು ಈ ವರ್ಸ ಒಳ್ಳೆ ಮಳೆ ಆಯ್ತದೆ ಮಾರ, ನನ್ಗೂ ಹೊದಸಲದ ಬಾಗಿ ದವಸ ಕೊಡ್ತಿಯಾ ಬಿಡು…… ಅದೆ ಗುನುಗಿನಲ್ಲಿ ಆಕಾಶವನ್ನೆ ಬಿಟ್ಟ ಕಣ್ಣು ಬಿಟ್ಟ ಹಾಗೆ ನೊಡುತ್ತಾ ,ಆ ಮೊಡಗಳ ಅಲೆದಾಟ ಕಣ್ಣುಗಳನ್ನ ರಾಚುತ್ತಿವೆ. ಈ ವರ್ಸನಾದ್ರು ಒಳ್ಳೆ ಮಳೆ ಬಿಳ್ಸು ಮಳೆರಾಯ ಒಂದಷ್ಟು ಬೆಳ್ಕೊತ್ತಿವಿ, ದನಗಳು ಸೊಂಪಾಗಿ ಮೆಯೊ ಹುಲ್ಲು ಸಿಕ್ಕುತ್ತೆ ಅನ್ನುತ್ತಾ ಹೆಜ್ಜೆಹಾಕುತ್ತಾ ಹೊಲದ ಕಡೆ ಹೊರಟ.

ಸುತ್ತ ಮುತ್ತಲೆಲ್ಲ ಬಿರುಕು ಬಿಟ್ಟ ನೆಲ, ಕೆಂಚಯ್ಯನ ಹೊಲದ ಬದುವಿನ ಮೇಲಿನ ಹಲಸಿನ ಮರ , ಆ ಬಯಲಿಗೆಲ್ಲ ಕಾಣುತ್ತಿದ್ದ ಹಸಿರು ಹೊದ್ದ ಒಂದೆ ಜೀವ . ಮರುಳುಗಾಡಿನಲ್ಲಿ ಓಯಸಸ್ ಇದ್ದ ಹಾಗೆ ಎಲ್ಲವನ್ನು ಎದುರಿಸಿ ನಿಂತಿದೆ.
ಮುಂದೆ ಸಾಗಿ ತನ್ನ ಹೊಲವನ್ನು ಕಂಡು ಒಂದು ನಿಟ್ಟುಸಿರು ಬಿಟ್ಟು ,ಹೆಗಲ ಮೇಲಿನ ಭಾರವನ್ನು ಇಳಿಸಿ, ಎಲ್ಲಿಂದ ಶುರು ಮಾಡೊದು ಉಳುಮೆ ….ಭೂಮಿ ಬಾಯಿ ಬಿಟ್ಟು ಬರಡಾಗಿದೆ.

ಹೊದ ವರುಸ ಕೂಡ ಸರಿಯಾಗಿ ಮಳೆ ಇಲ್ಲ,ಉಳುಮೆ ಮಾಡಕ್ಕು ಆಗಲಿಲ್ಲ ವಲ್ಲ ಅಂತ ನೆನಪಾಯಿತು .ನೆಗಿಲ ಹೂಡಿ ಉಳೊಕ್ಕು ಬಯವಾಗುತ್ತೆ ಒಂದು ಗೇಣು ಮಣ್ಣು ಕದಲಿಸಕ್ಕು ತ್ರಾಣವಿಲ್ಲ ಈ ಎತ್ತುಗಳಿಗೆ , ಮೇವಿಲ್ಲದೆ ಬರಡಾದ ಜೀವಗಳನ್ನ ಹ್ಯಾಗೆ ಕಟ್ಟೊದು.

ಕಣ್ಣಲ್ಲಿ ಬರುವ ಹನಿಗಳು ಒಂದೊಂದೆ ನೆಲವ ಸೊಕಿ ಮರೆಯಾಗಿತ್ತಿವೆ…. ಅಬ್ಬಾ!!! ಎಂಥಾ ಕಾಲ ಬಂತು ಈ ಮೈಯಿಂದ ಬೆವರ ಹನಿ ಹರಿಸಬೇಕಾದ ಜೀವಕ್ಕೆ ಎಂಥಾ ಗತಿ ಬಂತು. ಈ ಭೂತಾಯ ನಂಬಿದ ನಮ್ಮಪ್ಪ ,ಅವನಪ್ಪ ಯಾವತ್ತು ಈ ಬದುಕು ಕಂಡಿಲ್ಲ ಅವರೆಲ್ಲರನ್ನು ಕೈ ಹಿಡಿದ ಈ ತಾಯಿ ನನಗ್ಯಾಕೆ ಹೀಗೆ ಮಾಡಿದಳು. ನಾನೆನು ಅವಳನ್ನ ಬಂಗಾರ ಕೇಳಿದ್ನ, ಸುಖದ ಸುಪ್ಪತ್ತಿಗೆ ಕೇಳಿದ್ನ , ಎರ್‍ಅಡು ಹೋತ್ತು ಗಂಜಿ ಇದ್ದರೆ ಸಾಕು ಎಂದವನು. ನಾನು ಉಂಡು ಉಳಿದದನ್ನ ಎಲ್ಲರಿಗೂ ಹಂಚಿದವನು ಹೀಗಿದ್ದರು ನನಗೆ ಈ ಬಾಳು.

