Archive for the 'ಭೊಗಸೆಯಷ್ಟು ಪ್ರೀತಿ.' Category

16
ಜುಲೈ
07

ಹಾರಿಸ್ಕಂಡ್ ಹೋಗೊದಂತು ಗ್ಯಾರಂಟಿ.

    ನಿನ್ನನ್ನ ಮುಂದೆ ಕೂರಿಸಿಕೊಂಡು ಬದುಕಿನ ಒಂದೊಂದು ಪುಟಗಳನ್ನ ತಿರಿವಿಹಾಕಿದ ಆ ಘಳಿಗೆ ಇನ್ನೂ ಮನಸ್ಸಿನಲ್ಲಿ ಹಸಿ ಹಸಿಯಾಗಿದೆ ಕಣೇ. ಒಂದು ಸ್ವಲ್ಪ ನಾಚಿಕೆ, ಸ್ವಲ್ಪ ಸಂಕೋಚ, ನೀನು ನಕ್ಕು ನಗದಹಾಗೆ ನಟಿಸುತ್ತಿದ್ದ ಪರಿ ನನಗೆ ಒಳಗೋಳಗೆ ಸಂತೋಷ ತರ್ತಿತ್ತು. ಆದರು ಸಂಪ್ರದಾಯಸ್ತ ಮನೆಯ ಹೆಣ್ಣು ಮಗಳಾಗಿ ಅಷ್ಟು ಮಿನಿಮಮ್ ಸಾಚಿಕೆ ಇಲ್ಲ ಅಂದರೆ ಹ್ಯಾಗೆ ….ಅದು ನನ್ನಂತ ಮೂರು ಬಿಟ್ಟವನ ಮುಂದೆ….

    ಮಂದ ಬೆಳಕಿನ ಕೆಂಪು ಸಂಜೆ ನಮ್ಮಿಬ್ಬರನ್ನ ಆವರಿಸುತ್ತಿತ್ತು….. ಸುತ್ತಲು ಪ್ರಶಾಂತ ತಂಪು ಆವರಿಸಿತ್ತಾದರು, ನಾವಿಬ್ಬರು ಆಗತಾನೆ ಸ್ಪೋಟಿಸಿದ ಜ್ವಾಲಮುಖಿಯಂತಾಗಿದ್ದೆವು. ಸರಕ್ ಅಂತ ಒಮ್ಮೆ ನೋಡಿ ಮತ್ತೆ ತಲೆ ತಗ್ಗಿಸಿ ಕುತಾಗ, ಈ ಹುಡುಗಿ ಹಿಗ್ಯಾಕೆ ಆಡ್ತಾಳೆ ಅನ್ಸೊದು. ಮೆಲ್ಲನೆ ಬೀಸುವ ಗಾಳಿಗೆ ತೆಲಾಡುತ್ತಿದ್ದ ಮುಂಗುರುಳು ಮತ್ತೆ ಮತ್ತೆ ಛೆಡಿಸುತ್ತಿತ್ತು. ಒಂದು ಕ್ಷಣ ಹತ್ತಿರ ಬರೋಣ ಅಂತ ನನ್ನೆಲ್ಲ ಶಕ್ತಿಯನ್ನ ಒಂದು ಗೂಡಿಸಿಕೊಳ್ಳೊ ಹೊತ್ತಿಗೆ ….. ಎಲ್ಲೊ ಸಣ್ಣಗೆ ಹೆದರಿ, ನೀನೆಲ್ಲಿ ಎದ್ದು ಓಡಿಹೋಗ್ತಿಯೊ ಅಂತ ನಾನೆ ಸಾಮಾಧಾನ ಮಾಡಿಕೊಳ್ಳೊದು. ಆದರು ಮನಸ್ಸು ನನ್ನನ್ನ ಪುಸಲಾಯಿಸಿ …. ನಿನ್ನ ಹುಡುಗಿನೊ ಇವಳು, ಹಾಗ್ಯಾಕೊ ಅಂದ್ಕೊತ್ತಿಯಾ ….. ಅವಳಿಗೂ ನಿನ್ನ ಜೋತೆ ತಾಗಿಸಿಕೊಂಡು ಕೂರೊಕ್ಕೆ ಇಷ್ಟ ಕಣೋ ಅಂತ ಬೆನ್ನು ತಟ್ಟುತ್ತಿತ್ತು.

