Archive for the 'ಸಭೆ ಸಮಾರಂಭ.' Category

07
ಡಿಸೆ
10

‘ಪ್ರಕೃತಿ ನಿಯಮ ಮತ್ತು ಮನುಷ್ಯ ಜೀವನ’

 

ಸಾಹಿತ್ಯ, ಸಂಸ್ಕೃತಿ, ಪ್ರಕೃತಿ -ಅಂಶಗಳನ್ನು ಧ್ಯೇಯವಾಗಿಸಿಕೊಂಡಿರುವ ನಮ್ಮ ಸಂಸ್ಥೆ ‘ಪ್ರಣತಿ’ಯಿಂದ, ಕಾಲೇಜು ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆ ಏರ್ಪಡಿಸಿದ್ದೇವೆ. ವಿದ್ಯಾರ್ಥಿಗಳು ‘ಪ್ರಕೃತಿ ನಿಯಮ ಮತ್ತು ಮನುಷ್ಯ ಜೀವನ’ ಎಂಬ ವಿಷಯದ ಮೇಲೆ ೨೦೦೦ ಪದಗಳಿಗೆ ಮೀರದಂತೆ ಪ್ರಬಂಧವನ್ನು ಸ್ಫುಟವಾದ ಕೈಬರಹದಲ್ಲಿ ಅಥವಾ ಡಿ.ಟಿ.ಪಿ. ಮಾಡಿ ಕಳುಹಿಸಬಹುದು. ಪ್ರಬಂಧದ ಜೊತೆ ನಿಮ್ಮ ಕಾಲೇಜ್ ಐಡೆಂಟಿಟಿ ಕಾರ್ಡ್‌ನ ಪ್ರತಿ ಇರಿಸುವುದು ಕಡ್ಡಾಯ. ಸಂಪಾದಕ ಮಂಡಲಿ ಮತ್ತು ವಿಷಯ ತಜ್ಞರು ಆಯ್ದ ಪ್ರಬಂಧಕ್ಕೆ ಸೂಕ್ತ ಬಹುಮಾನ ನೀಡಲಾಗುತ್ತದೆ. ಪ್ರಬಂಧವನ್ನು ಈ ವಿಳಾಸಕ್ಕೆ ಕಳುಹಿಸಬಹುದು ಅಥವಾ ಇ-ಮೇಲ್ ಮಾಡಬಹುದು. ಕೊನೆಯ ದಿನಾಂಕ: 30 ಡಿಸೆಂಬರ್ 2010.

ವಿಳಾಸ: ಪ್ರಣತಿ, ನಂ. ೪೪೮/ಎ, ೮ನೇ ಮೇನ್, ೭ನೇ ಕ್ರಾಸ್, ತ.ರಾ.ಸು. ರಸ್ತೆ, ಹನುಮಂತನಗರ, ಬೆಂಗಳೂರು – ೫೬೦ ೦೧೯.

ಇ-ಮೇಲ್: prabandha@pranati.in

ಯಾವುದೇ ಮಾಹಿತಿಗೆ: ೯೬೧೧೪೫೮೬೯೮ / ೯೯೮೦೦೨೨೫೪೮.

Advertisements
04
ಆಗಸ್ಟ್
09

ಹೂವ ಹೆಕ್ಕುವ ಸಮಯ ಮತ್ತು ಹೊಳೆಬಾಗಿಲು.

ಶ್ರೀನಿಧಿಯ ’ಹೂವು ಹೆಕ್ಕುವ ಸಮಯ’ ಕವನ ಸಂಕಲನ ಮತ್ತು  ಸುಶ್ರುತನ ’ಹೊಳೆಬಾಗಿಲು’ ಲಲಿತ ಪ್ರಬಂಧ ಸಂಕಲನ ಈ ಎರಡು ಪುಸ್ತಕಗಳ ಬಿಡುಗಡೆ ಸಮಾರಂಭವನ್ನು  ಮುಂದಿನ ಭಾನುವಾರ ಬೆಳಿಗ್ಗೆ ೧೦.೩೦ಕ್ಕೆ ಸುಚಿತ್ರ ಫಿಲ್ಮ್ ಸೊಸೈಟಿಯಲ್ಲಿ ಪ್ರಣತಿ ಆಯೋಜಿಸಿದೆ. ಅಂದು ನಮ್ಮ ಜೊತೆ ಹಿರಿಯ ಕವಿ ಎಚ್.ಎಸ್.ವೆಂಕಟೇಶಮೂರ್ತಿ ಮತ್ತು ನಾಗತಿಹಳ್ಳಿ ಚಂದ್ರಶೇಖರ್ ಇರುತ್ತಾರೆ.  ನಿಮ್ಮೆಲ್ಲರ ಬರುವಿಕೆಗಾಗಿ ನಾವೆಲ್ಲರು ಕಾಯುತ್ತಿರುತ್ತೇವೆ.