ಹಾಗೆ ಕಣ್ಣಿತ್ತಿ ಬಡಕಲಾಲಿ, ಮೂಳೆ ಮುದ್ದೆಗಳಂತೆ ಆಗಿದ್ದ ಎತ್ತುಗಳ ಮೇಲೆ ಕೈಯಾಡಿಸಿ , ನಿಮ್ಮನ್ನ ಸಾಕೊ ಯ್ಯೊಗ್ಯತೆ ಕೊಡ ಇಲ್ಲ ನನ್ಗೆ. ಹೋದ ಸಲ ಸಂಕ್ರತಿ ಜಾತ್ರೆನಾಗಾದ್ರು ಕೊಟ್ಟಿದ್ದರೆ ಎಲ್ಲೊ ಚನ್ನಾಗಿ ಬದುಕೊತಿದ್ವು, ನನ್ನ ಹತ್ರ ಮಡಿಕಂಡು ಸಾಯೊ ಸ್ಥಿತಿ ಬಂದ್ವಲ್ಲಾ.

ನೋಡು ನೋಡುತ್ತಲ್ಲೆ ಮೋಡಗಳು ಮರೆಯಾಗಿ ಶುಬ್ರ ಆಕಾಶವಾಗಿ ,ಸೂರ್ಯನ ಪ್ರಕರ ಕಿರಣಗಳು ನೆಲವನ್ನ ನಾಟುತಿದ್ದವು.ಆ ರೌದ್ರ ಕಿರಣಗಳ ತಾಳಲಾಗದೆ ಭೂಮಿ ತೋಳಲಾಡುತಿದ್ದಂತೆ ಭಾಸವಾಗುತ್ತಿತ್ತು. ಒಮ್ಮೆ ಮನೆಯಲ್ಲಿ ಹಾಸಿಗೆ ಹಿಡಿದು ಮಲಗಿದ್ದ ಅಮ್ಮನ ನೆನಪಾಗಿ. ಅವಳಾದರು ಸಸಿಯಾಗಿದ್ದಿದರೆ ಮನಸ್ಸಿಗಾದರು ಒಂದು ಸಮಾಧಾನ ವಾಗ್ತಿತ್ತು. ಎಲ್ಲೊ ಕೂಲಿ ನಾಲಿ ಮಾಡಿ ಎರಡೊತ್ತು ಗಂಜಿನಾದ್ರು ಹುಟ್ಟಿಸ ಬಹುದಿತ್ತು. ಅದ್ಯಾವ ಕಾಯಿಲೆನೊ ಎನೊ, ಎಲ್ಲ ಮದ್ದು ಮಾಡ್ಸಿದ್ದಾಯ್ತು,ಕೊನೆಗೆ ನಾನಿನ್ನು ಬದುಕಿ ಏನು ಮಾಡ್ಬೆಕು ಮಗ ಹೀಗೆ ಇರ್ತಿನಿ. ಸಿವ ಕರಕಂಡಾಗ ಹೋಯ್ತಿನಿ , ನೀನು ಬೇಸರ ಮಾಡ್ಕಬ್ಯಾಡ . ನನ್ನ ಹಣಿನಾಗ ಬರದಂಗೆ ಆಯ್ಯತ್ತದೆ ಅಂದಿದ್ದಳು. ಎಷ್ಟಾದರು ತಾಯಿ ಅಲ್ವಾ ಅವಳಿಗಿರೊ ಶಕ್ತಿ ಮತ್ಯಾರಿಗಿರುತ್ತೆ . ಅವಳಲ್ಲದೆ ಮತ್ಯಾರು ಈ ಮಾತನ್ನು ಆಡಿಯಾರು……………..?

ಇಷ್ಟೆಲ್ಲ ಬರೆದ ಮೇಲೆ ನನ್ನ ಮನಸ್ಸಿಗೆ ಬಂದ ಸಾಳುಗಳು ಇವು….

“ಬದುಕು ಮಾಯೆಯ ಮಾಟ ಮಾತು ನೊರೆ ತೆರೆಯಾಟ
ಜೀವ ಮೌನದ ತುಂಬ ತುಂಬ ಮುನ್ನೀರು ”

ಇದನ್ನ ನಮ್ಮ ಬೇಂದ್ರೆ ಅಜ್ಜ ಯಾಕೆ ಬರೆದರೆ ನನಗಂತು ಗೋತ್ತಿಲ್ಲ ….ನಿನಸಿಕೊಂಡರೆ ಮೈ ಜುಮ್ ಎನ್ನುತ್ತಿದೆ………
ಯಾವಾಗ ಬರೆದದ್ದು.

ಈ ತಿಂಗಳ ಪಂಚಾಂಗ.

ಆಗಷ್ಟ್ 2017
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
« ಡಿಸೆ    
 123456
78910111213
14151617181920
21222324252627
28293031  

p

Powered by eSnips.com