    ಅಬ್ಬ!!! ಸಾಕು ಕಣೇ ಈ ಮೌನ, ನನ್ನ ಇನ್ನಷ್ಟೂ ಸತ್ತಾಯಿಸ ಬೇಡ. ನಿನ್ನ ಮೌದದಲ್ಲೆ ನನ್ನನ್ನ ನುಂಗ್ತಿದ್ದಿಯ, ನಾಲ್ಕು ಚಂದದ ಮಾತಾಡು. ಮುತ್ತೆನಾದರು ಉದುರಿದರೆ ಜೊಪಾನ ಮಾಡೊದು ನನಗಿರಲಿ. ಕತ್ತು ಎತ್ತಿ ಒಂದು ಸಾರಿ ಸರಿಯಾಗಿ ನನ್ನ ಗಮನಿಸು ….. ಕಣ್ಣಲ್ಲಿ ಕಣ್ಣಿಟ್ಟು ನೋಡು . ಆಮೇಲೆ ಪಶ್ಚಾತಾಪ ಪಡಬೇಡ. ಅಯ್ಯೊ ಇವ್ನ ಮೂತಿ ನಮ್ಮನೆ ನಾಯಿ ಮೂತಿತರ ಇದೆ ಅಂತ. ನಾಯಿ ಮರಿ ಆದರು ಪರವಾಗಿಲ್ಲ ನಿನ್ನ ಮಡಿಲಲ್ಲಿ ಮಲಗಿ, ಬೊಗಸೆ ಕೈಗಳಿಂದ ನೆವರಿಸಿಕೊಳ್ಳೊ ಸುಖಃವಾದರು ಸಿಗುತ್ತೆ.

    ಅದೆಷ್ಟು ಚಂದಕ್ಕೆ ಒಗ್ಗೂತ್ತೊ ಕಡು ನೀಲಿ ನಿನ್ನ ಮೈಗೆ, ಅದರ್ ಮಹೀಮೆನೆ ಇರಬೇಕು ನಿನ್ನ ಇವತ್ತುನನ್ನ ಮುಂದೆ ಕೂರ್ಸಿರೊದು. ಹದವಾಗಿ ಎಣ್ಣೆ ಹಚ್ಚಿ ನವಿರಾಗಿ ಬಾಚಿಕೊ. ಅ ಕಡು ನೀಲಿ ಸೀರೆ ಉಟ್ಕೊ, ಹೆರಳ ತುಂಬ ಮಲ್ಲಿಗೆಯ ದಂಡೆ ಇರಲಿ, ಹಣೆಯ ತುಂಬ ಕುಂಕುಮ ರಾರಾಜಿಸಲಿ, ಚಿಕ್ಕ ಚುಕ್ಕೆ ದೃಷ್ಟಿಗಾಗಿ, ಕಣ್ಣಂಚಿನಲ್ಲಿ ನಾಚಿಕೆ ಇರಲಿ . ಬತ್ತಿನಿ ನಿಮ್ಮ ಮನೆಗೆ ನಿಮ್ಮಪ್ಪನ್ನ ಕೇಳಕ್ಕೆ, ಒಂದೆ ಮಾತು ….. ಇಲ್ಲ ಅಂದ್ರೆ ರೆಡಿಯಾಗಿರೂ ಹಾರಿಸ್ಕಂಡು ಹೋಗೊದಂತು ಗ್ಯಾರಂಟಿ.

Advertisements
05
ಜುಲೈ
07

ಮುತ್ತು ಸಂಜೆಯ ನೆನಪು.