book release_invitation_final

13
ಜುಲೈ
09

ಗಮಕ ಸುಧಾ ಧಾರೆ

’ಪ್ರಣತಿ’ ಬೆಳಗಲು ಪ್ರಾರಂಭವಾಗಿ ಸುಮಾರು ಹದಿನೆಂಟು ತಿಂಗಳು ಕಳೆದಿವೆ, ಈ ಅವಧಿಯಲ್ಲಿ ವಿಭಿನ್ನ ಕಾರ್ಯಕ್ರಮಗಳನ್ನ ಸಾಹಿತ್ಯ ಮತ್ತು ಸಂಸ್ಕೃತಿಯ ಕ್ಷೇತ್ರಗಳಲ್ಲಿ ಯಶಸ್ವಿಯಾಗಿ ಆಯೋಜಿಸಿದ ನಾವು ಮತ್ತೊಂದು ಹೊಸ ಕಾರ್ಯಕ್ರಮಕ್ಕೆ ಅಣಿಯಾಗಿ ಬಂದಿದ್ದೇವೆ. ಗಮಕ ಕಲೆಯನ್ನ ಇಂದಿನ ಪೀಳಿಗೆಗೆ ಪರಿಚಯಿಸುವ ಒಂದು ಪುಟ್ಟ ಪ್ರಯತ್ನವೆ ’ಗಮಕ ಸುಧಾ ಧಾರೆ’. ರಾಷ್ಟ್ರಕವಿ ಕುವೆಂಪು ವಿರಚಿತ “ಶ್ರೀ ರಾಮಯಣ ದರ್ಶನಂ” ಕಾವ್ಯದ ಶಬರಿಗಾದನು ಅಥಿತಿ ದಾಶರಥಿಯ ವಾಚನ ಮತ್ತು ವ್ಯಾಖ್ಯಾನ ಕಾರ್ಯಕ್ರಮ ಇದೆ ಶನಿವಾರ ಸಂಜೆ ೫ ಕ್ಕೆ ಬಸವನಗುಡಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ನಡೆಯಲಿದೆ. ನಿಮ್ಮೆಲ್ಲರಿಗೂ ಪ್ರಣತಿಯ ವತಿಯಿಂದ ನಲ್ಮೆಯ ಸ್ವಾಗತ…. ತಪ್ಪದೆ ಬನ್ನಿ.

inv_gamaka_005

ಗಮಕದ ಬಗ್ಗೆ ಹೆಚ್ಚಿನ ಮಾಹಿತಿಗೆ…

http://en.wikipedia.org/wiki/Gamak

http://www.itcsra.org/alankar/gamak/gamak_index.html

http://www.gswift.com/article-2.html

http://www.gswift.com/article.pdf

http://www.karnatik.com/gamakas.shtml

http://en.wikipedia.org/wiki/Gamaka_(storytelling)

17
ಮಾರ್ಚ್
08

ಬ್ಲಾಗು ಮಿತ್ರರ ಮುಖಾಮುಖಿ.

ನಿನ್ನೆ ಸಂಜೆಯ ಬ್ಲಾಗು ಬರಹಗಾರರ ಮತ್ತು ಓದುಗರ ಸಮಾವೇಶದ ಯಶಸ್ಸಿಗೆ ಕಾರಣರಾದ ಎಲ್ಲಾ ಬ್ಲಾಗು ಜೀವಿಗಳಿಗೂ ಮತ್ತು ಓದುಗರಿಗೂ ಧನ್ಯವಾದಗಳು.

ದಟ್ಸ್ ಕನ್ನಡದಲ್ಲಿ ಈ ಕಾರ್ಯಕ್ರಮದ ಬಗ್ಗೆ ….

ಮಾರ್ಚ್ 15,16ರ ಶನಿವಾರ ಹಾಗೂ ಭಾನುವಾರ ವಿಪರೀತ ಸಂಚಾರ ದಟ್ಟಣೆಯ ಎರಡು ಘಟನೆಗಳಿಗೆ ಬೆಂಗಳೂರು ನಗರ ಸಾಕ್ಷಿಯಾಯಿತು. ಹಿರಿಯ ನಾಗರಿಕರಿಗೆ ಮಾಸಾಶನ ವಿತರಣೆ ವಿಳಂಬ ವಿರೋಧಿಸಿ ರಾಜ್ಯ ಬಿಜೆಪಿ ಘಟಕವು ಶನಿವಾರ ಬೃಹತ್ ಪ್ರತಿಭಟನಾ ಪ್ರದರ್ಶನ ಹಮ್ಮಿಕೊಂಡಿತ್ತು. ಈ ಕಾರಣದಿಂದಾಗಿ ವಾಹನ ಸಂಚಾರ ಕೆಟ್ಟು ಮೂರಾಬಟ್ಟೆಯಾಗಿ ರಸ್ತೆ ಬಳಸುವ ನಾಗರಿಕರು ರಾಜಕೀಯ ಪಕ್ಷಗಳ ಪ್ರತಿಭಟನೆಯ ಶೈಲಿಗೆ ಹಿಡಿಶಾಪ ಹಾಕಿದರು.