    ನೆನೆಪಿನಂಗಳದಲಿ ನೆಲೆಯಾದ ಮುತ್ತು ಸಂಜೆಯ ನೆನಪು ಇನ್ನೂ ಹಸಿರಾಗಿದೆ ಗೆಳತಿ, ಯುಗ ಯುಗಗಳನು ಕ್ಷಣಗಳಂತೆ ಕಳೆದೆವು ನಾವಿಬ್ಬರು ಒಡನಿದ್ದ …..ಪ್ರತಿ ಘಳಿಗೆ. ಅಲ್ಲಿಂದ ಹೊರನಡೆದು ನಮ್ಮ ನಮ್ಮ ದಾರಿಯ ಹಿಡಿದಾಗ ಪ್ರತಿ ಕ್ಷಣಗಳು ಯುಗಗಳಾದವು ಮನಸ್ಸೆಲ್ಲ ಭಾರ ಭಾರ ಮತ್ತೆ ಯಾವಾಗ ಸಿಗ್ತಿಯಾ ಎಂದು ಮೆಲ್ಲನೆ ಕೇಳಿದ ನಿನಗೆ, ಯಾವಾಗ ನಮ್ಮ ಹಣೆಯಲ್ಲಿ ಬರೆದಿದೆಯೊ ಆವಾಗ ಎಂದು ನಾನಿತ್ತೆ ಉತ್ತರವನು. ನಡೆದು ಬಸ್ ಸ್ಟಾಂಡ್ ಬಳಿ ಬಂದಾಗ ಮಡದಿಯನ್ನ ತೌರಿಗೆ ಕಳುಹಿಸಲು ನಿಂದ ಪತಿಯ ದುಗುಡ ನನ್ನನಾವರಿಸಿತ್ತು. ಈ ಬಸ್ಸು ಮನೆಯ ಹತ್ತಿರಕ್ಕೆ ಹೊಗುತ್ತೆ ಹೊಗಲಾ ಇಲ್ಲ ಮತ್ತೊಂದಕ್ಕೆ ಕಾಯಲೇ ಎನ್ನುತ್ತ ಮನಸ್ಸಿಲ್ಲದ ಮನಸ್ಸಿನಿಂದ ಕೇಳಿದಾಗ , ಯಾಕೊ ಹೊಗ್ತಿಯಾ ನನ್ನ ಜೊತೆಲೇ ಇರೊ ಅನ್ನುವಾಸೆ. ಆದರು ಮುಂದಿನ ಬಸ್ ಬಂದಾಗ ಹೋಗೊ ಎಂದು, ಇನ್ನಷ್ಟು ಹೊತ್ತು ನಿನ್ನ ಜೊತೆಗಿರುವೆನಲ್ಲ ಒಳಗೊಳಗೆ ಖುಷಿ ಪಡೊದು. ಕೊನೆಗೂ ಬಂದ ಬಸ್ಸಿನೆಡೆಗೆ ಭಾರವಾಗಿ ಹೆಜ್ಜೆಯಾಕುತ್ತಾ….ಒಮ್ಮೆ ಹಿಂತಿರುಗಿ ನೋಡಿ ಮತ್ತೆ ಸಿಗೋಣ ಅಂತ ಕಣ್ಣಲ್ಲೆ ಸನ್ನೆಮಾಡಿ, ಬಸ್ಸು ಕದಲಿದಾಗ ನಿನ್ನೊಡನೆ ಕಳೆದ ಸುಮಧುರ ಕ್ಷಣಗಳ ಮೆಲಕುತ್ತಾ ಹಿಂದಿರುಗಿ ನನ್ನ ದಾರಿ ಹಿಡಿದೆ.

    ನಿನ್ನ ಮುಂದೆ ಕೂತು ಒಂದೊಂದಾಗಿ ಪುಸ್ತಕಗಳನ್ನು ತೆಗೆಯುತ್ತಾ, ಮಲ್ಲಿಗೆಯ ಕವಿ ಕೆ.ಎಸ್.ನ ಅವರ “ಮಲ್ಲಿಗೆಯ ಮಾಲೆ” ನಿನ್ನತ್ತ ಇಟ್ಟಾಗ ಸಂತಸದಿಂದ ಕಣ್ಣರಳಿಸಿ ನೋಡಿದ ನಿನ್ನ ಪರಿ, ಅಮ್ಮನನ್ನು ಕಂಡ ಮಗುವಿನಂತಿತ್ತು. ಇಷ್ಟು ದಿನ ನೀನು ಹೇಳುವ ಕವನಗಳನ್ನ ಕೇಳಿ ಆನಂದಿಸುತ್ತಿದ್ದೆ, ಈಗ ಅಷ್ಟು ಕವನಗಳು ನನ್ನ ಕಣ್ಣಮುಂದೆ ಅಬ್ಬ !!! ಎನ್ನುತಿತ್ತು ನಿನ್ನ ಮನವು. ಯಾವುದನ್ನ ಓದೊದು ಯಾವುದನ್ನ ಬಿಡೊದು ..ಎಲ್ಲವು ಚಂದದ ಸಾಲುಗಳೆ, ಒಂದೊದು ಕವಿಯ ಬದುಕಿನ ಅನುಭವಗಳೆ.  ಅವನ್ನು ಎಳೆ ಎಳೆಯಾಗಿ ಬಿಡಿಸಿ ಉಣಬಡಿಸಿದ್ದಾರೆ ಎಲ್ಲರಿಗೂ ಒಗ್ಗುವ ಸುಂದರ ಕವನಗಳಾಗಿ ನಮ್ಮ ಮಲ್ಲಿಗೆಯ ಕವಿಗಳು.

    ನಾಲ್ಕಾರು ಕವನಗಳನ್ನ ಸವಿಯುತ್ತ ಮೈಮರೆತಿದ್ದ ನಮಗೆ ಮಾಣಿ ಬಂದು ‘ಏನ್ ಕೊಡಲಿ ಸಾರ್’ ಎಂದಾಗ ಅರಿವಾದದ್ದು ನಾವಿರೋದು ಹೋಟೆಲೊಂದರಲ್ಲಿ ಅಂತ. ನಿನ್ನ ಮುಖ ನೋಡಿದಾಗ ಏನಾದರು ಸ್ವಲ ಎಂದು ತಲೆ ಅಲ್ಲಾದಿಸಿದೆ …. ಇಲ್ಲಿ ತಿನ್ನೊದು ನೆಪಮಾತ್ರಕ್ಕೆ ಅಂತಾ ಅರಿವಾಗಿ, ಒಂದಷ್ಟು ಆರ್ಡರ್ ಮಾಡಿ ಮತ್ತೆ ಕವನಗಳಲ್ಲಿ ಮುಳುಗಾಗಿತ್ತು.ಒಂದೊಂದು ಸಾಲುಗಳನ್ನ ಓದಿ ಅನುಭವಿಸಿದ ಪರಿ ನಮಗೆ ನಾವೆ ಬಲ್ಲೆವು. ಅಷ್ಟರಲ್ಲೆ ನೆನಪಾಗಿ ಬ್ಯಾಗಿನಲ್ಲಿ ಕೈಹಾಕಿ ನಿನ್ನ ಮುಂದಿರಿಸಿದೆ ಪೊಟ್ಟಣವನು, ಏನೆಂದು ಆಶ್ಚರ್ಯದಿಂದ ನೀ ಕೇಳಲು ಅಚ್ಚ ಮಲ್ಲಿಗೆಯ ದಂಡೆಯೆಂದೆ ನಾನು. ಮಲ್ಲಿಗೆಯ ಪರಿಮಳಕೆ ನಾಚಿತು ನಿನ್ನ ಮನವು, ಒಳಗೊಳಗೆ ಗೊಣಗುತ್ತಾ, ಇವಾಗ ಮುಡಿಯೊಕ್ಕೆ ಆಗೊಲ್ವೊ ಅಮ್ಮ ಕೆಳ್ತಾರೆ ಎಲ್ಲಿಂದ ತಂದೆ ಸಂಜೆಹೊತ್ತಲ್ಲಿ ಅಂತ ನೊಂದು ಕೊಂಡೆ. ತಟ್ಟನೆ ಉಪಾಯ ಮಾಡಿ ನಾಳೆ ಮುಡಿಲಾ ಮನೆಗೆ ತೊಗಂದು ಹೊಗ್ತಿನಿ ಎಂದು ನಸುನಗುತ ಇರಿಸಿಕೊಂಡು ನನ್ನ ಮನಸಿಗೆ ನೆಮ್ಮದಿ ತಂದ ನೀನು ನನ್ನವಳಲ್ಲವೆ.