ಜಿನುಗುವ ಮಳೆ ಮಧ್ಯೆ ನಗರದ ಬಹುತೇಕ ಪ್ರದೇಶಗಳಲ್ಲಿ ಭಾನುವಾರದ ಸಂಚಾರ ಸ್ಥಿತಿ ಸಲೀಸಾಗಿದ್ದರೆ ಬಸವನಗುಡಿ ಪ್ರದೇಶದಲ್ಲಿ ಮಾತ್ರ ಟ್ರಾಫಿಕ್ ಜಾಮ್ ಕಂಡುಬಂದಿತು. ಪ್ರಣತಿ ಪ್ರಕಾಶನ ಸಂಸ್ಥೆ ಹಮ್ಮಿಕೊಂಡಿದ್ದ ಬ್ಲಾಗು ಬರೆಯುವವರ ಪ್ರಪ್ರಥಮ ಸಮಾವೇಶದಿಂದಾಗಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನ ಮೊದಲ ಅಂತಸ್ತಿನಲ್ಲಿರುವ ಮನೋರಮಾ ಸಭಾಂಗಣದಲ್ಲಿ ನಡೆದಾಡುವುದಕ್ಕೂ ಕಷ್ಟ ಎನ್ನುವಂಥ ಸ್ಥಿತಿ ನಿರ್ಮಾಣವಾಗಿತ್ತು.

(ಮುಂದೆ ಓದಿ…)
ಫೋಟೊ ಆಲ್ಬಮ್…

 

ಕೆಂಡಸಂಪಿಗೆಯಲ್ಲಿ ಕಾರ್ಯಕ್ರಮದ ಬಗ್ಗೆ….

ಎಲ್ಲ ಸಮಾರಂಭಗಳಂತೆ ಅಲ್ಲೂ ಒಂದು ಪ್ರಾರ್ಥನೆ, ಸ್ವಾಗತ, ಮತ್ತೆ ಅತಿಥಿಗಳ ಭಾಷಣ.. ಯಾವಾಗಲೂ ಬರೆದು ಅಭ್ಯಾಸವಿರುವ ಬ್ಲಾಗೀದಾರರು ಕಿವಿಯಾಗಿ ಕೇಳುತ್ತ ಕೂತಿದ್ದರು. ಹೀಗೆ ಬರೆಯುವ ಹುಡುಗಿ ಯಾರಿರಬಹುದು, ಸಿಟಿ ಪಾಡ್ದನ ಬರೆಯುವ ಚಂಪಕಾವತಿಯ ರಾಜಕುಮಾರ ಹೇಗಿರಬಹುದು, ಸಂಪದದ ನಾಡಿಗರು ಹೇಗೆ ಮಾತಾಡಬಹುದು, ಮೊದಲ ವೆಬ್ ಸೈಟ್ ತೆರೆದವರ ಕಥನಗಳೇನು, ರಶೀದರು ಬರೆಯುವಷ್ಟೇ ತಮಾಷಿಯಾಗಿ ನೋಡಲೂ ಇರುತ್ತಾರಾ, ಇವತ್ತು ಅವಳು ಸಿಗಬಹುದಾ, ಇವನನ್ನು ಮಾತಾಡಿಸಬಹುದಾ, ಅಂತೆಲ್ಲ ಅಂದುಕೊಂಡು, ಕೆಂಡಸಂಪಿಗೆಯಲ್ಲಿ ಬರೆದಂತೆ ಟ್ರಾಫಿಕ್ ಜಾಮನ್ನೇನೂ ಮಾಡದೆ ಸಭ್ಯವಾಗಿ, ನಾಜೂಕಾಗಿ ಬಂದು ಸೇರಿದ್ದರು ಬಸವನಗುಡಿಯಲ್ಲಿ. ಮೋಡಕಟ್ಟುತಿದ್ದ ಸಂಜೆಯಲ್ಲಿ ವರ್ಲ್ಡ್ ಕಲ್ಚರಿನ ಆವರಣದಲ್ಲಿ ನಿಂತವರ ಮೊಗದ ಮೇಲೆ, ಸುತ್ತಲಿದ್ದ ಮರಗಿಡಗಳ ಸಂದಿಯಲ್ಲಿ ತೂರಿ ಆಗಾಗ ಹೂಬಿಸಿಲು. ಓಹೋ ಇವರು ಬಂದರು, ಆಹ್ ಇವರು ಹೀಗಿದ್ದಾರಾ? ಓಹ್ ಇವರನ್ನು ನೋಡು ಎಂಬ ಅಚ್ಚರಿಯ ಮೆಚ್ಚುಗೆಯ ನೋಟ..
(ಮುಂದೆ ಓದಿ…)