     ಇಬ್ಬರಲು ಒಂದೆ ಆಲೋಚನೆ ನಾವು ಯಾಕೆ ಇಷ್ಟು ಹತ್ತಿರವಾದ್ವಿ, ಯಾವ ಜನ್ಮದ ಮೈತ್ರಿನೊ , ಈ ಜನ್ಮದಲಿ ನಮ್ಮಿಬ್ಬರನು ಈ ಪರಿಯಲ್ಲಿ ಬಂದಿಸಿದೆ. ಮತ್ತೆ ಮತ್ತೆ ನೆನಪಾದವು ಜಗಜಿತ್ ಸಿಂಗರು ಹಾಡಿರುವ ಗಜಲ್ಗಳ ಸಾಲುಗಳು ……………. ‘ತೇರೆ ಆನೆ ಕಿ ಜಬ್ ಕಬರ್ ಮೇಹಕೆ …. ತೇರಿ ಖುಷಬು ಸೇ ಸಾರಾ ಗರ್ ಲೆಹಕೆ” ಮನದಲ್ಲೆ ಗುನುಗುತ್ತ , ನಿನ್ನ ನೆನೆಯುತ್ತಾ ಸಾಗುತ್ತಿರುವೆ ಬದುಕಿನ ಹಾದಿಯಲಿ ……… ಮತ್ತೆ ಯಾವಗ ಬರ್ತಿಯಾ …. ನನ್ನ ಮನೆಯ ಮನದಂಗಳಕೆ ?

20
ಜೂನ್
07

ಮೈಮನಗಳ ಸುಳಿಯಲ್ಲಿ.

   ಒಂದೊಂದು ಸಾರಿ ಬದುಕು ಅಂದ್ರೆ ಹೀಗೆನಾ? ಅನ್ನಿಸಿಬಿಡುತ್ತೆ.ಆದ್ರು ಬದುಕಿನ ಪ್ರತಿ ಕ್ಷಣಗಳನ್ನ ಅನುಭವಿಸುವ ನನ್ನ ಪರಿಗೆ ನಿನ್ನ ಮಿಲನ ಹಾಲು-ಜೇನಿನ ಹಾಗಾಯ್ತು, ಮನಸ್ಸು ಮುದಗೊಂಡು ಮೈಮನ ಜುಮ್ ಎಂದು ಜೇಂಕರಿಸುತ್ತಿದೆ. ಆ ಒಂದೊದು ಘಳಿಗೆಗಳು ನನ್ನ ಮುಂದೆ ಹಾದು ಹೊಗುತ್ತಿವೆ…. ಬಿಸಿಲಿನ ಬಡಿತಕೆ ಸೋತು ಕಾದ ಧರೆಗೆ, ಮುಗಿಲು ಉಣಿಸಿದ ಅಮೃತ ಸಿಂಚನದಂತೆ. ಇಂದೆ ಇಲ್ಲೆ ಈ ಘಳಿಗೆನೆ ಬದುಕು ಅನ್ನೊದು ನಿಂತು “ದಿ ಎಂಡ್” ಅಂತ ಅಂದ್ರು ಖುಷಿಯಾಗಿ ಸ್ವಿಕರಿಸ್ತೆವೆನೊ?….

   ಎಲ್ಲೊ ದೂರದಲ್ಲಿ ಕೇಳೊ ಇಂಪಾದ ಸಂಗೀತ ಅದನ್ನ ಹೊತ್ತು ತಂದು ಕಿವಿಗೆ ತಟ್ಟುವ ತಣ್ಣನೆಯ ಗಾಳಿ. ಆಗಾಗ ಮೇಲಿಂದಿಳಿದು ಬಂದು ಮುತ್ತಿಕ್ಕುವ ನಿನ್ನ ಮುಂಗುರುಳು, ಮಾತು ಮಾತಿಗೂ ಮೈಯೆಲ್ಲ ಜೂಮ್ ಎಂದು ಒಂದು ಸಾರಿ ಕಣ್ಣು ಮುಚ್ಚಿ ಸೆಟೆದು ನಿಲ್ಲಿವ ಅ ನಿನ್ನ ಪರಿ, ಹಾಗೆ ನನ್ನನ್ನ ತಪ್ಪಿಸಿ ವಾರೆಗಣ್ಣಿನಲ್ಲಿ ಕಣ್ಣಲ್ಲಿ ಕಣ್ಣಿಟ್ಟು ನೋಡುವ ನಿನ್ನ ಧೈರ್ಯ, ಇದೆಲ್ಲದರ ನಡುವೆ ಎಲ್ಲಿ ದೃಷ್ಟಿ ಬೀಳುತ್ತೊ ಅಂತ ಅವನಿತ್ತ ತುಟಿಯ ಕೆಳಗಿನ ಚುಕ್ಕಿ …. ಕಾಡಿದೆ ನನ್ನನ್ನು.

   ಅಯ್ಯೊ ಅವಾಗ್ಲೆ ಅರ್ಧ ಗಂಟೆ ಆಗೊಯ್ತಲ್ಲ…. ಇನ್ನಿರೊದೆ ಅರ್ಧ ಗಂಟೆ ಅಂತ ಒಳಗೊಳಗೆ ಕಾಲಕ್ಕೂ ಶಾಪ ಹಾಕ್ಕೊತ್ತಿಯಾ… ಬಸ್ ಹಿಡಿಬೇಕು …. ಯಾವ್ದು ಸಿಗುತ್ತೊ…. ಅಮ್ಮ ಅನುಮಾನ ಪಡೊ ಮುಂಚೆ ಮನೆ ಸೆರ್ ಬೇಕು. ಮದ್ಯೆ ಮದ್ಯೆ ಬರೋ ಫೊನ್ ಕಾಲ್ಗಳೊ …. ಕೆಲವನ್ನ ಹಾಗೆ ಬಿಡೋದು…ಮತ್ತೆ ಕೆಲವಕ್ಕೆ ಸಿಕ್ಕಾಪಟ್ಟೆ ಬಿಜಿ ಇದ್ದಿನಿ …. ಆಮೇಲ್ ಮಾಡ್ಲಾ ಪ್ಲೀಜ್ ಪ್ಲೀಜ್ ಅಂತ ನೈಸಾಗಿ ನುಣಿಚಿಕೊಳ್ಳೊದು…. ಎಷ್ಟು ಸರ್ಕಸ್ ಮಾಡ್ತಿಯೊ … ಈ ಸಣ್ಣ ಸಣ್ಣ ಖುಷಿಗಳಿಗಾಗಿ……..ಅದಕ್ಕೆ ತಾನೆ ನಾನು ನನ್ನೆಲ್ಲ ಪ್ರೀತಿಯ ಸುಧೆ ಉಣಿಸೊದು . ನೀನು ಮಾಡೊ ಸರ್ಕಸ್ಸುಗಳಿಗೆ ಇಷ್ಟಾದರು ಮಾಡದಿದ್ದರೆ ಆ ಪ್ರೀತಿಗೆ … ವಿಶ್ವಾಸಕ್ಕೆ ಎಲ್ಲಿ ಇರುತ್ತೆ ಹೇಳು ಬೆಲೆ…..

25
ಮಾರ್ಚ್
07

ಮಧುರ ಮೈತ್ರಿ.

 

ಈ ಜೀವನವೆ ಒಂಥರಾ ವಿಚಿತ್ರ ನೋಡು, ನಾವು ಯಾವುದನ್ನ ಇಷ್ಟ ಪಡ್ತಿವೊ ಅದು ನಮ್ಗೆ ಸಿಗಲ್ಲ , ಅದು ಸಿಗುತ್ತೆ ಅನ್ನೊ ಆಸೆ ಸಾಯೊತನಕ ಬತ್ತಲ್ಲ……….. ಅಲ್ವ.

ಎಲ್ಲೊ ಇದ್ದು , ಎಲ್ಲೊ ಬಾಳಿ-ಬದುಕಿ ಸತ್ತೊಗೊ ಜೇವಗಳು ನಾವು.ಆದರು ನನಗೆ ತುಂಬಾ ಅಶ್ಚರ್ಯ ಆಗ್ತಾ ಇದೆ, ನಾವ್ಯಾಕೆ ಈ ಬದುಕಿನ ಪಯಣದಲ್ಲಿ ಭೇಟಿಯಾದ್ವಿ ಅಂತ. ನಾವೇನು ಕೂಡ ಬೆಳದವರಲ್ಲ, ಸಂಭಂದಿಕರಲ್ಲ , ಒಂದೆ ಕಡೆ ಕಲಿತವರಲ್ಲ, ಯಾವುದೆ ಕಮ್ಯೂನಿಕೆಷನ್ ಇಲ್ಲದ ಬದುಕಿನ ಅರ್ಧ ದಾರಿ ಸಾಗಿದವರು. ಇವತ್ತು ನಮ್ಮ ಬದುಕು ಎಷ್ಟೊಂದು ಚೇಂಜ್ ಅನ್ನಿಸುತ್ತೆ ಅಲ್ವ. ನಾವು ನಡೆದು ಬಂದ ಹೇಜ್ಜೆ ಗುರುತುಗಳೆಲ್ಲ ಮಾಸಿ ಹೊಗಿವೆ , ಹೊಸದಾಗಿ ಹೆಜ್ಜೆ ಹಾಕೊದಕ್ಕೆ ಸಿದ್ದವಾಗಿದ್ದೆವೆ.