ವೆಬ್ ದುನಿಯಾದಲ್ಲಿ ಕಾರ್ಯಕ್ರಮದ ಬಗ್ಗೆ….
‘ಬ್ಲಾಗುಗಳು ಕೇವಲ ಭಾವನಾ ಲಹರಿಯಲ್ಲಿ ವಿಹರಿಸುವ ತಾಣಗಳಾಗದೆ, ಮಾಹಿತಿಪೂರ್ಣ ಲೇಖನಗಳನ್ನು ಹೊಮ್ಮಿಸಲಿ, ವಿಜ್ಞಾನ ತಂತ್ರಜ್ಞಾನದಲ್ಲಿ ಕನ್ನಡವನ್ನು ಉತ್ತುಂಗಕ್ಕೇರಿಸುವಲ್ಲಿ ಪೂರಕವಾಗಿರಲಿ. ಕನ್ನಡ ಎಂಬುದು ಕೇವಲ ಸಾಹಿತ್ಯಕ್ಕಷ್ಟೇ ಸೀಮಿತವಲ್ಲ, ಅದೊಂದು ಜೀವನವಿಧಾನವೂ ಹೌದು ಎಂಬುದನ್ನು ತೋರಿಸಿಕೊಡಬೇಕು’…
(ಮುಂದೆ ಓದಿ…)

07
ಮಾರ್ಚ್
08

ಒಂದು ಮುಸ್ಸಂಜೆ ನಮ್ಮೊಂದಿಗೆ ನೀವು.

invitation.jpg

ಎಲ್ಲೊ ಮನದ ಮೂಲೆಯಲ್ಲಿ ಹುಟ್ಟುವ ಭಾವಗಳಿಗೆ ತರತರನ ಬಣ್ಣ ಹಚ್ಚಿ, ಪ್ರತಿ ಅಕ್ಷರಗಳಿಗೂ ಜೀವತುಂಬಿ ಬದುಕ ನೀಡುವ ಪುಟ್ಟ ಬರಹಗಾರ ಕವಿ ನಮ್ಮೆಲ್ಲರಲ್ಲಿ ಇದ್ದೆ ಇರುತ್ತಾನೆ. ಎಷ್ಟೊ ಬಾರಿ ಮನದ ಪುಟಗಳ ದಾಟಿ ಬಂದ ಅಕ್ಷರಗಳ ಸಾಲು ಸಾಲು ಡೈರಿಯ ಪುಟಗಳಲಿ ಮರೆಯಾಗುವುದೊ ಅಥವಾ ಬಿಡಿ ಕಾಗದದ ತುಂಬ ಹುಯ್ದಾಡಿ ಕೊನೆಗೆ ರದ್ದಿಯ ಮನೆ ಸೇರುತ್ತಿದ್ದದ್ದು ಹಳೆಯ ಮಾತು. ಇಂದಿನ ಬ್ಲಾಗು ಪ್ರಪಂಚ ನಮ್ಮ ಅನುಭವ ಕನಸುಗಳನ್ನ ಸಮಾನ ಮನಸ್ಕರೊಂದಿದೆ ಹಂಚಿಕೊಳ್ಳಬಲ್ಲ ಪ್ರಭಲ ಮಾಧ್ಯಮವಾಗಿರೊದಂತು ನಿಜ. ಈ ಬ್ಲಾಗು ಪ್ರಪಂಚದ ಭಾವ ಜೀವಿಗಳನ್ನ ಒಂದೆಡೆ ಕಲೆಹಾಕುವ ಮತ್ತು ಅವರ ಅನುಪಮ ಅನುಭವಗಳನ್ನ ಹಂಚಿಕೊಳ್ಳುವೆಡೆಗೆ ನಮ್ಮದೊಂದು ಪುಟ್ಟ ಹೆಜ್ಜೆ ….. ಬನ್ನಿ ನಮ್ಮೊಂದಿಗೆ.

ಒಲವಿನಿಂದ
– ಅಮರ
ಯಾವಾಗ ಬರೆದದ್ದು.

ಈ ತಿಂಗಳ ಪಂಚಾಂಗ.

ಡಿಸೆಂಬರ್ 2017
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
« ಡಿಸೆ    
 123
45678910
11121314151617
18192021222324
25262728293031

p

Powered by eSnips.com