ಇದನ್ನ ಯಾವ ಸಂಭಂದ ಅನ್ನಲ್ಲಿ…….. ಯಾವ ಜನ್ಮದ ಮೈತ್ರಿ ಅನ್ನಲಿ. ನಮ್ಮದು ಯಾವ ಸಂಭಂದದಿಂದಲು ಬಂದಿಸಲಾಗದ ಬೆಸುಗೆ , ಅದು ಇತಿ-ಮಿತಿಗಳೆ ಇಲ್ಲದ ರೂಪ. ಎಲ್ಲಾ ಸಂಭಂದಕ್ಕೂ ಅದರದ್ದೆ ಚೌಕಟ್ಟು ,ಮಿತಿಗಳು ಬೆಳೆಯುತ್ತಾ ಹೋಗುತ್ತವೆ. ನಮ್ಮದು ಸಂಭಂದವನ್ನು ಮೀರಿದ ಉನ್ನತ ಭಾಂದವ್ಯ. ಅದರ ಆಳ-ಅಗಲ ಅರಿಯಲು ಯಾರಿಂದ ಸಾದ್ಯ ಅಲ್ವ….. ಅದನ್ನ ಅನುಭವಿಸಿದವನೆ ಬಲ್ಲ.

ಈ ಸಾಲುಗಳು ನನ್ನ ಮನಸ್ಸನ್ನ ಆವರಿಸಿಕೊಂದಿವೆ “ಯಾವ ಜನ್ಮದ ಮೈತ್ರಿ ನಮ್ಮಿಬ್ಬರನ್ನು ಬಂದಿಸಿಹುದೊ ನಾನರಿಯೆ”.. ಈ ಸಾಲುಗಳು ನಮ್ಮನ್ನ ನೋಡಿಯೆ ಬರೆದಿರೊ ಹಾಗೆ ಹಸಿ ಹಸಿ ಯಾಗಿವೆ. ಬದುಕು ಅಂದರೆ ಇದೆನಾ , ಇಷ್ಟೆನಾ ಗೆಳತಿ………..

ನನಗಂತು ಯಾರು ತಿಳಿಯದ ಎಲ್ಲವೂ ಮಸುಕು ಮಸುಕಾದ ಪ್ರಪಂಚದಲ್ಲಿ ಬಿಟ್ಟಂತ್ತಾಗಿದೆ. ನೀನು ಈ ಪ್ರಪಂಚದ ಯಾವ ಮೂಲೆಯ ನನ್ನ ಬರುವಿಕೆಗಾಗಿ ಕಾದು ಕಾತುರದಿ ನಿಂತವಳಂತೆ ಭಾಸವಾಗುತ್ತಿದೆ. ನನ್ನ ಮುಂದೆ ಇರುವುದೆಲ್ಲ ಶೂನ್ಯ, ನನ್ನಗಂತು ಗೊತ್ತಿಲ್ಲ ,ಗುರಿಯಿಲ್ಲ, ಬಂದು ಸೇರುವೆನೆಂಬ ಉತ್ಕಟ ಬಯಕೆ, ಹಂಬಲ ನನ್ನ ಬದುಕಿನ ಹಾದಿಯ ಬೇಳಕಾಗಿದೆ. ಶರೀರದ ತ್ರಾಣವನ್ನೆಲ್ಲ ಹಿರಿ-ಹಿಪ್ಪೆ ಮಾಡುವಷ್ಟು ಚಳಿ, ಮುಂದೆ ಹೆಜ್ಜೆ ಇಡಲು ಆಗದಂತೆ ಮರುಗಟ್ಟಿದೆ ದೇಹ, ಹೃದಯ ಬಡಿತಳು ಹೆಚ್ಚುತ್ತಲಿವೆ. ಮನಸ್ಸು ಮಾತ್ರ ನೀನು ಮುಂದೆ ಬಂದು ನಿಲ್ಲುವೆ ಎಂಬ ಆಸೆ ಮಾತ್ರ ಬಿಟ್ಟಿಲ್ಲ . ಬರುವೆ ತಾನೆ? ಬಂದು ನಿಲ್ಲುವೆ ತಾನೆ ನನ್ನ ಮುಂದೆ ……….ಹಸಿ ಗೂಸು ಮುಗ್ಧ ಕಣ್ಣಗಳಿಂದ ತದೇಖಚಿತ್ತನಾಗಿ ತಾಯಿಯನ್ನು ನೋಡುವಹಾಗೆ ನೋಡಿ ಸಂಭ್ರಮಿಸುವೆ……….

01
ಮಾರ್ಚ್
07

ಎದೆಯಾಳದಿ ಬಚ್ಚಿಟ್ಟ ನಿನ್ನ ನೆನಪುಗಳು.

ಇವಾಗಷ್ಟೆ ನೆನಪಾದೆ ಕಣೇ ನೀನು, ಯಾಕೋ ಪದೆ ಪದೆ ನನ್ನನ್ನ ಕಾಡಿ ಸತಾಯ್ಸಿತ್ತಿಯಾ. ನಾನೆಷ್ಟು ನಿನ್ನನ್ನ avoid ಮಾಡಿದ್ರು ಮತ್ತೆ ಮತ್ತೆ ಬೆನ್ನ ಹತ್ತಿದ ಬೆತಾಯದ ಹಾಗೆ ನಿನ್ನ ನೆನಪುಗಲು ನನ್ನನ್ನ ಆವರಿಸಿ ಕೊಳ್ಳತ್ತವೆ.

ಎಷ್ಹು ದಿನಗಳಾದ್ವೊ ನನಗಂತು ನೆನಪಿಲ್ಲ ನಿನ್ನನ್ನ ಮೊದಲನೆ ಸಾರಿ ನೋಡಿ.ಆದರೆ ನೀನು ನಿಂತಿದ್ದ ಅ ಕಿತ್ತೊದ ಬಸ್ಟಾಂಡು ಮಾತ್ರ ಮರೆತಿಲ್ಲ ಕಣೇ, ಅವತ್ತು ನಿನ್ನ ತಿಳಿ ನೀಲಿ ಡ್ರಸ್ಸು ಅಬ್ಬಬ್ಬ!!!!  ಎಷ್ಟು ಚಂದ ಕಾಣುತಿದ್ದಿ .ಅದ್ಯಾಕೊ ನಿನ್ಗೆ ಆ ಬಣ್ಣ ಒಗ್ಗದಂಗೆ ಬೇರೆಯಾವ್ದು ಒಗ್ಗಲ್ಲ ಬಿಡು.

ಅದ್ಯಕೊ ಗೋತ್ತಿಲ್ಲ ನೀವು ಹುಡ್ಗಿರು ಗಂಟೆಗಟ್ಟಲೆ ಕನ್ನಡಿ ಮುಂದೆ ನಿಂತು ಅಲಂಕಾರ ಮಾಡ್ಕೊತ್ತಿರಾ,ಅದೆನೇನು ಬಳ್ಕೊತ್ತಿರೊ ದೇವರೆ ಬಲ್ಲ ,ಕೊನೆಗೆ ಒಂದು ಬಿಂದಿ ಇಟ್ಕೋಳಲ್ಲ ನೀವು ….. ಮುಖ ನೋಡಿದರೆ ಬಂಜರು ಭೂಮಿತರ ಕಾಣುತ್ತೆ.

ಮುಡಿಗೆ ಮಲ್ಲಿಗೆ ಮುಡಿದು

ಹಣಿಗೆ ಕುಂಕುಮವನಿಟ್ಟು…. ಚಂದ ದೊಂದು

ರೆಷ್ಮೆ ಸೀರೆಯುಟ್ಟು ಯಾವಾಗ

ಬರುವೆ ಆ ಬಸ್ಟಾಂಡಿಗೆ………….
ಯಾವಾಗ ಬರೆದದ್ದು.

ಈ ತಿಂಗಳ ಪಂಚಾಂಗ.

ಜುಲೈ 2018
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
« ಡಿಸೆ    
 1
2345678
9101112131415
16171819202122
23242526272829
3031  

p

Powered by eSnips.com
Advertisements